ETV Bharat / state

ಬಸ್​​​​ನಿಂದ ಬಿದ್ದು ಮಹಿಳೆ ಸಾವು : ಚಾಲಕ ಮತ್ತು ನಿರ್ವಾಹಕನ ವಿರುದ್ಧ ಪ್ರಕರಣ ದಾಖಲು - ಈಟಿವಿ ಭಾರತ ಕನ್ನಡ

ತಿರುವಿನಲ್ಲಿ ಬಸ್​ನಿಂದ ಹೊರಗೆ ಬಿದ್ದು ಮಹಿಳೆ ಸಾವನ್ನಪ್ಪಿದ್ದು, ಈ ಸಂಬಂಧ ಚಾಲಕ ಮತ್ತು ನಿರ್ವಾಹಕನ ಮೇಲೆ ಕಡಬ ಪೊಲೀಸ್​ ಠಾಣೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದ ಕೇಸ್​ ದಾಖಲಾಗಿದೆ.

Woman dies after falling from bus
ಬಸ್ಸಿನಿಂದ ಬಿದ್ದು ಮಹಿಳೆ ಸಾವು
author img

By

Published : Nov 25, 2022, 9:32 PM IST

Updated : Nov 26, 2022, 7:52 AM IST

ಕಡಬ(ದಕ್ಷಿಣ ಕನ್ನಡ) : ಧರ್ಮಸ್ಥಳ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪಂಚಮಮುಖಿ ದೇವಸ್ಥಾನದ ಬಳಿ ಕೆಎಸ್‌‌ಆರ್‌ಟಿಸಿ ಬಸ್‌ನಿಂದ ಬಿದ್ದು ಬೆಂಗಳೂರು ಮೂಲದ ಮಹಿಳೆ ಮೃತಪಟ್ಟ ಘಟನೆ ನವೆಂಬರ್ 21 ರಂದು ನಡೆದಿದೆ. ಈ ಘಟನೆ ಸಂಬಂಧ ಬಸ್‌ನ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಕಡಬ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣದಿಂದ ಧರ್ಮಸ್ಥಳಕ್ಕೆ ಕೆಎಸ್ಆರ್‌ಟಿಸಿ ಬಸ್​​​ನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಬೆಂಗಳೂರು ದಾಸರಹಳ್ಳಿ ಮೂಲದ ರತ್ನಮ್ಮ (58) ಎಂಬ ಮಹಿಳೆ ತಿರುವಿನಲ್ಲಿ ಬಸ್​ನಿಂದ ಹೊರ ಬಿದ್ದಿದ್ದಾರೆ. ಈ ವೇಳೆ, ರತ್ನಮ್ಮ ಅವರಿಗೆ ಗಂಭೀರ ಗಾಯಗಳಾಗಿವೆ. ಅಲ್ಲೇ ಉಪಚರಿಸಿ ಅವರನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗೆ ರತ್ನಮ್ಮ ಸಾವನ್ನಪ್ಪಿದ್ದರು.

ಈ ಘಟನೆಗೆ ಸಂಬಂಧ ರಾಜಣ್ಣ ಎಂಬುವವರು ಬಸ್​​​ನ ನಿರ್ವಾಹಕ ಗುರುನಾಥ ಹಾಗೂ ಚಾಲಕ ಅಬ್ದುಲ್ ರಝಾಕ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೇಸ್​ ದಾಖಲಿಸಿದ್ದಾರೆ.

ಇದನ್ನೂ ಓದಿ: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಕಾರು: ಆಶ್ಚರ್ಯಕರ ರೀತಿಯಲ್ಲಿ ದಂಪತಿ ಪಾರು

Last Updated : Nov 26, 2022, 7:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.