ETV Bharat / state

ಬೆಳ್ತಂಗಡಿಯಲ್ಲಿ ಯಕ್ಷ ಸಾಂಗತ್ಯ ಸಪ್ತಕ ತಾಳ ಮದ್ದಳೆ ಯಕ್ಷಾವತರಣಕ್ಕೆ ಚಾಲನೆ - ಯಕ್ಷಗಾನ ಕ್ಷೇತ್ರದಲ್ಲಿ ತಂತ್ರಜ್ಞಾನ

ಉಭಯ ತಿಟ್ಟುಗಳ ಕಲಾವಿದರ ಸಹಕಾರದಲ್ಲಿ ಯಕ್ಷ ಸಾಂಗತ್ಯ ಸಪ್ತಕ ತಾಳಮದ್ದಳೆ ಯಕ್ಷಾವತರಣ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.

talamaddale
talamaddale
author img

By

Published : Jun 4, 2020, 4:18 PM IST

Updated : Aug 30, 2022, 10:49 AM IST

ಬೆಳ್ತಂಗಡಿ (ದಕ್ಷಿಣ ಕನ್ನಡ): ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ, ಶ್ರೀ ಸುಬ್ರಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ಉಭಯ ತಿಟ್ಟುಗಳ ಕಲಾವಿದರ ಸಹಕಾರದಲ್ಲಿ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ ಯಕ್ಷಾವತರಣ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಯಶೋವರ್ಮ ಮಾತನಾಡಿ, ಕೊರೊನಾದ ಸಂದರ್ಭದಲ್ಲಿ ಮನಸ್ಸು ಗೊಂದಲದಲ್ಲಿತ್ತು. ಇಂತಹ ಸಮಯದಲ್ಲಿ ಕಲಾ ಆಹ್ಲಾದಕರನ್ನು ತಾಳಮದ್ದಳೆ ಸಂತೋಷಮಯಗೊಳಿಸಿದೆ ಎಂದರು.

ಸಂಘಟಕರು ಯಕ್ಷಾವತರಣ ಸಂಘಟಿಸುವ ಮೂಲಕ ಕಲಾರಾಧಕರ ತುಮುಲ ದೂರಮಾಡಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತಂತ್ರಜ್ಞಾನದ ಪ್ರಯೋಗ ಅತ್ಯಂತ ಯಶಸ್ವಿಯಾಗಿಸುವಲ್ಲಿ ಕಾರ್ಯವಹಿಸಿದ ಸಂಘಟಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಉಜಿರೆ ಹಿರಿಯ ಉದ್ಯಮಿ ಸುಬ್ರಾಯ ಶೆಣೈ, ರೋಟರಿ ಸಂಸ್ಥೆ ನಿಯೋಜಿತ ಉಪ ರಾಜ್ಯಪಾಲ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ರೋಟರಿ ಅಧ್ಯಕ್ಷ ಜಯರಾಮ್, ನಿಯೋಜಿತ ಅಧ್ಯಕ್ಷ ಬಿ.ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ., ಸ್ಥಾನಿಕ ಸಭಾದ ಅಧ್ಯಕ್ಷ ದಿನೇಶ್ ಕುಮಾರ್, ಹಿರಿಯ ಕಲಾವಿದ ಡಾ.ಪ್ರಭಾಕರ ಜೋಶಿ, ಭಾಗವತ ಪಟ್ಲ ಸತೀಶ ಶೆಟ್ಟಿ ಉಪಸ್ಥಿತರಿದ್ದರು.

ಕುರಿಯ ಪ್ರತಿಷ್ಠಾನದ ಸಂಚಾಲಕ ಅಶೋಕ್ ಭಟ್, ಕಲಾವಿದ ವಾದಿರಾಜ ಕಲ್ಲೂರಾಯ ಉಪಸ್ಥಿತರಿದ್ದರು. ಪ್ರಥಮ ದಿನ ಅತಿಕಾಯ ಮೋಕ್ಷ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ ಮುಮ್ಮೇಳದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಜಬ್ಬಾರ್ ಸಮೋ ಸಂಪಾಜೆ, ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ವಾದಿರಾಜ ಕಲ್ಲೂರಾಯ ಭಾಗವಹಿಸಿದ್ದರು.

Last Updated : Aug 30, 2022, 10:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.