ETV Bharat / state

ಯುವತಿಗೆ ಚುಡಾಯಿಸಿದ ಯುವಕ-  ಎರಡು ಗುಂಪಿನ ನಡುವೆ ಹೊಡೆದಾಟ: ಉದ್ರಿಕ್ತರಿಗೆ ಏಟು ಕೊಟ್ಟ ಪೊಲೀಸರು

author img

By

Published : Feb 17, 2022, 8:45 PM IST

ಮದುವೆ ಕಾರ್ಯಕ್ರಮವೊಂದರಲ್ಲಿ ಯುವತಿಗೆ ಯುವಕನೊಬ್ಬ ಚುಡಾಯಿಸಿದ ಎಂಬ ಕಾರಣಕ್ಕೆ , ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರೊಬ್ಬರ ಮೇಲೆ ಉದ್ರಿಕ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದ್ದು, ಇದರಿಂದ ಕೋಪಗೊಂಡ ಪೊಲೀಸರು ಉದ್ರಿಕ್ತರಿಗೆ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ.

Young man who tease a girl and two group youths fighting over this issue
ಉದ್ರಿಕ್ತರಿಗೆ ಅಟ್ಟಾಡಿಸಿ ಹೊಡೆದ ಪೊಲೀಸರು

ಮಂಗಳೂರು: ಮದುವೆ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಯುವತಿಗೆ ಚುಡಾಯಿಸಿರುವ ಪರಿಣಾಮ ಸ್ಥಳದಲ್ಲಿದ್ದ ಯುವಕರ ಮಧ್ಯೆ ಜಗಳ ನಡೆದಿದೆ. ಈ ವೇಳೆ, ಯುವಕರು ತಡೆಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದು, ಇದರಿಂದ ರೊಚ್ಚಿಗೆದ್ದ ಪೊಲೀಸರು ಅಟ್ಟಾಡಿಸಿಕೊಂಡು ಹೊಡೆದು ಮೂವರನ್ನು ವಶಕ್ಕೆ ಪಡೆದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಶರಣ್(24), ಪ್ರಮೋದ್(24), ಅಜೇಶ್(22) ಬಂಧಿತ ಆರೋಪಿಗಳು.

ಉದ್ರಿಕ್ತರಿಗೆ ಹೊಡೆದ ಪೊಲೀಸರು

ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕ್ಲಿಕ್ ಸಭಾಂಗಣದಲ್ಲಿ ಇಂದು ಕೋಟೆಕಾರು ಮಾಡೂರಿನ ವಧು ಮತ್ತು ಕೇರಳದ ಕಾಸರಗೋಡಿನ ವರನಿಗೆ ಮದುವೆ ಏರ್ಪಟ್ಟಿತ್ತು. ಈ ವಿವಾಹ ಸಮಾರಂಭದಲ್ಲಿ ವರನ ಕಡೆಯ ಯುವಕನೊಬ್ಬ ವಧುವಿನ‌ ಕಡೆಯ ಯುವತಿಗೆ ಚುಡಾಯಿಸಿದ ಎನ್ನಲಾಗಿದೆ. ಇದರಿಂದ ಆಕ್ರೋಶಿತನಾದ ಯುವತಿಯ ಸಹೋದರ ಚುಡಾಯಿಸಿದವನ ಮೇಲೆ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: ಪ್ರತಿ ಕ್ವಿಂಟಾಲ್ ರಾಗಿಗೆ 4 ಸಾವಿರ ರೂಪಾಯಿ ಕೊಡಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಇದರಿಂದ ಪರಸ್ಪರ ಯುವಕರ ಗುಂಪೊಂದರ ಮಧ್ಯೆ ಬೀದಿ ಕಾಳಗ ನಡೆದಿದೆ. ಆಗ ಸ್ಥಳದಲ್ಲಿ ಉಳ್ಳಾಲ ಉರುಸ್ ಬಂದೋಬಸ್ತಿನಲ್ಲಿದ್ದ ಪೊಲೀಸರೊಬ್ಬರಿಗೂ ಉದ್ರಿಕ್ತರು ಕುತ್ತಿಗೆ ಹಿಚುಕಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತಕ್ಷಣ ಸ್ಥಳದಲ್ಲಿದ್ದ ಇತರ ಪೊಲೀಸರು ಸೇರಿ ಹಲ್ಲೆಕೋರರನ್ನು ಅಟ್ಟಾಡಿಸಿ ಹೊಡೆದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.‌ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.