ETV Bharat / state

ಬೇಕಾಬಿಟ್ಟಿ ಲಾಕ್​​ಡೌನ್: ಭಾನುವಾರದ ಕರ್ಫ್ಯೂ ಕುರಿತು ಖಾದರ್ ಟ್ವೀಟ್​​ - ರಾಜ್ಯ ಸರ್ಕಾರದ ಕ್ರಮಕ್ಕೆ ಬೇಸರ

ಭಾನುವಾರದ ಸಂಪೂರ್ಣ ಲಾಕ್​​ಡೌನ್​​ ಬಗ್ಗೆ ಶಾಸಕ ಯು.ಟಿ. ಖಾದರ್ ಟ್ವೀಟ್​​​ ಮಾಡುವ ಮೂಲಕ ಲೇವಡಿ ಮಾಡಿದ್ದಾರೆ. ಇದೊಂದು ಬೇಕಾಬಿಟ್ಟಿ ಲಾಕ್​​ಡೌನ್ ಎಂದು ಬರೆದುಕೊಂಡಿರುವ ಖಾದರ್, ಸರ್ಕಾರ ತಜ್ಞರ ಜೊತೆಗೆ ಚರ್ಚಿಸಲಿ ಎಂದಿದ್ದಾರೆ.

UT Khadar tweet about state govt action
ಶಾಸಕ ಯು.ಟಿ. ಖಾದರ್ ಟ್ವಿಟ್
author img

By

Published : May 23, 2020, 5:45 PM IST

ಮಂಗಳೂರು: ಭಾನುವಾರದ ಲಾಕ್​ಡೌನ್​ ಪರಿಕಲ್ಪನೆಯೇ ನನಗೆ ಅರ್ಥ ಆಗುತ್ತಿಲ್ಲ. ದಿನಸಿ ಅಂಗಡಿ, ಮಾರುಕಟ್ಟೆ, ಹಾಲು, ತರಕಾರಿ ಲಭ್ಯವಿದೆ ಎಂದು ಜನರನ್ನು ಓಡಾಡಬೇಡಿ ಎಂದು ಹೇಳಿದರೆ ಹೇಗೆ ಎಂದು ರಾಜ್ಯ ಸರ್ಕಾರದ ಕ್ರಮಕ್ಕೆ ಶಾಸಕ ಯು.ಟಿ. ಖಾದರ್ ಟ್ವೀಟ್​​​​ ಮೂಲಕ ಲೇವಡಿ ಮಾಡಿದ್ದಾರೆ.

UT Khadar tweet about state govt action
ಶಾಸಕ ಯು.ಟಿ. ಖಾದರ್ ಟ್ವಿಟ್

ಕರ್ಫ್ಯೂ ಜಾರಿಯಲ್ಲಿದೆ, 144 ಸೆಕ್ಷನ್ ಕೂಡಾ ಜಾರಿಯಲ್ಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾಗಿ ಭಾನುವಾರದ ಲಾಕ್​​ಡೌನ್​​ ವೈಜ್ಞಾನಿಕತೆಯೇ ಅರ್ಥವಾಗುತ್ತಿಲ್ಲ. ಸಿಂಪಲ್​​ ಆಗಿ ಹೇಳಬೇಕೆಂದರೆ ಇದೊಂದು ಬೇಕಾಬಿಟ್ಟಿ ಲಾಕ್​​ಡೌನ್​​. ಈ ಬಗ್ಗೆ ಸರ್ಕಾರ ತಜ್ಞರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಒಳಿತು ಎಂದು ಸರಣಿ ಟ್ವೀಟ್​​​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.