ETV Bharat / state

'ವಿಧ್‌ ಯುಗ್ 4.0'.. ಇದು ಸದ್ದೇ ಮಾಡದೆ ಚಲಿಸುತ್ತೆ​.. ಅರಣ್ಯ ಇಲಾಖೆ ಸಿಬ್ಬಂದಿಗೆ ಬಲು ಉಪಯುಕ್ತ E-Bike.. - ವಿಧ್ ಯುಗ್ 4.0 ಇ-ಬೈಕ್

ಬ್ಯಾಟರಿ ಚಾರ್ಜ್​ಗೆ ಪ್ರತ್ಯೇಕ ಮೂವೇಬಲ್ ಸೋಲಾರ್ ಪ್ಯಾನೆಲ್ ಚಾರ್ಜರ್ ಯುನಿಟ್ (Movable Solar Panel Charger Unit) ಇದೆ. ಅರಣ್ಯ ಇಲಾಖಾ ಸಿಬ್ಬಂದಿಗೆ ಅಗತ್ಯವಿರುವ ವಾಕಿಟಾಕಿ, ಮೊಬೈಲ್, ಜಿಪಿಎಸ್ ಚಾರ್ಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಇದೆ. ಹಿಂಭಾಗದಲ್ಲಿ ನೀರಿನ ಟ್ಯಾಂಕ್, ದಾಖಲೆ ಪತ್ರಗಳನ್ನು ಇಡಲು ವಾಟರ್ ಪ್ರೂಫ್ ಬಾಕ್ಸ್ ಅಳವಡಿಸಲಾಗಿದೆ..

Vidh Yug 4.0 electric bike
ಅರಣ್ಯ ಇಲಾಖೆ ಸಿಬ್ಬಂದಿಗೆ ಬಲು ಉಪಯುಕ್ತ E-Bike
author img

By

Published : Nov 21, 2021, 6:32 PM IST

Updated : Nov 21, 2021, 7:23 PM IST

ಮಂಗಳೂರು : ನಗರದ ಎನ್ಐಟಿಕೆ ಸೆಂಟರ್ ಫಾರ್ ಸಿಸ್ಟಮ್ (NITK) ತೈಲವಿಲ್ಲದೆ, ಸದ್ದೇ ಮಾಡದೆ ಓಡಾಡುವ ಬೈಕೊಂದನ್ನು ಅಭಿವೃದ್ಧಿಪಡಿಸಿದೆ. ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಓಡಾಟಕ್ಕೆಂದು ಈ ಬೈಕ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಇದು ಕಾಡಿನಲ್ಲಿ ಓಡಾಟ ಮಾಡುತ್ತಿದೆ.

ಸೋಲಾರ್ ಶಕ್ತಿಯಿಂದಲೇ ಓಡಾಟ:

'ವಿಧ್ ಯುಗ್ 4.0' ಎಂದು ಹೆಸರು ಹೊಂದಿರುವ ಇ-ಬೈಕ್ (E-bike) ಸೋಲಾರ್ ಶಕ್ತಿಯಿಂದಲೇ ಓಡಾಟ ನಡೆಸುತ್ತಿದೆ. ವಿಶೇಷವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಯ ಓಡಾಟಕ್ಕೆಂದೇ ಅಭಿವೃದ್ಧಿ ಪಡಿಸಲಾಗಿದೆ.

Vidh Yug 4.0 electric bike
ವಿಧ್ ಯುಗ್ 4.0

ಪ್ರಾಯೋಗಿಕವಾಗಿ ಇದನ್ನೀಗ ಬಳಕೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬಯಸಿದ್ದಲ್ಲಿ ಇನ್ನಷ್ಟು ಬೈಕ್‌ಗಳನ್ನು ತಯಾರು ಮಾಡಿಕೊಡಲು ಎನ್ಐಟಿಕೆ ಸೆಂಟರ್ ಫಾರ್ ಸಿಸ್ಟಮ್ ಸಿದ್ಧವಿದೆಯಂತೆ.

ಹಬ್ ಮೋಟಾರ್ ಇಂಜಿನ್ ಅಳವಡಿಕೆ:

'ವಿಧ್ ಯುಗ್ 4.0' ಇ-ಬೈಕ್ ಸೋಲಾರ್ ಶಕ್ತಿಯಿಂದ ಚಾರ್ಜ್ (Solar charge) ಮಾಡಿದ ಬ್ಯಾಟರಿಯಿಂದ ಸಂಚರಿಸುವುದರಿಂದ ಇಂಧನ ದಹಿಸುವ ಸ್ಟ್ರೋಕ್ ಇಂಜಿನ್ (Stroke Engine) ಅಳವಡಿಕೆ ಮಾಡಿಲ್ಲ. ಅದರ ಬದಲು ಬ್ರಶ್‌ಲೆಸ್ ಡಿಸಿ ಹಬ್ ಮೋಟಾರ್ ಇಂಜಿನ್ ಅನ್ನು (Hub motor engine) ಅಳವಡಿಕೆ ಮಾಡಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಬಲು ಉಪಯುಕ್ತ E-Bike

ಇದರ ಪರಿಣಾಮ ಬೈಕ್ ಯಾವುದೇ ಸದ್ದಿಲ್ಲದೆ ಓಡಾಟ ನಡೆಸುತ್ತದೆ. ಆದ್ದರಿಂದ ಶಬ್ದ ಮಾಲಿನ್ಯವೂ ಆಗುವುದಿಲ್ಲ, ಕಾಡಿನಲ್ಲಿರುವ ಪ್ರಾಣಿಗಳಿಗೂ ಕಿರಿಕಿರಿ ಉಂಟಾಗುವುದಿಲ್ಲ. ಕಾಡುಗಳ್ಳರ, ಬೇಟೆಗಾರರ ಮೇಲೆ ದಾಳಿ‌ ನಡೆಸಲು ಸದ್ದಿಲ್ಲದೆ ಬರಲು ಅನುಕೂಲವಾಗುತ್ತದೆ.

ಮೂವೇಬಲ್ ಸೋಲಾರ್ ಪ್ಯಾನೆಲ್ ಚಾರ್ಜರ್ ಯುನಿಟ್:

ಬ್ಯಾಟರಿ ಚಾರ್ಜ್​ಗೆ ಪ್ರತ್ಯೇಕ ಮೂವೇಬಲ್ ಸೋಲಾರ್ ಪ್ಯಾನೆಲ್ ಚಾರ್ಜರ್ ಯುನಿಟ್ (Movable Solar Panel Charger Unit) ಇದೆ. ಅರಣ್ಯ ಇಲಾಖಾ ಸಿಬ್ಬಂದಿಗೆ ಅಗತ್ಯವಿರುವ ವಾಕಿಟಾಕಿ, ಮೊಬೈಲ್, ಜಿಪಿಎಸ್ ಚಾರ್ಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಇದೆ. ಹಿಂಭಾಗದಲ್ಲಿ ನೀರಿನ ಟ್ಯಾಂಕ್, ದಾಖಲೆ ಪತ್ರಗಳನ್ನು ಇಡಲು ವಾಟರ್ ಪ್ರೂಫ್ ಬಾಕ್ಸ್ ಅಳವಡಿಸಲಾಗಿದೆ.

ಸದ್ದೇ ಮಾಡದೆ ಓಡಾಡುವ ಇ-ಬೈಕ್
ಸದ್ದೇ ಮಾಡದೆ ಓಡಾಡುವ ಇ-ಬೈಕ್

ಬೈಕ್ ಹೆಡ್ ಲೈಟ್​ನ್ನು ಟಾರ್ಚ್‌ನಂತೆ ಬಳಸಲು ವ್ಯವಸ್ಥೆ:

ಅಗತ್ಯವಿದ್ದಾಗ ಬೈಕ್ ಹೆಡ್ ಲೈಟ್​ನ್ನು ಟಾರ್ಚ್‌ನಂತೆ ಬಳಸಲು ವ್ಯವಸ್ಥೆ ಇದೆ. ದುರ್ಗಮ ಕಾಡು ದಾರಿಯಲ್ಲೂ, ಏರಿಳಿತಗಳ ದಾರಿಗಳಲ್ಲೀ ಸಲೀಸಾಗಿ ಓಡಾಡುವಂತೆ ಮಾಡಲಾಗಿದೆ. ಈ ಬೈಕ್ ಪ್ರಾಯೋಗಿಕ ಹಂತದಲ್ಲಿ 3 ಗಂಟೆ ಚಾರ್ಜ್ ಮಾಡಿದ 1 ಬ್ಯಾಟರಿಗೆ 70 ಕಿ.ಮೀ. ಮೈಲೇಜ್ ನೀಡಲಿದೆ.

ಗರಿಷ್ಠ 80 ಕಿ.ಮೀ. ವೇಗದಲ್ಲಿ ಓಡಾಡಬಹುದು:

ಗರಿಷ್ಠ 80 ಕಿ.ಮೀ. ವೇಗದಲ್ಲಿ ಓಡಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಒಂದೂವರೆ ಲಕ್ಷ ರೂ. ವೆಚ್ಚದಲ್ಲಿ 'ವಿಧ್ ಯುಗ್ 4.0' ಇ-ಬೈಕ್ ಅನ್ನು ನಿರ್ಮಾಣ ಮಾಡಲಾಗಿದೆ. ಸ್ಥಳೀಯವಾಗಿ ದೊರಕುವ ಸ್ಟೀಲ್ ಪೈಪ್, ರಾಡ್​ಗಳನ್ನು ಬಳಕೆ ಮಾಡಿಯೇ ಈ ಬೈಕ್ ಅನ್ನು ವಿನ್ಯಾಸ ಮಾಡಲಾಗಿದೆ. ಪ್ರಾಯೋಗಿಕ ಪರಿಶೀಲನೆ ಬಳಿಕ ಇನ್ನಷ್ಟು ಬೈಕ್​ಗಳನ್ನು ನಿರ್ಮಾಣ ಮಾಡಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಓದಿ: ಜೀವತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂಬಿಟ್ಟ ಮರ: ಕಡಿಯಲು ಸಿದ್ಧವಾದ್ರು ಊರಿನ ಜನ!

Last Updated : Nov 21, 2021, 7:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.