ಮಂಗಳೂರು: ಗೋಡೆ ನಿರ್ಮಾಣ ಮಾಡುತ್ತಿರುವಾಗ ಗುಡ್ಡ ಕುಸಿದು ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಕುಡುಪುವಿನಲ್ಲಿ ನಡೆದಿದೆ.
ಮಂಗಳೂರಿನ ಮೂಡುಶೆಡ್ಡೆಯ ಶ್ಯಾಮ್ (47) ಮೃತ ದುರ್ದೈವಿ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಡುಪು ದೇವಸ್ಥಾನದ ಬಳಿಯ ಖಾಸಗಿ ಕಾಲೇಜಿನ ಆವರಣದ ಗೋಡೆ ಕಾಮಗಾರಿ ವೇಳೆ ಈ ದುರಂತ ಸಂಭವಿಸಿದೆ. ಈ ಸಂಬಂಧ ಮಂಗಳೂರಿನ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.