ETV Bharat / state

ಸೌದಿ ಅರೇಬಿಯಾದಲ್ಲಿ ಬಂಧನದಲ್ಲಿದ್ದ ಕಡಬದ ಯುವಕ ತಾಯ್ನಾಡಿಗೆ ಆಗಮನ - ಬ್ಯಾಂಕ್​ ಖಾತೆ ಹ್ಯಾಕರ್​

Chandrashekhar back to home: ಬ್ಯಾಂಕ್​ ಖಾತೆ ಹ್ಯಾಕರ್​ಗಳ ಮೋಸದ ಜಾಲಕ್ಕೆ ಸಿಲುಕಿ ಚಂದ್ರಶೇಖರ್​ ಅವರು 11 ತಿಂಗಳು ಸೌದಿ ಆರೇಬಿಯಾದ ಜೈಲಿನಲ್ಲಿದ್ದರು.

Mother become emotional after seeing Chandrashekhar
ಮಗ ಚಂದ್ರಶೇಖರ್​ ಅವರನ್ನು ನೋಡಿ ಕಣ್ಣೀರಿಟ್ಟ ತಾಯಿ
author img

By ETV Bharat Karnataka Team

Published : Nov 21, 2023, 12:36 PM IST

Updated : Nov 21, 2023, 4:19 PM IST

ಸೌದಿ ಅರೇಬಿಯಾದಲ್ಲಿ ಬಂಧನದಲ್ಲಿದ್ದ ಕಡಬದ ಯುವಕ ತಾಯ್ನಾಡಿಗೆ ಆಗಮನ

ಕಡಬ(ದಕ್ಷಿಣ ಕನ್ನಡ): ಸೌದಿ ಅರೇಬಿಯಾದ ಜೈಲಿನಲ್ಲಿ 11 ತಿಂಗಳ ಕಾಲ ಸೆರೆಮನೆ ವಾಸದ ಬಳಿಕ ಈಗ ಬಂಧಮುಕ್ತವಾಗಿ ಭಾರತಕ್ಕೆ ವಾಪಸಾಗಿರುವ ಕಡಬದ ಚಂದ್ರಶೇಖರ್ ಅವರು ಸುರಕ್ಷಿತವಾಗಿ ಕಡಬ ತಾಲೂಕಿನ ಐತೂರಿನಲ್ಲಿರುವ ತಮ್ಮ ಮನೆ ಸೇರಿದ್ದಾರೆ. ಸೋಮವಾರ ರಾತ್ರಿ ಚಂದ್ರಶೇಖರ್ ಅವರು ವಿಮಾನದಲ್ಲಿ ಸೌದಿಯ ರಿಯಾದ್​ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಅವರ ತಾಯಿ ಹೇಮಾವತಿ, ಅಣ್ಣ ಹರೀಶ್ ಸೇರಿದಂತೆ ಹಲವರು ಅವರನ್ನು ಸ್ವಾಗತಿಸಿದರು. ತಾಯಿ ಸಂತೋಷದಿಂದ ಮಗನನ್ನು ಆಲಂಗಿಸಿ ಬರಮಾಡಿಕೊಂಡರು.

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಚಂದ್ರಶೇಖರ್ ಅವರು, "ಮಾಧ್ಯಮಗಳಲ್ಲಿ ನನ್ನ ಬಂಧನದ ಬಗ್ಗೆ ವರದಿ ಬಂದಿರುವ ಕಾರಣ ನನ್ನ ಬಿಡುಗಡೆ ಸುಲಭವಾಯಿತು. ಸೌದಿ ಅರೇಬಿಯಾದಲ್ಲಿರುವ ಮಂಗಳೂರಿನವರು ತನ್ನ ಬಿಡುಗಡೆಗೆ ನೆರವಾಗಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಇದೀಗ ಅಮ್ಮನನ್ನು ನೋಡಿ ತುಂಬಾ ಖುಷಿಯಾಗಿದೆ. ಮುಂದೆ ನನಗೆ ಬೇರೆ ಉದ್ಯೋಗ ಸಿಗುವ ಭರವಸೆ ಇದೆ. ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿದ್ದಾಗ ತುಂಬಾ ಕಷ್ಟ ಆಗಿತ್ತು. ಗೆಳೆಯರು ಮನೆಯವರು ಸೇರಿದಂತೆ ಯಾರ ಹತ್ತಿರವೂ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ನನಗೆ ಮೊಬೈಲ್ ಕೊಟ್ಟರೂ ಎರಡೇ ನಿಮಿಷ ಮಾತನಾಡಬಹುದಿತ್ತು. ತಪ್ಪು ಮಾಡದೇ ನಾನು ಸೆರೆಮನೆ ವಾಸ ಅನುಭವಿಸಿದೆ" ಎಂದು ಹೇಳಿದರು.

ಸೌದಿಯಲ್ಲಿರುವ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಚಂದ್ರಶೇಖರ್​ ಅವರನ್ನು ಬಂಧಿಸಲಾಗಿತ್ತು. ಚಂದ್ರಶೇಖರ್ ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ಸೌದಿ ರಿಯಾಲ್​( ಭಾರತೀಯ ರೂಪಾಯಿಯಲ್ಲಿ ಸುಮಾರು 5 ಲಕ್ಷ ರೂ.) ವರ್ಗಾವಣೆಯಾಗಿತ್ತು. ಇದು ದಾಖಲೆಗಳನ್ನು ನಕಲಿ ಮಾಡಿ ಹಣ ದೋಚುವ ಕೆಲವು ದುಷ್ಕರ್ಮಿಗಳ ಸಂಚಾಗಿದ್ದು, ಚಂದ್ರಶೇಖರ್ ಅವರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಕೃತ್ಯ ಎಸಗಲಾಗಿತ್ತು. ಚಂದ್ರಶೇಖರ್​ ಅವರ ವಾದವನ್ನು ಪರಿಗಣಿಸದೆ ಪೊಲೀಸರು ಅವರನ್ನು ಜೈಲಿಗೆ ಹಾಕಿದ್ದರು. ಬೆಂಗಳೂರಿನಲ್ಲಿದ್ದ ಚಂದ್ರಶೇಖರ್ ಬಡ್ತಿ ಪಡೆದು ಕೆಲಸಕ್ಕಾಗಿ 2022ರಲ್ಲಿ ಸೌದಿ ಅರೇಬಿಯಾಗೆ ತೆರಳಿದ್ದರು. ಅಲ್ಲಿ ಅಲ್ಪಾನರ್​ ಸೆರಾಮಿಕ್​ ಎಂಬ ಕಂಪನಿಯಲ್ಲಿ ಕೆಲಸಕ್ಕಿದ್ದರು.

2022 ನವೆಂಬರ್​ನಲ್ಲಿ ಅವರು ಮೊಬೈಲ್ ಹಾಗೂ ಸಿಮ್ ಖರೀದಿಗೆಂದು ರಿಯಾದ್​ನ ಅಂಗಡಿಗೆ ತೆರಳಿ, ಸಹಿ, ಬೆರಳಚ್ಚು ಹಾಗೂ ಇತರ ವಿವರಗಳನ್ನು ಎರಡು ಬಾರಿ ನೀಡಿದ್ದರು. ನಂತರ ಮೊಬೈಲ್​ಗೆ ಬಂದ ಕರೆಯೊಂದಕ್ಕೆ, ಹೊಸ ಸಿಮ್​ ಕಾರ್ಡ್​ ಬಗ್ಗೆ ಮಾಹಿತಿ ಜೊತೆಗೆ ಒಟಿಪಿಯನ್ನೂ ಹೇಳಿದ್ದರು. ಆ ವೇಳೆ ಚಂದ್ರಶೇಖರ್​ ಅವರ ಖಾತೆ ಹ್ಯಾಕ್ ಆಗಿತ್ತು. ಇದಾದ ಒಂದು ವಾರದಲ್ಲಿ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್​ ಅವರನ್ನು ಬಂಧಿಸಿದ್ದರು. ಪೊಲೀಸರು ಬಂಧಿಸಲು ಬಂದಾಗಲೇ ಚಂದ್ರಶೇಖರ್​ ಅವರಿಗೆ ಇದು ಅರಿವಿಗೆ ಬಂದಿತ್ತು.

ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದ ಸಂಸದ ನಳಿನ್​ಕುಮಾರ್​ ಕಟೀಲ್; ಹ್ಯಾಕರ್​ಗಳು ನಕಲಿ ಖಾತೆ ಸೃಷ್ಟಿಸಿ ವಂಚಿಸಿದ್ದು, ನಿರಪರಾಧಿ ಯುವಕನ ಬಿಡುಗಡೆಗೆ ಪ್ರಯತ್ನಿಸುವಂತೆ ಒತ್ತಾಯಿಸಿ ವಿದೇಶಾಂಗ ಸಚಿವ ಡಾ. ಎಸ್.​ ಜೈಶಂಕರ್​ ಅವರಿ​ಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರ ಕೂಡ ಬರೆದಿದ್ದರು.

ಕಾನೂನು ತೊಡಕು: ಸೌದಿ ಅರೇಬಿಯಾ ದೇಶದಲ್ಲಿ ಕಟ್ಟುನಿಟ್ಟಿನ ಕಾನೂನುಗಳಿರುವ ಹಿನ್ನೆಲೆಯಲ್ಲಿ ತನ್ನ ತಪ್ಪಿನಿಂದ ಅಲ್ಲದಿದ್ದರೂ ಹಣ ಪಾವತಿಯಾದ ನಂತರವೂ ಚಂದ್ರಶೇಖರ್ ಅವರ ಬಿಡುಗಡೆ ಕಷ್ಟಸಾಧ್ಯವಾಗಿತ್ತು. ಅಲ್ಲಿನ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದ ದಾಖಲೆ ಪತ್ರಗಳನ್ನು ಒದಗಿಸಬೇಕಿತ್ತು. ಕೇಂದ್ರ ಸರ್ಕಾರದ ವತಿಯಿಂದ ಸರಿಯಾದ ಬೆಂಬಲ ಸಿಗದ ಕಾರಣ ಇದು ತಡವಾಗಿದೆ ಎನ್ನುತ್ತಾರೆ ಚಂದ್ರಶೇಖರ್ ಅವರ ಕುಟುಂಬಸ್ಥರು. ಆದರೂ ಉಡುಪಿ ನಿವಾಸಿ ಮತ್ತು ಪ್ರಸ್ತುತ ಸೌದಿ ಅರೇಬಿಯಾದಲ್ಲಿ ವಾಸವಾಗಿರುವ ಪ್ರಕಾಶ್ ಎನ್ನುವವರು ದಾಖಲೆ ಪತ್ರಗಳನ್ನು ಸರಿಪಡಿಸಲು ಅಲ್ಲಿನ ವಕೀಲರ ಮೂಲಕ ನಿರಂತರ ಪ್ರಯತ್ನ ಮಾಡುತ್ತಿದ್ದರು. ಪ್ರಕಾಶ್ ಅವರಿಗೆ ಅಲ್ಲಿನ ಸ್ಥಳೀಯ ಭಾಷೆ ತಿಳಿದಿರುವುದರಿಂದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧ್ಯವಾಗಿತ್ತು.

ಜೊತೆಗೆ ಚಂದ್ರಶೇಖರ್​ ಅವರ ಗೆಳೆಯರು, ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಪ್ರತಿನಿಧಿಗಳು ಸೇರಿ ವಕೀಲರ ಮೊತ್ತ ಮತ್ತು ಇಲಾಖೆಗಳಿಗೆ ಪಾವತಿ ಮಾಡಬೇಕಾದ ದೊಡ್ಡ ಮೊತ್ತದ ದಂಡವನ್ನು ಪಾವತಿಸಿ, ಬಿಡುಗಡೆಗೆ ಶ್ರಮಿಸಿದ್ದಾರೆ. ಈ ಕಾರಣದಿಂದ ಸುಮಾರು ಭಾರತೀಯ ಹಣ 22 ಲಕ್ಷದಷ್ಟೂ ಮೊತ್ತವನ್ನು ಪಾವತಿ ಮಾಡಿ ಚಂದ್ರಶೇಖರ್ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಚಂದ್ರಶೇಖರ್ ಅವರ ಸಹೋದರ ಹರೀಶ್ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಸೌದಿಯ ಜೈಲಿನಿಂದ ಕಡಬದ ಯುವಕ ಕೊನೆಗೂ ಬಂಧಮುಕ್ತ; ಇಂದು ತಾಯ್ನಾಡಿಗೆ ವಾಪಸ್: ಕುಟುಂಬದಲ್ಲಿ ಸಂಭ್ರಮ

Last Updated : Nov 21, 2023, 4:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.