ETV Bharat / state

ತೊಕ್ಕೊಟ್ಟು ಜಂಕ್ಷನ್​ನ ಮದ್ಯ ಪ್ರಿಯರಿಗೆ ಶಾಮಿಯಾನ ವ್ಯವಸ್ಥೆ..

ಊಟಕ್ಕಿಲ್ಲದೆ ಸ್ಥಿತಿಯಲ್ಲಿದ್ದ ಮಂದಿಗೆ ಸ್ಥಳೀಯ ದಾನಿಗಳು ನೀಡಿದ ಅನ್ನಾಹಾರವನ್ನು ಶ್ರೀ ಸಾಯಿ ಪರಿವಾರ್ ತೊಕ್ಕೊಟ್ಟು ಇವರು ವಿತರಿಸುತ್ತಿದ್ದರು. ಇವರಿಂದ ಆಹಾರ ಪಡೆಯುತ್ತಿದ್ದ ಮಂದಿ ಇಂದು ಮದ್ಯಕ್ಕಾಗಿ ಸಾಲಿನಲ್ಲಿ ನಿಂತಿರುವುದು ಬೇಸರ ತಂದಿದೆ ಎನ್ನುತ್ತಾರೆ ದಾನಿಗಳು.

wine shop owner arranged Shamiana
ವೈನ್ ಶಾಪ್​ ಮಾಲೀಕರಿಂದ ಶಾಮಿಯಾನ ವ್ಯವಸ್ಥೆ
author img

By

Published : May 4, 2020, 8:09 PM IST

ಉಳ್ಳಾಲ : ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವೈನ್‍ಶಾಪ್ ಮಾಲೀಕರು ಗ್ರಾಹಕರಿಗೆ ಶಾಮಿಯಾನ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ್ದಾರೆ.

ತೊಕ್ಕೊಟ್ಟು ಜಂಕ್ಷನ್​ನ ಮದ್ಯ ಪ್ರಿಯರಿಗೆ ಶಾಮಿಯಾನ ವ್ಯವಸ್ಥೆ..
ಮದ್ಯದಂಗಡಿ ತೆರೆಯಲು ಅನುಮತಿ ನೀಡುತ್ತಿದ್ದಂತೆ ತೊಕ್ಕೊಟ್ಟು ಹೈ ಸ್ಪಿರಿಟ್ಸ್ ವೈನ್ ಅಂಗಡಿ ಮಾಲೀಕರು ಗ್ರಾಹಕರಿಗೆ ನಿಲ್ಲಲು ಸುಣ್ಣದ ಗೆರೆಯನ್ನು ಹಾಕಿ ಸಿದ್ಧತೆಯನ್ನು ನಡೆಸಿದ್ದರು. ಅಲ್ಲದೇ ಗ್ರಾಹಕರು ಬಿಸಿಲಿನಲ್ಲಿ ಕಾದು ಸುಸ್ತಾಗಬಾರದು ಎನ್ನುವ ಉದ್ದೇಶದಿಂದ ವೈನ್ಸ್ ಅಂಗಡಿ ಎದುರು ಶಾಮಿಯಾನ ಹಾಕಿದ್ದರು.
ಉಚಿತ ಅನ್ನ ಪಡೆಯುತ್ತಿದ್ದವರು ಸಾಲಿನಲ್ಲಿ: ತೊಕ್ಕೊಟ್ಟು ಜಂಕ್ಷನ್‌ನಲ್ಲಿ ದಾನಿಗಳು ನೀಡಿದ ಅನ್ನವನ್ನು ಕಳೆದ 39 ದಿನಗಳಿಂದ ಪಡೆಯುತ್ತಿದ್ದ ಕಾರ್ಮಿಕರು ಮದ್ಯಕ್ಕಾಗಿ ಸಾಲಿನಲ್ಲಿ ನಿಂತಿರುವುದು ಆಶ್ಚರ್ಯಕರವಾಗಿತ್ತು. ತೊಕ್ಕೊಟ್ಟು ಆಸುಪಾಸಿನಲ್ಲಿ ಕೂಲಿ ಕೆಲಸಕ್ಕೆ ಕಾರ್ಮಿಕರಾಗಿ ಬಂದು ಲಾಕ್‍ಡೌನ್‌ನಿಂದಾಗಿ ಸಿಲುಕಿಕೊಂಡಿದ್ದರು. ಊಟಕ್ಕಿಲ್ಲದೆ ಸ್ಥಿತಿಯಲ್ಲಿದ್ದ ಮಂದಿಗೆ ಸ್ಥಳೀಯ ದಾನಿಗಳು ನೀಡಿದ ಅನ್ನಾಹಾರವನ್ನು ಶ್ರೀ ಸಾಯಿ ಪರಿವಾರ್ ತೊಕ್ಕೊಟ್ಟು ಇವರು ವಿತರಿಸುತ್ತಿದ್ದರು.
ಇವರಿಂದ ಆಹಾರ ಪಡೆಯುತ್ತಿದ್ದ ಮಂದಿ ಇಂದು ಮದ್ಯಕ್ಕಾಗಿ ಸಾಲಿನಲ್ಲಿ ನಿಂತಿರುವುದು ಬೇಸರ ತಂದಿದೆ ಎನ್ನುತ್ತಾರೆ ದಾನಿಗಳು. ಸಂಜೆಯ ನಂತರ ಮದ್ಯ ಸ್ಟಾಕ್ ಖಾಲಿ ಅನ್ನುವ ವೈನ್ಸ್ ಅಂಗಡಿ ಮಾಲೀಕ ಪ್ರತಿಕ್ರಿಯೆಯಿಂದಾಗಿ ಗಂಟೆಗಳ ಕಾಲ ಸಾಲಿನಲ್ಲಿ ನಿಂತ ಮದ್ಯಪ್ರಿಯ ಗ್ರಾಹಕರು ಅಸಮಾಧಾನಗೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.