ದಾವಣಗೆರೆ: ಕೊರೊನಾ ವೈರಸ್ಗೆ ಜಿಲ್ಲೆಯಲ್ಲಿ ಮತ್ತಿಬ್ಬರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 11ಕ್ಕೇರಿದೆ. ಜಿಲ್ಲೆಯಲ್ಲಿ 11 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, 356 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ದಾವಣಗೆರೆಯ ಆಜಾದ್ ನಗರ ನಿವಾಸಿ 68 ವರ್ಷದ ವೃದ್ಧ ಹಾಗೂ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 53 ವರ್ಷದ ಪುರುಷ ಕೊರೊನಾದಿಂದ ಮೃತ ಪಟ್ಟಿದ್ದಾರೆ. ವೃದ್ಧ ತೀವ್ರ ಉಸಿರಾಟ ಹಾಗೂ ಕಫದಿಂದ ಬಳಲುತ್ತಿದ್ದರು. ಇನ್ನು ಕೊಟ್ಟೂರಿನ 53 ವರ್ಷದ ಪುರುಷ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ದಾವಣಗೆರೆಯ ಆಸ್ಪತ್ರೆಗೆ ಜುಲೈ 3ರಂದು ಕರೆದುಕೊಂಡು ಬರುವಲ್ಲಿ ಮೃತಪಟ್ಟಿದ್ದರು. ಬಳಿಕ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಪಾಸಿಟಿವ್ ಬಂದಿದೆ.
ಇಂದು ಜಿಲ್ಲೆಯಲ್ಲಿ 11 ಕೋವಿಡ್ ಪಾಸಿಟಿವ್ ಬಂದಿದ್ದು, ಇಬ್ಬರು ಮಕ್ಕಳಿಗೆ ಕೊರೊನಾ ವಕ್ಕರಿಸಿದೆ. ಆಸ್ಪತ್ರೆಯಿಂದ 7 ಮಂದಿ ಸೋಂಕಿನಿಂದ ಮುಕ್ತರಾಗಿ ಬಿಡುಗಡೆ ಹೊಂದಿದ್ದು, ಒಟ್ಟು 301 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 44 ಸಕ್ರಿಯ ಪ್ರಕರಣಗಳಿವೆ.
5 ವರ್ಷದ ಬಾಲಕಿ ಸೇರಿ ಐವರು ಮಹಿಳೆಯರು, ಏಳು ವರ್ಷದ ಬಾಲಕ ಸೇರಿ ಏಳು ಪುರುಷರಿಗೆ ಸೋಂಕು ತಗುಲಿದೆ. ಇನ್ನು ದಾವಣಗೆರೆಯ ಎಸ್. ಎಸ್. ಅಪಾರ್ಟ್ಮೆಂಟ್ನ ನಿವಾಸಿಗಳಾದ ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್ -19 ತಗುಲಿರುವುದು ಖಚಿತವಾಗಿದೆ.