ETV Bharat / state

ಪತಿಯ ಅಂತ್ಯಸಂಸ್ಕಾರ ನಡೆಸಲು ಅಸಹಾಯಕಳಾದ ಪತ್ನಿ: ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಮಣಿವಣ್ಣನ್​

author img

By

Published : Jan 13, 2021, 7:37 PM IST

ನಿರ್ಗತಿಕ ಮಹಿಳೆಯೊಬ್ಬರು ಮೃತಪಟ್ಟ ಪತಿಯ ಅಂತ್ಯಸಂಸ್ಕಾರ ಮಾಡಲು ಯಾರೂ ಇಲ್ಲದೇ ಅಸಹಾಯಕಳಾಗಿರುವ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ವಿಷಯ ತಿಳಿದ ಸರ್ಕಾರದ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮಹಿಳೆಯ ಸಹಾಯಕ್ಕೆ ಧಾವಿಸುವಂತೆ ಸೂಚನೆ ನೀಡಿ ಮಾನವೀಯತೆ ಮೆರೆದಿದ್ದಾರೆ.

women suffers to do her husband funeral
ಡಿಸಿಗೆ ಸರ್ಕಾರ ಸೂಚನೆ

ಮಂಗಳೂರು: ಪತಿಯ ಅಂತ್ಯಸಂಸ್ಕಾರ ನಡೆಸಲು ಅಸಹಾಯಕಳಾದ ಮಹಿಳೆಗೆ ನೆರವು ನೀಡುವಂತೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್​ ಮಣಿವಣ್ಣನ್ ಪಿ. ಅವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

women suffers to do her husband funeral
ಡಿಸಿಗೆ ಸರ್ಕಾರ ಸೂಚನೆ
ಭಟ್ಕಳ ಮೂಲದ ಪರಮೇಶ್ವರಿ(39) ಎಂಬುವರ ಪತಿ ಶ್ರೀಧರ್ ಮಹಾಮಾರಿ ಕ್ಯಾನ್ಸರ್​ನಿಂದಾಗಿ ಮಂಗಳವಾರ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಮ್ಮವರೆಂದು ಯಾರೂ ಇಲ್ಲದ ನಿರ್ಗತಿಕ ಪರಮೇಶ್ವರಿ ಅವರು ದಿಕ್ಕು ತೋಚದೆ 3 ವರ್ಷದ ಪುಟ್ಟ ಮಗುವಿನೊಂದಿಗೆ ಐಸಿಯು ಹೊರಗಡೆ ಅಸಹಾಯಕರಾಗಿದ್ದಾಗ, ಎಂ.ಫ್ರೆಂಡ್ಸ್ ಕಾರುಣ್ಯ ತಂಡ ಅಂತ್ಯಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಲಭ್ಯವಾದ ಕೂಡಲೇ ಸರ್ಕಾರದ ಕಾರ್ಯದರ್ಶಿ ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸುವಂತೆ ದ.ಕ.ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.