ಮಂಗಳೂರು: ವಳಚಿಲ್ನಲ್ಲಿರುವ ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯದ ವೈಮಾನಿಕ ವಿಭಾಗದ ವಿದ್ಯಾರ್ಥಿಗಳು, ವಿಮಾನ ನಿರ್ಮಾಣದಲ್ಲಿನ ಸೂಕ್ಷ್ಮ ಭಾಗಗಳ ತೈಯಾರಿಗೆ 3ಡಿ ಮೆಟಲ್ ಪ್ರಿಂಟರ್ ಆವಿಷ್ಕಾರ ಮಾಡಿದ್ದು, ಸದ್ಯ ಪ್ರಿಂಟರ್ನ ಪೇಟೆಂಟ್ ಪ್ರಕ್ರಿಯೆಯಲ್ಲಿದೆ.
ವಿದ್ಯಾರ್ಥಿಗಳಾದ ಅಭಿಷೇಕ್.ಎ, ಜುನೈದ್, ಸೌಮ್ಯ.ಬಿ ಅವರು ಪ್ರೊ. ದೀಪಕ್ ರಾಜ್ ಪಿ.ವೈ ಮಾರ್ಗದರ್ಶನದಲ್ಲಿ ತ್ರಿಡಿ ಮೆಟಲ್ ಪ್ರಿಂಟರ್ ತಯಾರಿಸಿದ್ದಾರೆ. ಈ ತ್ರಿಡಿ ಪ್ರಿಂಟರ್ ಮೂಲಕ ಲೋಹದ ಸೂಕ್ಷ್ಮ ವಸ್ತುಗಳನ್ನು ಮುದ್ರಿಸಬಹುದಾಗಿದೆ.
ತಮ್ಮ ಪ್ರಾಜೆಕ್ಟ್ ಭಾಗವಾಗಿ ವೈಮಾನಿಕ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಈ ತ್ರಿಡಿ ಪ್ರಿಂಟರ್ನ್ನು ಎಂಜಿನಿಯರಿಂಗ್ ಮಾತ್ರವಲ್ಲದೆ ವಾಸ್ತುಶಿಲ್ಪ, ಕಲಾತ್ಮಕ ಮೂರ್ತಿಗಳ ನಿರ್ಮಾಣಕ್ಕೂ ಬಳಸಬಹುದಾಗಿದೆ. ಈ ಮುದ್ರಕದ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಗೆ 29 ಸಾವಿರ ವೆಚ್ಚ ತಗುಲಿದೆ. ಸದ್ಯ ಪ್ರಿಂಟರ್ನ ಪೇಟೆಂಟ್ ಪ್ರಕ್ರಿಯೆಯಲ್ಲಿದ್ದು ಮುಂದಿನ ವರ್ಷದ ವಿದ್ಯಾರ್ಥಿಗಳಿಗೂ ಇದರ ಪ್ರಾಜೆಕ್ಟ್ ವರ್ಕ್ ನೀಡಿ ಇನ್ನಷ್ಟು ಅಭಿವೃದ್ದಿಪಡಿಸಲಾಗುವುದು ಎಂದು ಪ್ರೊ. ದೀಪಕ್ ರಾಜ್ ಪಿ.ವೈ ತಿಳಿಸಿದರು.
ಒಟ್ಟಿನಲ್ಲಿ ಲೋಹದ ಸಂಕೀರ್ಣ ಭಾಗಗಳ ತಯಾರಿಗೆ ವಿದ್ಯಾರ್ಥಿಗಳು ತಯಾರಿಸಿದ ತ್ರಿಡಿ ಮೆಟಲ್ ಪ್ರಿಂಟರ್, ವೈಮಾನಿಕ ವಿಭಾಗದ ಜೊತೆಗೆ ಕಲಾತ್ಮಕ, ವಾಸ್ತುಶಿಲ್ಪ, ಡಿಸೈನರ್ಗಳಿಗೂ ಅನುಕೂಲವಾಗಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿ ಹಲವು ಪ್ರಯೋಜನಗಳಿಗೆ ಕಾರಣವಾಗಲಿದೆ.