ETV Bharat / state

ಚಂಪಾಷಷ್ಠಿ ಹಿನ್ನೆಲೆ ಕುಕ್ಕೆಯಲ್ಲಿ ಆರಂಭವಾದ ಉರುಳು ಸೇವೆ - ಬೀದಿ ಮಡೆಸ್ನಾನ ಸೇವೆ

ಶ್ರೀ ಕುಕ್ಕೆ ದೇವಳದಿಂದ ಆಡಳಿತ ಮಂಡಳಿಯು ಬೀದಿ ಮಡೆಸ್ನಾನ ಸೇವೆಗೆ ವಿಶೇಷ ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಉರುಳು ಸೇವೆ ಮಾಡುವ ಭಕ್ತರಿಗೂ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರಾದಿಂದ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿತವಾಗಿರುವ ಕಾರಣ ಇದರಲ್ಲಿ ಒಂದು ಭಾಗವನ್ನು ಉರುಳು ಸೇವೆಗಾಗಿಯೇ ವ್ಯವಸ್ಥೆಗೊಳಿಸಲಾಗಿದೆ.

ಉರುಳುಸೇವೆ
ಉರುಳುಸೇವೆ
author img

By

Published : Nov 25, 2022, 7:52 PM IST

ಸುಬ್ರಹ್ಮಣ್ಯ: ನಾಗಕ್ಷೇತ್ರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿ ಉರುಳು ಸೇವೆಯು ಸುಬ್ರಹ್ಮಣ್ಯದಲ್ಲಿ ಬುಧವಾರದಿಂದ ರಾತ್ರಿ ಲಕ್ಷದೀಪೋತ್ಸವದ ರಥೋತ್ಸವದ ಬಳಿಕ ಭಕ್ತರು ಆರಂಭಿಸಿದರು.

ಗುರುವಾರ ಮುಂಜಾನೆ ಮತ್ತು ಸಂಜೆ ಕೆಲವು ಭಕ್ತರು ಸೇವೆ ನೆರವೇರಿಸಿದರೆ ಇಂದು ಕೂಡಾ ಉರುಳು ಸೇವೆಗಳು ನಿರಂತವಾಗಿ ನಡೆಯುತ್ತಿದೆ. ಭಕ್ತರು ಈ ಸೇವೆಯನ್ನು ಷಷ್ಠಿಯಂದು ಮಹಾರಥೋತ್ಸವ ಎಳೆಯುವ ತನಕವೂ ನೆರವೇರಿಸುತ್ತಾರೆ. ವಾರ್ಷಿಕ ಜಾತ್ರೋತ್ಸವದ ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಉರುಳು ಸೇವೆ ನೆರವೇರಿಸುತ್ತಾರೆ.

ಉರುಳು ಸೇವೆ ಮಾಡುವ ಭಕ್ತರು ಇಲ್ಲಿನ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ರಥಬೀದಿಯಲ್ಲಿ ಉರುಳಿಕೊಂಡು ದೇವಳಕ್ಕೆ ಬಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ದೇಗುಲದ ಮೂಡು ಬಾಗಿಲಿನಲ್ಲಿ ಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ. ಈ ಸೇವೆಗೆ ಯಾವುದೇ ಪ್ರತ್ಯೇಕ ರಶೀದಿ ಇಲ್ಲದಿದ್ದರೂ ಭಕ್ತರಿಗೆ ಇದಕ್ಕಾಗಿ ಶ್ರೀ ದೇವಳದಿಂದ ಸಕಲ ಅನುಕೂಲತೆಗಳನ್ನು ಮಾಡಲಾಗಿದೆ.

ಶ್ರೀ ಕುಕ್ಕೆ ದೇವಳದಿಂದ ಆಡಳಿತ ಮಂಡಳಿಯು ಬೀದಿ ಮಡೆಸ್ನಾನ ಸೇವೆಗೆ ವಿಶೇಷ ಅನುಕೂಲತೆಗಳನ್ನು ಮಾಡಿಕೊಟ್ಟಿದೆ. ಉರುಳು ಸೇವೆ ಮಾಡುವ ಭಕ್ತರಿಗೂ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರಾದಿಂದ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿತವಾಗಿರುವ ಕಾರಣ ಇದರಲ್ಲಿ ಒಂದು ಭಾಗವನ್ನು ಉರುಳು ಸೇವೆಗಾಗಿಯೇ ವ್ಯವಸ್ಥೆಗೊಳಿಸಲಾಗಿದೆ.

ವಿದ್ಯುತ್ ಸೌಕರ್ಯ ವ್ಯವಸ್ಥೆ: ಇದರಲ್ಲಿ ವಾಹನ ಸಂಚಾರಕ್ಕೆ ಅವಕಾವಿಲ್ಲ. ಅಲ್ಲದೇ ರಸ್ತೆಯ ಇಕ್ಕೆಲದಲ್ಲಿ ವಾಹನ ನಿಲುಗಡೆಗೆ ಕೂಡಾ ಅವಕಾಶ ನೀಡಲಾಗುತ್ತಿಲ್ಲ. ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಸೂಚನಾ ಫಲಕಗಳನ್ನು ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರದಿಂದ ಕುಕ್ಕೆಯ ತನಕ ವಿದ್ಯುತ್ ಸೌಕರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ.

ಅಲ್ಲದೇ ಶ್ರೀ ದೇವಳದಿಂದ ಪ್ರತಿನಿತ್ಯ ರಸ್ತೆಯನ್ನು ಗುಡಿಸಿ ಸ್ವಚ್ಚ ಮಾಡಿ ರಸ್ತೆಯಲ್ಲಿನ ದೂಳು ತೆಗೆಯುವ ಕಾರ್ಯವು ನಡೆಯುತ್ತಿದೆ. ಈ ಪಥವನ್ನು ನಿರಂತರವಾಗಿ ಗುಡಿಸಿ ಸ್ವಚ್ಚಗೊಳಿಸುವ ಕಾರ್ಯ ನಡೆಯುತ್ತಿದೆ. ಆಗಾಗ್ಗೆ ನೀರನ್ನು ಹಾಕಿ ಶುಚಿಗೊಳಿಸಲಾಗುತ್ತಿದೆ. ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಭಕ್ತರು ಈ ಪಥವನ್ನು ಗುಡಿಸಿ ಶುಚಿಗೊಳಿಸುವ ಕಾರ್ಯವನ್ನು ನಿತ್ಯ ಮಾಡುತ್ತಿದ್ದಾರೆ.

ಈ ಬಾರಿ ಕಾಂಕ್ರೀಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾದ ಕಾರಣ ಭಕ್ತರು ಸಂಜೆ 5:00 ಗಂಟೆಯಿಂದ ಬೆಳಗ್ಗೆ 9:00 ಗಂಟೆಯ ಒಳಗೆ ಸೇವೆಯನ್ನು ನಡೆಸಬೇಕಾಗುತ್ತದೆ. ಬಿಸಿಲಿನ ತಾಪ ಹೆಚ್ಚಿರೋದರಿಂದ ಆದಷ್ಟು ಸಂಜೆ, ರಾತ್ರಿ ಮತ್ತು ಮುಂಜಾನೆ ವೇಳೆ ಸೇವೆಯನ್ನು ಕುಮಾರಧಾರೆಯಿಂದ ಆರಂಭಿಸಬೇಕು ಎಂದು ಶ್ರೀ ದೇವಳದ ಆಡಳಿತ ಸೇವಾರ್ಥಿಗಳಲ್ಲಿ ಭಕ್ತರು ವಿನಂತಿಸಿದ್ದಾರೆ. ಉರುಳು ಸೇವೆ ಮಾಡುವವರು ಮೊದಲೇ ಅನೇಕ ದಿನಗಳಿಂದ ವೃತವನ್ನು ಕೈಗೊಂಡಿರುತ್ತಾರೆ. ಅತ್ಯಂತ ಕಠಿಣವಾದ ಈ ಸೇವೆಯಲ್ಲಿ ಭಕ್ತರ ಅಪಾರ ಶ್ರದ್ಧೆ ಅಡಗಿರುತ್ತದೆ.

ಕಠಿಣವಾದ ಸೇವೆ: ಕುಮಾರಧಾರಾದಿಂದ ಸುಮಾರು 2 ಕಿ.ಮಿ ದೂರ ಕಠಿಣವಾದ ಉರುಳು ಸೇವೆ ಮಾಡಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಪ್ರಾರ್ಥಿಸುತ್ತಾರೆ. ಶ್ರೀ ದೇವರನ್ನು ಆರಾಧಿಸುವ ಕಠಿಣ ಹಾಗೂ ವಿಶಿಷ್ಟ ಸೇವೆ ಇದಾಗಿದ್ದು ಪುರುಷ, ಮಹಿಳೆ, ಮಕ್ಕಳು ಹಾಗೂ ವೃದ್ದರೂ ಈ ಸೇವೆಯನ್ನು ಮಾಡುತ್ತಿದ್ದು, ಅನೇಕ ವರ್ಷಗಳಿಂದ ಸತತವಾಗಿ ಈ ಕಠಿಣವಾದ ಸೇವೆ ಸಲ್ಲಿಸುವ ಹಲವು ಭಕ್ತರಿದ್ದಾರೆ. ಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಉರುಳು ಸೇವೆ ಮುಖ್ಯ ಹರಿಕೆಗಳಲ್ಲಿ ಒಂದಾಗಿ ಪರಿಗಣಿತವಾಗಿದೆ. ಈ ಸೇವೆಯಿಂದಾಗಿ ಭಕ್ತರ ಸಂಕಷ್ಠಗಳು,ರೋಗರುಜಿನಗಳು ನಿವಾರಣೆಯಾದ ಉದಾಹರಣೆಗಳಿವೆ.

ಓದಿ: ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು; ಅಭಿಮಾನಿಗಳಿಂದ ದೇವಸ್ಥಾನದಲ್ಲಿ ಉರುಳು ಸೇವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.