ETV Bharat / state

ಸೂರಿಲ್ಲವೆಂದು ಸ್ಮಶಾನದಲ್ಲೇ ಮನೆ ಕಟ್ಟಿ ಗ್ರಾಪಂ ಅಧಿಕಾರಿಗಳಿಗೆ ಅಂಜಲಿಲ್ಲವಯ್ಯ..

ಗ್ರಾಪಂ ಅಧಿಕಾರಿಗಳಿಂದ ನನಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ತನಗೆ ಸೂರು ಬೇಕೆಂದು ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಹೂಡಿದ್ದೇನೆ ಎಂದಿದ್ದಾರೆ. ಆದರೆ, ಜಯಂತಿ ಅವರು ಸ್ಮಶಾನಕ್ಕಾಗಿ ಮೀಸಲಿರಿಸಿದ್ದ ಜಾಗದಲ್ಲಿ ಶೆಡ್ ನಿರ್ಮಿಸಿದ್ದು ಸರಿಯಲ್ಲ ಎಂದು ಪಿಡಿಒ ಹೇಳಿದ್ದಾರೆ..

woman-built-a-tent-in-the-cemetery-space
ಸ್ಮಶಾನದ ಜಾಗದಲ್ಲಿ ಟೆಂಟ್ ಹಾಕಿದ ಮಹಿಳೆ
author img

By

Published : Jun 14, 2021, 9:58 PM IST

Updated : Jun 14, 2021, 10:19 PM IST

ಬಂಟ್ವಾಳ : ಮನೆ-ನಿವೇಶನ ಕೊಟ್ಟಿಲ್ಲವೆಂದು ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಿಂಜ ಎಂಬಲ್ಲಿ ಇಬ್ಬರು ಪುತ್ರಿಯರೊಂದಿಗೆ ವಿಧವೆಯೊಬ್ಬರು ಸ್ಮಶಾನಕ್ಕಾಗಿ ಕಾದಿರಿಸಿದ ಜಾಗದಲ್ಲಿ ತಾತ್ಕಾಲಿಕವಾಗಿ ಶೀಟ್ ಹಾಕಿ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ನಡೆದಿದೆ.

ಅನಂತಾಡಿಯ ದಿ.ರಾಮಚಂದ್ರ ದಾಸ್ ಎಂಬುವರ ಪತ್ನಿ ಜಯಂತಿ ಎಂಬುವರು ಬಾಡಿಗೆ ಮನೆಯಲ್ಲಿದ್ದರು. ಇದೀಗ ಅನಂತಾಡಿ ಗ್ರಾಪಂನಿಂದ ಸ್ಮಶಾನಕ್ಕಾಗಿ ಕಾದಿರಿಸಿದ 52 ಸೆಂಟ್ಸ್ ಜಾಗದಲ್ಲಿ ಭಾನುವಾರ ಶೀಟ್ ಹಾಕಿ, ಸುತ್ತಲೂ ಸ್ಕ್ರೀನ್ ಹಾಕಿ ವಾಸ್ತವ್ಯ ಹೂಡಿದ್ದಾರೆ. ಜಯಂತಿ ತಮಗೆ ಮನೆ ಒದಗಿಸಿಕೊಡಬೇಕೆಂದು ಅನಂತಾಡಿ ಪಂಚಾಯತ್ ಗ್ರಾಮಸಭೆಯಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಮಾತನಾಡಿರುವ ಜಯಂತಿ ಅವರು, ಗ್ರಾಪಂ ಅಧಿಕಾರಿಗಳಿಂದ ನನಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ತನಗೆ ಸೂರು ಬೇಕೆಂದು ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಹೂಡಿದ್ದೇನೆ ಎಂದಿದ್ದಾರೆ. ಆದರೆ, ಜಯಂತಿ ಅವರು ಸ್ಮಶಾನಕ್ಕಾಗಿ ಮೀಸಲಿರಿಸಿದ್ದ ಜಾಗದಲ್ಲಿ ಶೆಡ್ ನಿರ್ಮಿಸಿದ್ದು ಸರಿಯಲ್ಲ ಎಂದು ಪಿಡಿಒ ಹೇಳಿದ್ದಾರೆ.

ಓದಿ:ನಾನೇ ಮುಂದಿನ ಸಿಎಂ... ಕೆಲವರು ಸೂಟುಬೂಟು ಹೊಲಿಸಿ ರೆಡಿಯಾಗಿದ್ದಾರೆ: ಯತ್ನಾಳ್​​ ವಿರುದ್ಧ ರೇಣುಕಾಚಾರ್ಯ ವ್ಯಂಗ್ಯ

Last Updated : Jun 14, 2021, 10:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.