ETV Bharat / state

ಹರ್ಷ - ಪ್ರವೀಣ್​ ಕೇಸ್​ನಂತೆ ಮಸೂದ್ - ಫಾಜಿಲ್ ಕೇಸ್ ಯಾಕೆ ಎನ್ಐಎಗೆ ವಹಿಸಿಲ್ಲ: ಪಿಎಫ್ಐ ಮುಖಂಡನ ಪ್ರಶ್ನೆ

ರಾಜ್ಯದಲ್ಲಿ ‌ನಡೆದ ಮುಸ್ಲಿಂ ಯುವಕರ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡ ಇದೆ. ಆದರೆ, ಮುಸ್ಲಿಂ ಯುವಕರು ಆರೋಪಿಗಳಾಗಿರುವ ಪ್ರಕರಣಗಳನ್ನು ಮಾತ್ರ ಎನ್​ಐಎಗೆ ವಹಿಸಲಾಗುತ್ತಿದೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಎಕೆ ಅಶ್ರಫ್ ಕಿಡಿಕಾರಿದರು.

why-muslim-youths-murder-cases-was-not-handed-over-to-nia-questions-pfi
ಹರ್ಷ - ಪ್ರವೀಣ್​ ಕೇಸ್​ನಂತೆ ಮಸೂದ್ - ಫಾಜಿಲ್ ಕೇಸ್ ಯಾಕೆ ಎನ್ಐಎಗೆ ವಹಿಸಿಲ್ಲ: ಪಿಎಫ್ಐ ಮುಖಂಡನ ಪ್ರಶ್ನೆ
author img

By

Published : Sep 7, 2022, 9:02 PM IST

ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ನೆಪದಲ್ಲಿ ರಾಷ್ಟ್ರೀಯ ತನಿಖೆ ದಳ (ಎನ್ಐಎ)ವನ್ನು ಬಿಜೆಪಿ ‌ದುರ್ಬಳಕೆ ಮಾಡುತ್ತಿದೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಎಕೆ ಅಶ್ರಫ್ ಆರೋಪಿಸಿದರು.

ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್​ಐ ನಾಯಕರು ಅನ್ನುವ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ‌ಮತ್ತು ಪ್ರವೀಣ್ ಕೇಸ್ ಎನ್ಐಎಗೆ ವಹಿಸಲಾಗಿದೆ. ಆದರೆ, ಇದರಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಬೆಳಗಾವಿಯ ಅರ್ಬಾಝ್, ಶಮೀರ್ ಪ್ರಕರಣದಲ್ಲಿ ಸಂಘಪರಿವಾರ ಇದೆ. ಈ ಪ್ರಕರಣಗಳನ್ನೂ ಯಾಕೆ ಸರ್ಕಾರ ಎನ್ಐಎಗೆ ವಹಿಸಿಲ್ಲ ಎಂದು ಪ್ರಶ್ನಿಸಿದರು.

ಬೆಳ್ಳಾರೆಯ ಮಸೂದ್ ಮತ್ತು ಸುರತ್ಕಲ್ ಫಾಜಿಲ್ ಕೇಸ್ ಯಾಕೆ ಎನ್ಐಎಗೆ ವಹಿಸಿಲ್ಲ. ರಾಜ್ಯದಲ್ಲಿ ‌ನಡೆದ ಮುಸ್ಲಿಂ ಯುವಕರ ಹತ್ಯೆಯಲ್ಲಿ ಸಂಘಪರಿವಾರದ ಕೈವಾಡ ಇದೆ. ಆದರೆ, ಮುಸ್ಲಿಂ ಯುವಕರು ಆರೋಪಿಗಳಾಗಿರುವ ಪ್ರಕರಣಗಳನ್ನು ಮಾತ್ರ ಎನ್​ಐಎಗೆ ವಹಿಸಲಾಗುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರ ಎನ್ಐಎ ಎಂಬ ತನಿಖಾ ಸಂಸ್ಥೆಯನ್ನು ದುರ್ಬಳಕೆ ‌ಮಾಡುತ್ತಿದೆ ಎಂದು ಆಪಾದಿಸಿದರು.

ಬಿಜೆಪಿ ಕಾರ್ಯಕರ್ತರ ಸಮಾಧಾನ ಪಡಿಸಲು ಎನ್ಐಎ ದಾಳಿ: ಮಂಗಳವಾರ 30ಕ್ಕೂ ಅಧಿಕ ಕಡೆ ಎನ್ಐಎ ದಾಳಿ‌ ನಡೆಸಿದೆ. ಕೆಲ ಪಿಎಫ್ಐ ಕಾರ್ಯಕರ್ತರು ಮತ್ತು ನಾಯಕರ ಮನೆಗಳ ಜೊತೆ ಮುಸ್ಲಿಂ ಯುವಕರ ಮನೆಗಳಿಗೆ ದಾಳಿ‌ ನಡೆಸಲಾಗಿದೆ. ವಿಧಾನಸಭಾ ಚುನಾವಣೆ ಮುಂದಿಟ್ಟು ಈ ಕೆಲಸ ಮಾಡಲಾಗಿದೆ. ಪಿಎಫ್ಐ ಟಾರ್ಗೆಟ್ ‌ಮಾಡಿ‌ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಈ ದಾಳಿ ಮಾಡಲಾಗಿದೆ ಎಂದು ಎಕೆ ಅಶ್ರಫ್ ದೂರಿದರು.

ಬಿಜೆಪಿ ಸರ್ಕಾರ ವೈಫಲ್ಯತೆ‌ ಮುಚ್ಚಿ ಹಾಕಲು ಈ ಕೆಲಸ ‌ಮಾಡಿದೆ. ಪಿಎಫ್ಐ ವಿರುದ್ದ ಎನ್ಐಎ ಮತ್ತು‌ ಇಡಿ ಛೂ ಬಿಟ್ಟು ಕಿರುಕುಳ ಕೊಡಲಾಗುತ್ತದೆ. ಪ್ರವೀಣ್ ‌ನೆಟ್ಟಾರು ಪ್ರಕರಣ ಸ್ಥಳೀಯ ಮಟ್ಟದ ಪ್ರತೀಕಾರದ ಪ್ರಕರಣ. ಸ್ಥಳೀಯ ಪೊಲೀಸರೇ ಇದರ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಯನ್ನ ಭಯೋತ್ಪಾದನೆ ಘಟನೆ ಅಂತ ತಿರುಚಲು ಯತ್ನಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸುಳ್ಯ, ಪುತ್ತೂರಿನ 32 ಕಡೆಗಳಲ್ಲಿ ಎನ್​ಐಎ ದಾಳಿ

ಎನ್ಐಎ ದಾಳಿ ವೇಳೆ ಭಯೋತ್ಪಾದಕನ ಹಿಡಿಯೋ ರೀತಿ ವಾತಾವರಣ ಸೃಷ್ಟಿಸಲಾಗಿದೆ. ನಮ್ಮ ತಾಲೂಕು ಘಟಕದ ಕೆಲ ನಾಯಕರ ಮನೆಗಳಿಗೆ ದಾಳಿ ಮಾಡಿದ್ದಾರೆ. ಕೆಲ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಎನ್ಐಎ ಹೇಳಿದೆ. ಆದರೆ, ಅದನ್ನ ಬೆಂಗಳೂರಿನಿಂದ ತಂದ್ರಾ? ದೆಹಲಿಯಿಂದ ತಂದ್ರಾ ಅಂತ ಎನ್​ಐಎ ತಿಳಿಸಬೇಕೆಂದು ಒತ್ತಾಯಿಸಿದರು.

ಪ್ರವೀಣ್ ಕೇಸ್ ಅಂತಾರಾಜ್ಯ ನಂಟಿನ ಕೇಸ್ ಅಂತ ಗೃಹ ಸಚಿವರು ಹೇಳಿದ್ದರು. ಆದರೆ, ಆರೋಪಿಗಳ ಬಂಧನ ಆದ ನಂತರ ಅದು ಸ್ಥಳೀಯರು ಅಂತ ಗೊತ್ತಾಗಿದೆ. ಸರ್ಕಾರಕ್ಕೆ ಪ್ರವೀಣ್ ಕೇಸಲ್ಲಿ ಮಾತ್ರ ಯಾಕೆ ಆಸಕ್ತಿ?. ಇದೇ ಆಸಕ್ತಿ ಮಸೂದ್ ಮತ್ತು ಫಾಜಿಲ್ ಕೇಸ್‌ನಲ್ಲಿ ಯಾಕಿಲ್ಲ?. ಪ್ರವೀಣ್ ಹತ್ಯೆಯು ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಹತ್ಯೆ‌ ನಡೆದಿದೆ ಎಂದು ತಿಳಿದು ಬಂದಿದೆ. ನಾವು ಇದನ್ನು ಕಾನೂನಾತ್ಮಕವಾಗಿ ಎದುರಿಸಲಿದ್ದೇವೆ ಎಂದರು.

ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಪುತ್ತೂರಿನ ಹಲವೆಡೆ ಎನ್‌ಐಎ ದಾಳಿ, ದಾಖಲೆಗಳು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.