ETV Bharat / state

ಓಎಲ್ಎಕ್ಸ್​ನಲ್ಲಿ ಗ್ರೈಂಡರ್ ಮಾರಲು ಹೋಗಿ 64 ಸಾವಿರ ರೂ. ಕಳೆದುಕೊಂಡ ಮಹಿಳೆ!

ಓಎಲ್ಎಕ್ಸ್​ ಮೂಲಕ ಮಹಿಳೆಯೊಬ್ಬಳು ಹಣ ಕಳೆದುಕೊಂಡಿದ್ದಾಳೆ. ಜಾಹೀರಾತು ನೋಡಿದ ವ್ಯಕ್ತಿ ಆಕೆಯ ವಾಟ್ಸಪ್ ನಂಬರ್ ಪಡೆದುಕೊಂಡು ಕ್ಯೂ ಆರ್ ಕೋಡ್ ಮೂಲಕ ಹಣ ಲಪಟಾಯಿಸಿದ್ದಾನೆ.

Woman loses 64 thousand rupees in cyber fraud
ಸಂಗ್ರಹ ಚಿತ್ರ
author img

By

Published : Dec 24, 2020, 3:34 AM IST

ಮಂಗಳೂರು: ಓಎಲ್ಎಕ್ಸ್​ನಲ್ಲಿ ಗ್ರೈಂಡರ್ ಮಾರಾಟ ಮಾಡಲು ಹೋಗಿ ಮಹಿಳೆಯೊಬ್ಬರು ರೂ. 64650 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಮಹಿಳೆಯೊಬ್ಬರು ಹಳೆ ಗ್ರೈಂಡರ್ ಮಾರಾಟ ಮಾಡಲು ಇಚ್ಚಿಸಿ ಓಎಲ್ಎಕ್ಸ್​ನಲ್ಲಿ ಜಾಹೀರಾತು ಹಾಕಿದ್ದರು. ಇದನ್ನು ನೋಡಿ ಓರ್ವ ವ್ಯಕ್ತಿ ಖರೀದಿಸುವುದಾಗಿ ಓಎಲ್ಎಕ್ಸ್​ನಲ್ಲಿ ಚಾಟ್ ಮಾಡಿ ಮಹಿಳೆಯ ವಾಟ್ಸಪ್ ನಂಬರ್ ಪಡೆದುಕೊಂಡಿದ್ದಾನೆ.

ಇದನ್ನೂ ಓದಿ : OLXನಲ್ಲಿ ಮೋಸ ಹೋಗಿ ತಾನೂ ವಂಚನೆಗೆ ಯತ್ನಿಸಿದ ಆರೋಪಿ ಅರೆಸ್ಟ್‌

ಹಣ ಕಳುಹಿಸಿಕೊಡುವುದಾಗಿ ತಿಳಿಸಿ ಕ್ಯೂ ಆರ್ ಕೋಡ್ ವಾಟ್ಸಪ್​​ಗೆ ಕಳುಹಿಸಿಕೊಟ್ಟಿದ್ದಾನೆ. ಅದನ್ನು ಸ್ಕ್ಯಾನ್ ಮಾಡಲು ಹೇಳಿದಂತೆ ಮಹಿಳೆ ಮಾಡಿದಾಗ ಮಹಿಳೆಯ ಎರಡು ಬ್ಯಾಂಕ್ ಖಾತೆಯಿಂದ 64650. ರೂ ಲಪಟಾಯಿಸಿದ್ದಾನೆ. ಈ ಬಗ್ಗೆ ಮಹಿಳೆಯ ಪುತ್ರಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.