ETV Bharat / state

ಚಾರ್ಜ್​​ಗೆ ಹಾಕಿದ್ದ ಮೊಬೈಲ್ ತೆಗೆಯುವಾಗ ಕರೆಂಟ್ ಶಾಕ್ ಹೊಡೆದು ಬಾಲಕ ಸಾವು

ಮೊಬೈಲ್​ ಚಾರ್ಜ್​ನಿಂದ ತೆಗೆಯುವಾಗ ಸ್ವಿಚ್ಡ್​​​ ಬೋರ್ಡ್​​​​​ನ ವೈರ್​​ನಿಂದ ವಿದ್ಯುತ್​ ತಗುಲಿ ಬಾಲಕ ಮರಣ ಹೊಂದಿದ ಘಟನೆ ದಕ್ಷಿಣ ಕನ್ನಡದ ನೆಲ್ಯಾಡಿಯಲ್ಲಿ ನಡೆದಿದೆ.

ಚಾರ್ಜ್​​ಗೆ ಹಾಕಿದ್ದ ಮೊಬೈಲ್ ತೆಗೆಯುವಾಗ ಕರೆಂಟ್ ಶಾಕ್ ಹೊಡೆದು ಯುವಕ ಸಾವು

author img

By

Published : Jul 26, 2022, 10:49 PM IST

Updated : Jul 27, 2022, 10:20 AM IST

ನೆಲ್ಯಾಡಿ (ದಕ್ಷಿಣ ಕನ್ನಡ) : ಆಕಸ್ಮಿಕ ವಿದ್ಯುತ್ ಶಾಕ್‌ಗೆ ಒಳಗಾಗಿ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಅಡ್ಡಹೊಳೆ ನಿವಾಸಿ ಮೋನಚ್ಚನ್ ಎಂಬವರ ಪುತ್ರ ರೋಫಿನ್(16)ಮೃತಪಟ್ಟ ಬಾಲಕ.

ಜಾರ್ಜ್‌ಗೆ ಇಟ್ಟಿದ್ದ ಮೊಬೈಲ್‌ಗೆ ತೆಗೆಯುವ ವೇಳೆ ಸ್ವಿಚ್ ಬೋರ್ಡಿನಿಂದ ವಿದ್ಯುತ್ ವೈರ್ ಕೈಗೆ ತಾಗಿದೆ. ಈ ಸಮಯದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ರೋಫಿನ್ ಅಸ್ವಸ್ಥನಾಗಿದ್ದ. ತಕ್ಷಣವೇ ಮನೆಯವರು ಈತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಹಾಗೂ ಕಡಬ, ನೆಲ್ಯಾಡಿ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ನವ ವರನ ಮನೆ ಕುಸಿದು13 ಜನರಿಗೆ ಗಾಯ: ಶಾಸಕ ಅಶೋಕ ನಾಯ್ಕ ಭೇಟಿ ಪರಿಶೀಲನೆ

Last Updated : Jul 27, 2022, 10:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.