ಮಂಗಳೂರು: ಮನೆಯ ಬಾವಿ ನೀರು ಒಳಚರಂಡಿ ಕಾಮಗಾರಿಯಿಂದ ಕಲುಷಿತವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕಟ್ಲ್ ನಿವಾಸಿಗಳು ಒತ್ತಾಯಿಸಿದ್ದಾರೆ.
ಇಲ್ಲಿನ ಸುರತ್ಕಲ್ನ ಕಟ್ಲ್ದಲ್ಲಿ ಆರಂಭಿಸಿದ ಒಳಚರಂಡಿ ಕಾಮಗಾರಿಯಿಂದ ಒಸರಿನ ಮೂಲಕ ಸ್ಥಳೀಯ ಮನೆ ಬಾವಿಗಳಿಗೆ ಚರಂಡಿ ನೀರು ಸೇರಿಕೊಂಡು ಕಲುಷಿತಗೊಳ್ಳುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ನೇರವಾಗಿ ಕುಡಿಯಲು ಬಳಸುವಷ್ಟು ಶುದ್ಧವಾಗಿದ್ದ ಬಾವಿ ನೀರು, ಕಳೆದ 15 ದಿನಗಳಿಂದ ತ್ಯಾಜ್ಯದೊಂದಿಗೆ ಮಲೀನಗೊಳ್ಳುತ್ತಿದೆ. ಕೂಡಲೇ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಒಳಚರಂಡಿ ಕಾಮಗಾರಿಯನ್ನು ಮುಚ್ಚಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.