ETV Bharat / state

ಮಂಗಳೂರಲ್ಲಿ ಲಂಕಾ ಪ್ರಜೆಗಳ ಬಂಧನ ಪ್ರಕರಣ: ಕೇಸ್​ ಎನ್ಐಎಗೆ ಒಪ್ಪಿಸಿರುವುದಕ್ಕೆ ಕಾರಣ? - ಮಂಗಳೂರು ಲೇಟೆಸ್ಟ್ ನ್ಯೂಸ್

38 ಶ್ರೀಲಂಕಾ ಪ್ರಜೆಗಳ ಬಂಧನ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿರುವುದಕ್ಕೆ, ಅವರಿಗೆ ಎಲ್​ಟಿಟಿಇ ಪ್ರಭಾವ ಇರಬಹುದು ಎಂಬ ಶಂಕೆಯೇ ಕಾರಣ ಎಂದು ತಿಳಿದು ಬಂದಿದೆ.

mangalore human trafficking case
ಶ್ರೀಲಂಕಾ ಪ್ರಜೆಗಳ ಬಂಧನ ಪ್ರಕರಣ
author img

By

Published : Jul 27, 2021, 11:52 AM IST

ಮಂಗಳೂರು: ಮಾನವ ಕಳ್ಳಸಾಗಣೆ ವಿಚಾರದಲ್ಲಿ‌ ಮಂಗಳೂರಿನಲ್ಲಿ ಇತ್ತೀಚೆಗೆ 38 ಶ್ರೀಲಂಕಾ ಪ್ರಜೆಗಳ ಬಂಧಿಸಿರುವ ಪ್ರಕರಣವನ್ನು ಎನ್ಐಎಗೆ ಒಪ್ಪಿಸಲಾಗಿದೆ. ಬಂಧಿತರಿಗೆ ಎಲ್​ಟಿಟಿಇ ಪ್ರಭಾವ ಇರಬಹುದು ಎಂಬ ಶಂಕೆ ಹಿನ್ನೆಲೆ ಕೇಸ್ ಅ​ನ್ನು ಎನ್​ಐಎಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿತ 38 ಮಂದಿಯೂ ತಮಿಳಿಗರಾಗಿದ್ದು, ಇವರಲ್ಲಿ ಸಿಂಹಳಿಯರು ಯಾರೂ ಇಲ್ಲ ಎನ್ನಲಾಗ್ತಿದೆ. ಅಲ್ಲದೇ ಇವರೆಲ್ಲರೂ ಎಲ್​ಟಿಟಿಇ ಪ್ರಭಾವ ಇರುವ ಉತ್ತರ ಶ್ರೀಲಂಕಾ ಪ್ರದೇಶದಲ್ಲಿದ್ದರು. ಆದ್ದರಿಂದಲೇ ಎನ್ಐಎ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಲಾಗ್ತಿದೆ.

ಕೆನಡಾ ದೇಶದಲ್ಲಿ ಉದ್ಯೋಗ ದೊರಕಿಸಿಕೊಡುವ ಆಮಿಷವೊಡ್ಡಿ ಏಜೆಂಟರು ಈ 38 ಮಂದಿಯನ್ನು ಕರೆತಂದಿದ್ದರು. ತಮಿಳುನಾಡಿನ ತೂತುಕಡಿ ಎಂಬಲ್ಲಿಗೆ ದೋಣಿಯಲ್ಲಿ ಬಂದಿರುವ ಇವರನ್ನು ಆ ಬಳಿಕ ಬೆಂಗಳೂರಿಗೆ ಬಸ್​ನಲ್ಲಿ‌ ಕಳುಹಿಸಿ ಅಲ್ಲಿಂದ ಮಂಗಳೂರಿಗೆ ಕರೆತರಲಾಗಿತ್ತು. ಆದರೆ, ಜೂ. 10ರಂದು ಮಂಗಳೂರು ಪೊಲೀಸರು ಇವರನ್ನು ವಶಕ್ಕೆ ತೆಗೆದುಕೊಂಡಿದ್ದರು. ತಮಿಳುನಾಡಿನಲ್ಲಿಯೂ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.