ETV Bharat / lifestyle

ಕಾರ್ತಿಕ ಮಾಸದ ವಿಶೇಷ ರೆಸಿಪಿ: ನಿಮಗಾಗಿ ಈರುಳ್ಳಿ & ಬೆಳ್ಳುಳ್ಳಿ ಇಲ್ಲದ ಸಖತ್ ಟೇಸ್ಟಿ 'ಆಲೂ ಕುರ್ಮಾ'! - HOW TO MAKE ALOO KURMA

ಕಾರ್ತಿಕ ಮಾಸದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ನದವರಿಗೆ ಉತ್ತಮ ಆಯ್ಕೆ ರೆಸಿಪಿ ಇಲ್ಲಿದೆ. ಕಡಿಮೆ ಪದಾರ್ಥಗಳೊಂದಿಗೆ ಇದನ್ನು ಮನೆಯಲ್ಲಿಯೇ ತುಂಬಾ ರುಚಿಕರವಾಗಿ ತಯಾರಿಸಬಹುದು. ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಸಖತ್ ಟೇಸ್ಟಿಯಾದ 'ಆಲೂ ಕುರ್ಮಾ' ಮಾಡುವುದು ಹೇಗೆ?

ALOO KURMA WITHOUT ONION AND GARLIC  HOW TO MAKE ALOO KURMA  ALOO KURMA MAKING WITHOUT ONION
ಈರುಳ್ಳಿ & ಬೆಳ್ಳುಳ್ಳಿ ಇಲ್ಲದ ಸಖತ್ ಟೇಸ್ಟಿ 'ಆಲೂ ಕುರ್ಮಾ' (ETV Bharat)
author img

By ETV Bharat Lifestyle Team

Published : Nov 14, 2024, 8:19 PM IST

How to Make Aloo Kurma Without Onion and Garlic: ಕಾರ್ತಿಕ ಮಾಸದ ವಿವಿಧ ಪೂಜೆಗಳು ಮತ್ತು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಸ್ನಾನ, ಪೂಜೆ, ದೀಪಾರಾಧನೆ, ಉಪವಾಸ ಸೇರಿದಂತೆ ಎಲ್ಲೆಡೆಯೂ ಆಧ್ಯಾತ್ಮದ ಛಾಯೆ ಆವರಿಸುತ್ತದೆ. ಈ ತಿಂಗಳಲ್ಲಿ ಅನೇಕ ಜನರು ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ದೂರ ಉಳಿಯುತ್ತಾರೆ. ವ್ರತ ಆಚರಣೆ ಮಾಡುವವರಿಗಾಗಿಯೇ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೇ ರುಚಿಕರವಾದ ಅಡುಗೆಗೆಗಳನ್ನು ತಯಾರಿಸಬೇಕು ಎಂದು ಬಯಸಿದರೆ, ಈ ರೆಸಿಪಿ ಅವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಅದುವೇ ಅಲು ಕುರ್ಮಾ. ಈ ರೆಸಿಪಿಯನ್ನು ಕೆಲವೇ ಪದಾರ್ಥಗಳೊಂದಿಗೆ ಕಡಿಮೆ ಸಮಯದಲ್ಲಿ ತಯಾರಿಸಬಹುದು. ರುಚಿ ಮಾತ್ರ ಸಖತ್​ ಆಗಿರುತ್ತದೆ. ಹಾಗಾದರೆ, ಈ ಸೂಪರ್ ಟೇಸ್ಟಿಯಾದ ರೆಸಿಪಿಗೆ ಬೇಕಾಗುವ ಪದಾರ್ಥಗಳು ಯಾವುವು? ಇದನ್ನು ಹೇಗೆ ತಯಾರಿಸಬೇಕೆಂದು ನೋಡೋಣ.

ಬೇಕಾಗುವ ಪದಾರ್ಥಗಳು:

  • ಬೇಯಿಸಿದ ಆಲೂಗಡ್ಡೆ - 3
  • ಟೊಮೆಟೊ - 2
  • ಶುಂಠಿ - ಅರ್ಧ ಇಂಚು
  • ಹಸಿಮೆಣಸಿನಕಾಯಿ - 2
  • ಗಸಗಸೆ ಬೀಜಗಳು - 1 ಚಮಚ
  • ಎಣ್ಣೆ - 2 ಟೀಸ್ಪೂನ್
  • ಜೀರಿಗೆ - ಅರ್ಧ ಟೀಸ್ಪೂನ್
  • ಒಣ ಮೆಣಸಿನಕಾಯಿ - 2
  • ಕರಿಬೇವಿನ ಎಲೆಗಳು - 2
  • ಕಡಲೆ ಹಿಟ್ಟು - ಅರ್ಧ ಚಮಚ
  • ಉಪ್ಪು - ರುಚಿಗೆ
  • ಅರಿಶಿನ - ಕಾಲು ಟೀಸ್ಪೂನ್
  • ಖಾರದ ಪುಡಿ - ಅಗತ್ಯಕ್ಕೆ ತಕ್ಕಷ್ಟು
  • ಧನಿಯಾ ಪುಡಿ - ಅರ್ಧ ಟೀಸ್ಪೂನ್
  • ಗರಂ ಮಸಾಲಾ - ಅರ್ಧ ಟೀಸ್ಪೂನ್
  • ಕೊತ್ತಂಬರಿ ಸೊಪ್ಪು - ಸ್ವಲ್ಪ

ಸಿದ್ಧಪಡಿಸುವ ವಿಧಾನ ಹೇಗೆ?:

  • ಮೊದಲು ಆಲೂಗಡ್ಡೆ ಕುದಿಸಿ. ನಂತರ ಅವುಗಳನ್ನು ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಅದರಲ್ಲಿನ ಎರಡು ತುಂಡುಗಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಆಗಿ ರುಬ್ಬಿಕೊಳ್ಳಿ.
  • ಈಗ ಟೊಮೆಟೊ, ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ತೆಳುವಾಗಿ ಕತ್ತರಿಸಿ. ಹಾಗೆಯೇ ಗಸಗಸೆಯನ್ನು ನೀರಿನಲ್ಲಿ ನೆನೆಸಿಡಿ.
  • ಈಗ ಮೊದಲು ಮಿಕ್ಸರ್ ಜಾರ್ ತೆಗೆದುಕೊಂಡು ಟೊಮೆಟೊ ತುಂಡುಗಳು, ಶುಂಠಿ, ಹಸಿಮೆಣಸಿನಕಾಯಿ ಮತ್ತು ನೆನೆಸಿದ ಗಸಗಸೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ಒಲೆ ಆನ್ ಮಾಡಿ ಮತ್ತು ಪ್ಯಾನ್ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
  • ನಂತರ ಕಡಲೆ ಬೇಳೆ ಹಿಟ್ಟು ಸೇರಿಸಿ ಮತ್ತು ಇನ್ನೊಂದು ನಿಮಿಷ ಫ್ರೈ ಮಾಡಿ.
  • ಅದರ ನಂತರ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಅರಿಶಿನ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಮತ್ತು ಮಸಾಲೆಗಳನ್ನು ಹಾಕಿ ಫ್ರೈ ಮಾಡಿ.
  • ಅದರ ನಂತರ ಟೊಮೆಟೊ ಮಿಶ್ರಣವನ್ನು ಸೇರಿಸಿ ಮತ್ತು ಎಣ್ಣೆಯು ಮೇಲಕ್ಕೆ ಬರುವವರೆಗೆ ಹುರಿಯಿರಿ. ಒಂದು ಕಪ್ ನೀರು ಹಾಕಿ ಕಲಸಿದ ನಂತರ ಆಲೂಗೆಡ್ಡೆ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ. ಬಳಿಕ ಬೇಯಿಸಿದ ಆಲೂಗಡ್ಡೆ ತುಂಡುಗಳನ್ನು ಹಾಕಿ ಮುಚ್ಚಳವನ್ನು ಹಾಕಿ ಮಧ್ಯಮ ಉರಿಯನ್ನು ಇಡಿ. ಎಣ್ಣೆ ಮೇಲಕ್ಕೆ ತೇಲುವವರೆಗೆ ಬೇಯಿಸಿ.
  • ಕುರ್ಮಾ ಸಿದ್ಧವಾದಾಗ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಅದರ ಮೇಲೆ ಹಾಕಿ. ಈಗ ಬಿಸಿಯಾಗಿ ಆಲೂ ಕುರ್ಮಾವನ್ನು ತಟ್ಟೆಗೆ ಬಡಿಸಿ. ಚಪಾತಿ, ಪೂರಿ, ಪರೋಟ, ಅನ್ನ... ಯಾವುದರ ಜೊತೆ ಬೇಕಾದರೂ ಸೇವಿಸದರೂ ತುಂಬಾ ಚೆನ್ನಾಗಿರುತ್ತದೆ.

ಇದನ್ನೂ ಓದಿ: ರುಚಿ ಮತ್ತು ಆರೋಗ್ಯಕರ: ಚಳಿಗಾಲಕ್ಕೆ ಉಪಯುಕ್ತ ಸೂಪ್​, ಕೆಲವೇ ನಿಮಿಷಗಳಲ್ಲಿ ಮಾಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.