ಮಂಗಳೂರು : ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿಯವರು ವಿಧಾನ ಪರಿಷತ್ ಸದ್ಯರಾಗುತ್ತಾರೆ. ಅದು ನೂರಕ್ಕೆ ನೂರು ಪಾಲು ಸತ್ಯ. ಯಾಕೆಂದರೆ, ಎರಡು ಸ್ಥಾನಗಳಿವೆ. ಖಂಡಿತವಾಗಿ ಅದರಲ್ಲಿ ಒಂದು ಬಿಜೆಪಿ ಪಾಲಾಗುತ್ತದೆ. ಮತ್ತೊಂದು ಕಾಂಗ್ರೆಸ್ ಪಾಲಾಗುತ್ತದೆ ಎಂದು ಮಾಜಿ ಸಿಎಂ ಡಾ.ವೀರಪ್ಪ ಮೊಯ್ಲಿ ಹೇಳಿದರು.
ನಗರದ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ವಿಲ್ಫ್ರೆಡ್ ಡಿಸೋಜ ಬರೆದಿರುವ 'ಪಂಚಾಯತ್ ರಾಜ್ ಗ್ರಾಮ ಸ್ವರಾಜ್ಯ' ಪುಸ್ತಕ ಅನಾವರಣ ಮಾಡಿ ಮಾತನಾಡಿದ ಅವರು, ಮಂಜುನಾಥ ಭಂಡಾರಿಯವರು ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ್ ರಾಜ್‌ನಲ್ಲಿ ಎಂಫಿಲ್ ಹಾಗೂ ಪಿಹೆಚ್ಡಿ ಪಡೆದವರು.
ಹಾಗಾಗಿ, ತಾನು ಅಧ್ಯಯನ ಮಾಡಿರೋದನ್ನು ಸಾಧನೆ ಮಾಡಬೇಕೆಂಬ ಬದ್ಧತೆಯಿಂದ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಅವರು ಈ ಸ್ಥಾನಕ್ಕೆ ಸರಿಯಾದ ಅಭ್ಯರ್ಥಿ ಎಂದು ಹೇಳಿದರು.
ಸ್ವರಾಜ್ಯ ಪರಿಕಲ್ಪನೆ ಬಂದಿರೋದೇ ಮಹಾತ್ಮ ಗಾಂಧಿಯವರಿಂದ. ಗ್ರಾಮ ಸ್ವರಾಜ್ಯದ ಬಗ್ಗೆ ಲೇಖಕ ವಿಲ್ಫ್ರೆಡ್ ಅವರು ಸರಳವಾಗಿ, ಸ್ಪಷ್ಟವಾಗಿ ಬರೆದಿದ್ದಾರೆ. ಈ ಪುಸ್ತಕದಲ್ಲಿ ಗ್ರಾಮ ಸ್ವರಾಜ್ಯದ ಬಗೆಗಿನ ಬದ್ಧತೆ, ಪ್ರಾಮಾಣಿಕತೆಯನ್ನು ಮೂಡಿಸಿದ್ದಾರೆ. ಈ ಪುಸ್ತಕ ಅಗತ್ಯವಾಗಿ ಎಲ್ಲಾ ಗ್ರಾಪಂ ಸದಸ್ಯರನ್ನು ತಲುಪುವ ಅವಶ್ಯಕತೆ ಇದೆ.
ಈ ಪುಸ್ತಕವನ್ನು ಬರೆಯುವ ಮೂಲಕ ಪಂಚಾಯತ್‌ಗೆ ಸಂಬಂಧಿಸಿದ ವಿಚಾರ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಗೊಳಿಸುವ ಬಗ್ಗೆ ಜಾಗೃತಿ ಮೂಡಿಸಿದರು ಎಂದು ವೀರಪ್ಪ ಮೊಯ್ಲಿ ಹೇಳಿದರು.