ETV Bharat / state

ಕಪ್ಪು ಹಣ ತರುತ್ತೇವೆ ಎಂದವರಿಂದ ಆರ್​ಬಿಐಗೆ ಕನ್ನ: ಕೇಂದ್ರದ ನಡೆ ಕುರಿತು ಖಾದರ್ ಲೇವಡಿ

ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ ತರುತ್ತೇವೆಂದು ಭರವಸೆ ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆರ್.ಬಿ.ಐನ ಮೀಸಲು ನಿಧಿಯನ್ನು ತೆಗೆಯುತ್ತಿದೆ. ಕೇಂದ್ರ ಸರ್ಕಾರವೇ ಜಾರಿಗೊಳಿಸಿದ ಜಿಎಸ್​ಟಿಯಿಂದ ತೆರಿಗೆ ಜಾಸ್ತಿ ಬರಲಿಲ್ಲವೆ ಎಂದು ಮಾಜಿ ಸಚಿವ ಯುಟಿ ಖಾದರ್ ಲೇವಡಿ ಮಾಡಿದ್ದಾರೆ.

ಕೇಂದ್ರದ ವಿರುದ್ದ ಖಾದರ್ ಲೇವಡಿ
author img

By

Published : Aug 30, 2019, 7:17 PM IST

ಮಂಗಳೂರು: ಚುನಾವಣೆ ಸಂದರ್ಭದಲ್ಲಿ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ ತರುವೆನೆಂದು ಭರವಸೆ ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆರ್.ಬಿ.ಐನ ಮೀಸಲು ನಿಧಿಯನ್ನು ತೆಗೆಯುತ್ತಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಲೇವಡಿ ಮಾಡಿದ್ದಾರೆ.

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಬಗ್ಗೆ ಜನರು ಆತಂಕಿತರಾಗಿದ್ದಾರೆ. ದುಷ್ಪರಿಣಾಮ ಅನುಭವಿಸುತ್ತಿದ್ದರೂ ಮೌನವಾಗಿ ಕೂತಿದ್ದಾರೆ. ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್​ನ ಮೀಸಲು ನಿಧಿಯನ್ನು ಯಾಕೆ ಬಳಕೆ ಮಾಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿ. ಜಿಎಸ್ ಟಿ ಯಿಂದ ತೆರಿಗೆ ಜಾಸ್ತಿ ಬರಲಿಲ್ಲವೆ, ನೋಟ್ ಬ್ಯಾನ್ ನಿಂದ ಕಪ್ಪು ಹಣ, ಭಯೋತ್ಪಾದನೆ ಕಡಿಮೆಯಾಯಿತೆ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರದ ವಿರುದ್ದ ಖಾದರ್ ಲೇವಡಿ

ಬೀಟ್ ಪೊಲೀಸ್ ಬಗ್ಗೆ ತನಿಖೆಯಾಗಲಿ:

ಉಡುಪಿ ಕರಾವಳಿ ಕಾವಲು ಪಡೆಯ ನೋಟಿಸ್ ಬೋರ್ಡ್​ನಲ್ಲಿ ಜನರಿಗೆ ಆತಂಕ ಮೂಡಿಸುವಂತೆ ಭಯೋತ್ಪಾದಕ ಬಂದಿರುವ ಬಗ್ಗೆ ನೋಟಿಸ್ ಅಂಟಿಸಿದ ಬೀಟ್ ಪೊಲೀಸ್ ಬಗ್ಗೆ ತನಿಖೆಯಾಗಬೇಕು. ಈ ರೀತಿಯ ನೋಟಿಸ್ ನ ಬಗ್ಗೆ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮಾಹಿತಿ ಇಲ್ಲ. ಒಂದು ವೇಳೆ ಭಯೋತ್ಪಾದಕ ಆಗಮನದ ಬಗ್ಗೆ ಎಚ್ಚರಿಕೆ ನೀಡುವುದಿದ್ದರೆ ಕರಾವಳಿಯ ಇತರ ಭಾಗಗಳಲ್ಲಿ ಯಾಕೆ ಎಚ್ಚರಿಕೆ ನೀಡಲಾಗಿಲ್ಲ. ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಾರದೆ ಬೀಟ್ ಪೊಲೀಸ್ ಅಂಟಿಸಿದ ನೋಟಿಸ್ ಪೊಲೀಸ್ ಠಾಣೆಯಲ್ಲಿ ಟೈಪ್ ಮಾಡಿದ್ದೋ ಅಥವಾ ಹೊರಗೆಯೊ ಎಂಬ ಬಗ್ಗೆ ಮಾಹಿತಿ ಹೊರಬರಬೇಕು. ಭಯೋತ್ಪಾದನೆ ಬಗ್ಗೆ ಎಲ್ಲರೂ ಜಾಗೃತಿ ಇರಬೇಕು. ಅದಕ್ಕಾಗಿ ಈ ಬಗ್ಗೆ ಸ್ಪಷ್ಟ ಮಾಹಿತಿ ಬೇಕು. ಬೀಟ್ ಪೊಲೀಸ್ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ನೆರೆ ಸಂತ್ರಸ್ತರ ಅಹವಾಲು ಕೇಳಲು ಪ್ರಧಾನಮಂತ್ರಿ ಬರಬೇಕಿತ್ತು. ಸಂತ್ರಸ್ತ ಮಕ್ಕಳೊಂದಿಗೆ ಅಹವಾಲು ಕೇಳಬೇಕಾದ ಅವರು ಭೂತಾನ್ ದೇಶದ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ನೆರೆ ಸಂತ್ರಸ್ತರ ಅಹವಾಲು ಕೇಳಲು ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ತಂಡ ಬಾರದೆ ಇರುವುದು ಜಿಲ್ಲೆಯ ಬಿಜೆಪಿ 7 ಶಾಸಕರ ಮತ್ತು ಸಂಸದರ ವೈಫಲ್ಯವಾಗಿದೆ . ನಮ್ಮ ಜಿಲ್ಲೆಯ ಸಂಸದರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಅವರು ಒಂದು ಪೋನ್ ಮಾಡಿ ಕೇಂದ್ರ ಅಧ್ಯಯನ ತಂಡ ತರಿಸಬಹುದಿತ್ತು . ಆದರೆ ಅವರು ಅದನ್ನು ಮಾಡಿಲ್ಲ ಎಂದು ಆಪಾದಿಸಿದರು.

Intro:ಮಂಗಳೂರು: ಚುನಾವಣೆ ಸಂದರ್ಭದಲ್ಲಿ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣ ತರುವೆನೆಂದು ಭರವಸೆ ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದೀಗ ಆರ್ ಬಿ ಐ ನ ರಿಸರ್ವ್ ನಿಧಿಯನ್ನು ತೆಗೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ಲೇವಡಿ ಮಾಡಿದ್ದಾರೆ.

Body:ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ದೇಶದ ಆರ್ಥಿಕ ಸ್ಥಿತಿ ಬಗ್ಗೆ ಜನರು ಆತಂಕಿತರಾಗಿದ್ದಾರೆ. ದುಷ್ಪರಿಣಾಮ ಅನುಭವಿಸುತ್ತಿದ್ದರೂ ಮೌನವಾಗಿ ಕೂತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹೇಗಿದೆ, ಕೇಂದ್ರ ಸರಕಾರ ರಿಸರ್ವ್ ಬ್ಯಾಂಕ್ ನ ರಿಸರ್ವ್ ನಿಧಿಯನ್ನು ಯಾಕೆ ಬಳಕೆ ಮಾಡುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಜಾರಿಗೊಳಿಸಿದ ಜಿಎಸ್ ಟಿ ಯಿಂದ ತೆರಿಗೆ ಜಾಸ್ತಿ ಬರಲಿಲ್ಲವೆ, ನೋಟ್ ಬ್ಯಾನ್ ನಿಂದ ಕಪ್ಪು ಹಣ, ಭಯೋತ್ಪಾದನೆ ಕಡಿಮೆಯಾಯಿತೆ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.
ಬೀಟ್ ಪೊಲೀಸ್ ತನಿಖೆಯಾಗಲಿ
ಉಡುಪಿ ಕರಾವಳಿ ಕಾವಲು ಪಡೆಯ ನೋಟಿಸ್ ಬೋರ್ಡ್ ನಲ್ಲಿ ಜನರಿಗೆ ಆತಂಕ ಮೂಡಿಸುವಂತೆ ಭಯೋತ್ಪಾದಕ ಬಂದಿರುವ ಬಗ್ಗೆ ನೋಟಿಸ್ ಅಂಟಿಸಿದ ಬೀಟ್ ಪೊಲೀಸ್ ಬಗ್ಗೆ ತನಿಖೆಯಾಗಬೇಕು. ಈ ರೀತಿಯ ನೋಟಿಸ್ ನ ಬಗ್ಗೆ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮಾಹಿತಿ ಇಲ್ಲ. ಒಂದು ವೇಳೆ ಭಯೋತ್ಪಾದಕ ಆಗಮನದ ಬಗ್ಗೆ ಎಚ್ಚರಿಕೆ ನೀಡುವುದಿದ್ದರೆ ಕರಾವಳಿಯ ಇತರ ಭಾಗಗಳಲ್ಲಿ ಯಾಕೆ ಎಚ್ಚರಿಕೆ ನೀಡಲಾಗಿಲ್ಲ. ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಾರದೆ ಬೀಟ್ ಪೊಲೀಸ್ ಅಂಟಿಸಿದ ನೋಟಿಸ್ ಪೊಲೀಸ್ ಠಾಣೆಯಲ್ಲಿ ಟೈಪ್ ಮಾಡಿದ್ದೋ ಅಥವಾ ಹೊರಗೆಯೊ ಎಂಬ ಬಗ್ಗೆ ಮಾಹಿತಿ ಹೊರಬರಬೇಕು. ಭಯೋತ್ಪಾದನೆ ಬಗ್ಗೆ ಎಲ್ಲರೂ ಜಾಗೃತಿ ಇರಬೇಕು. ಅದಕ್ಕಾಗಿ ಈ ಬಗ್ಗೆ ಸ್ಪಷ್ಟ ಮಾಹಿತಿ ಬೇಕು. ಬೀಟ್ ಪೊಲ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ನೆರೆ ಸಂತ್ರಸ್ತರ ಅಹವಾಲು ಕೇಳಲು ಪ್ರಧಾನಮಂತ್ರಿ ಬರಬೇಕಿತ್ತು. ಸಂತ್ರಸ್ತ ಮಕ್ಯ ಜೊತೆಗೆ ಅಹವಾಲು ಕೇಳಬೇಕಾದ ಅವರು ಭೂತನ್ ದೇಶದ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ನೆರೆ ಸಂತ್ರಸ್ತರ ಅಹವಾಲು ಕೇಳಲು ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ತಂಡ ಬಾರದೆ ಇರುವುದು ಜಿಲ್ಲೆಯ ಬಿಜೆಪಿ 7 ಶಾಸಕರ ಮತ್ತು ಸಂಸದರ ವೈಫಲ್ಯವಾಗಿದೆ . ನಮ್ಮ ಜಿಲ್ಲೆಯ ಸಂಸದರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು ಅವರು ಒಂದು ಪೋನ್ ಮಾಡಿ ಕೇಂದ್ರ ಅಧ್ಯಯನ ತಂಡ ತರಿಸಬಹುದಿತ್ತು . ಆದರೆ ಅವರು ಅದನ್ನು ಮಾಡಿಲ್ಲ ಎಂದು ಆಪಾದಿಸಿದರು.

ಬೈಟ್ - ಯು ಟಿ ಖಾದರ್, ಮಾಜಿ ಸಚಿವರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.