ETV Bharat / state

ಕುಡ್ಲ ಗೋಲಿಬಾರ್​... ಪರಿಹಾರ ಕೊಡ್ದಿದ್ರೆ ದೇಣಿಗೆ ಸಂಗ್ರಹಿಸಿ ಅದಕ್ಕಿಂತ ಹೆಚ್ಚು ಕೊಡ್ತೀವಿ: ಖಾದರ್ - mangalore latest news

ಗೋಲಿಬಾರ್​ನಲ್ಲಿ ಮೃತಪಟ್ಟ ಇಬ್ಬರಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿ, ಪುನಃ ಅದನ್ನು ನಿರಾಕರಿಸುವ ಹೇಳಿಕೆ ನೀಡಿದ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಅಲ್ಲದೇ ಸರ್ಕಾರ ಪರಿಹಾರ ನೀಡಲು ನಿರಾಕರಿಸಿದರೆ ಅದಕ್ಕಿಂತಲೂ ಹೆಚ್ಚು ಪರಿಹಾರವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಕೊಡುತ್ತೇವೆಂದರು.

We will collect more money for mangalore victims: UT Khader
ಪರಿಹಾರ ನಿರಾಕರಿಸಿದ ಸಿಎಂ ಕ್ಷಮೆಯಾಚಿಸಲಿ : ಮಾಜಿ ಸಚಿವ ಯು.ಟಿ ಖಾದರ್
author img

By

Published : Dec 26, 2019, 6:04 PM IST

ಮಂಗಳೂರು: ಗೋಲಿಬಾರ್​ನಲ್ಲಿ ಮೃತಪಟ್ಟ ಇಬ್ಬರಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿ, ಪುನಃ ಅದನ್ನು ನಿರಾಕರಿಸುವ ಹೇಳಿಕೆ ನೀಡಿದ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪರಿಹಾರ ನೀಡಲು ನಿರಾಕರಿಸಿದರೆ ಅದಕ್ಕಿಂತಲೂ ಹೆಚ್ಚು ಪರಿಹಾರವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಸಾವಿಗೀಡಾದವರ ಮನೆಯವರಿಗೆ ನೀಡಲಾಗುವುದು ಎಂದು ಹೇಳಿದರು.

ಪರಿಹಾರ ನಿರಾಕರಿಸಿದ ಸಿಎಂ ಕ್ಷಮೆಯಾಚಿಸಲಿ : ಮಾಜಿ ಸಚಿವ ಯು.ಟಿ ಖಾದರ್

ಮುಖ್ಯಮಂತ್ರಿಗಳ ಹೇಳಿಕೆ ಜನರಿಗೆ ನೋವು ತಂದಿದೆ. ಒಮ್ಮೆ ಘೋಷಣೆ ಮಾಡಿದ ಪರಿಹಾರವನ್ನು ಯಾರ ಮಾತು ಕೇಳಿ ವಾಪಸ್​ ಪಡೆದದ್ದು ಎಂಬುದನ್ನು ಮುಖ್ಯಮಂತ್ರಿಗಳು ಹೇಳಬೇಕು. ನೋವಿನಲ್ಲಿದ್ದ ಮನೆಯವರಿಗೆ ಸಮಾಧಾನ ಮಾಡಿ ಮತ್ತೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಮುಲ್ಕಿ ಠಾಣೆಗೆ ಬೆಂಕಿ ಹಚ್ಚುವ ಯತ್ನಿಸಿ ಸಾವಿಗೀಡಾದ ಇಬ್ಬರಿಗೆ ಪರಿಹಾರ ನೀಡಲಾಗಿದೆ ಎಂದರು.

ಮಂಗಳೂರು ಹಿಂಸಾಚಾರದ ವಿಚಾರದಲ್ಲಿ ದಿನಕ್ಕೊಂದು ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಇದೇ ವಿಚಾರದಲ್ಲಿ ಸೃಷ್ಟಿಸಲಾಗುತ್ತಿರುವ ಗೊಂದಲದ ಹಿಂದೆ ಯಾರಿದ್ದಾರೆ ಎಂದು ಪ್ರಶ್ನಿಸಿದರು. ಸಚಿವ ಸಿಟಿ ರವಿ ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಹೊರಗಿನ ಜಿಲ್ಲೆಯವರು ಇಲ್ಲಿ ಬಂದು ಗೊಂದಲ ಸೃಷ್ಟಿಸುವುದು ಬೇಡ. ನಮ್ಮ ಜಿಲ್ಲೆಯನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ ಎಂದು ಹೇಳಿದರು.

Intro:ಮಂಗಳೂರು: ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರಿಗೆ ಪರಿಹಾರ ನೀಡುತ್ತೇನೆ ಎಂದು ಹೇಳಿ ಮತ್ತೆ ನಿರಾಕರಿಸುವ ಹೇಳಿಕೆ ನೀಡಿದ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರ ಪರಿಹಾರ ನೀಡಲು ನಿರಾಕರಿಸಿದರೆ ಅದಕ್ಕಿಂತಲೂ ಹೆಚ್ಚು ಪರಿಹಾರವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಸಾವಿಗೀಡಾದವರ ಮನೆಯವರಿಗೆ ನೀಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳ ಹೇಳಿಕೆ ಜನರಿಗೆ ನೋವು ತಂದಿದೆ. ಒಮ್ಮೆ ಘೋಷಣೆ ಮಾಡಿದ ಪರಿಹಾರವನ್ನು ಯಾರ ಮಾತು ಕೇಳಿ ವಾಪಸು ಪಡೆದದ್ದು ಎಂಬುದನ್ನು ಮುಖ್ಯಮಂತ್ರಿಗಳು ಹೇಳಬೇಕು. ನೋವಿನಲ್ಲಿದ್ದ ಮನೆಯವರಿಗೆ ಸಮಾಧಾನ ಮಾಡಿ ಮತ್ತೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಮುಲ್ಕಿ ಠಾಣೆ ಗೆ ಬೆಂಕಿ ಹಚ್ಚುವ ಯತ್ನಿಸಿ ಸಾವಿಗೀಡಾದ ಇಬ್ಬರಿಗೆ ಪರಿಹಾರ ನೀಡಲಾಗಿದೆ ಎಂದರು.
ಮಂಗಳೂರು ಹಿಂಸಾಚಾರದ ವಿಚಾರದಲ್ಲಿ ದಿನಕ್ಕೊಂದು ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ಇದೇ ವಿಚಾರದಲ್ಲಿ ಸೃಷ್ಟಿಸಲಾಗುತ್ತಿರುವ ಗೊಂದಲದ ಹಿಂದೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.
ಸಚಿವ ಸಿಟಿ ರವಿ ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ. ಹೊರಗಿನ ಜಿಲ್ಲೆಯವರು ಇಲ್ಲಿ ಬಂದು ಗೊಂದಲ ಸೃಷ್ಟಿಸುವುದು ಬೇಡ. ಬಾಯಿ ಬಂದ್ ಮಾಡಿ ಕೂರಲಿ.ನಮ್ಮ ಜಿಲ್ಲೆಯನ್ನು ನಮ್ಮಷ್ಟಕ್ಕೆ ಬಿಟ್ಟುಬಿಡಿ ಎಂದು ಹೇಳಿದರು.

ಬೈಟ್- ಯು ಟಿ ಖಾದರ್, ಮಾಜಿ ಸಚಿವ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.