ETV Bharat / state

ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮ್ಯಾನೇಜರ್ ಕನ್ನಡತಿ - ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ

Australia cricket team manager Urmila Rosario: ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಉರ್ಮಿಳಾ ರೊಸಾರಿಯೋ ಅವರು ವಿಶ್ವಕಪ್​ ವಿಜೇತ ಆಸ್ಟ್ರೇಲಿಯಾ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Urmila Rosario
Urmila Rosario
author img

By ETV Bharat Karnataka Team

Published : Nov 22, 2023, 10:10 AM IST

ಮಂಗಳೂರು(ದಕ್ಷಿಣ ಕನ್ನಡ): ಏಕದಿನ ವಿಶ್ವಕಪ್ ಚಾಂಪಿಯನ್​ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ವ್ಯವಸ್ಥಾಪಕಿ ಭಾರತದವರು. ಅದರಲ್ಲೂ ಕರ್ನಾಟಕದ ಮೂಲದವರೆಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ಉರ್ಮಿಳಾ ರೊಸಾರಿಯೋ ಆಸ್ಟ್ರೇಲಿಯಾ ತಂಡ ಮ್ಯಾನೇಜರ್ ಆಗಿದ್ದಾರೆ.

ಉರ್ಮಿಳಾ ರೊಸಾರಿಯೋ ಹುಟ್ಟಿ ಬೆಳೆದಿದ್ದು ಕತಾರ್​ನಲ್ಲಿ. ಇವರು ಮೂಲತ: ಕಿನ್ನಿಗೋಳಿಯ ನಿವಾಸಿಗಳಾದ ಐವಿ ಮತ್ತು ವಾಲೆಂಟೈನ್ ದಂಪತಿಯ ಪುತ್ರಿ.

ಉರ್ಮಿಳಾ ಹೆತ್ತವರು ಮೂಲತಃ ಕಿನ್ನಿಗೋಳಿಯವರಾಗಿದ್ದರೂ, ಉದ್ಯೋಗ ನಿಮಿತ್ತ ಕತಾರ್‌ನ ದೋಹಾದಲ್ಲಿ ವಾಸ್ತವ್ಯದಲ್ಲಿದ್ದರು. ಉರ್ಮಿಳಾ ಜನಿಸಿದ್ದು ಕೂಡಾ ಕತಾರ್‌ನಲ್ಲೇ. ಬಾಲ್ಯದಿಂದಲೇ ಕ್ರೀಡೆಯ ಬಗ್ಗೆ ಅಪರಿಮಿತ ಆಸಕ್ತಿ ಹೊಂದಿದ್ದ ಉರ್ಮಿಳಾ, ಮೊದಲು ಕತಾರ್ ಟೆನ್ನಿಸ್ ಫೆಡೆರೇಶನ್‌ನಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಆಸ್ಟ್ರೇಲಿಯಾದ ಸ್ಥಳೀಯ ಕ್ರಿಕೆಟ್ ತಂಡದಲ್ಲಿ ಮೂರು ವರ್ಷಗಳ ಕಾಲ ಮ್ಯಾನೇಜರ್ ಆಗಿದ್ದರು. ಅಲ್ಲಿನ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೂ ಇದ್ದರು.

ಕಳೆದ ವರ್ಷ ಕತಾರ್​ನಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್​ ಸಂದರ್ಭದಲ್ಲೂ ನಾಲ್ಕು ತಿಂಗಳ ಕಾಲ ಕ್ರೀಡಾಂಗಣದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು. ಹೀಗೆ ಹಲವು ಕ್ರೀಡೆಗಳನ್ನು ನಿರ್ವಹಿಸಿ ಅಪಾರ ಅನುಭವ ಹೊಂದಿದ್ದಾರೆ.

ಇವರ ಪೋಷಕರು ಸದ್ಯ ಸಕಲೇಶಪುರದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಎಸ್ಟೇಟ್ ಖರೀದಿಸಿದ್ದಾರೆ. ಮಗಳ ಸಾಧನೆ ಬಗ್ಗೆ ತಂದೆ ವಾಲೆಂಟೈನ್ ಈಟಿವಿ ಭಾರತ ಜೊತೆಗೆ ಮಾತನಾಡಿ, "ಅವಳು ಬಾಲ್ಯದಿಂದಲೂ ತುಂಬಾ ಚುರುಕು. ಕ್ರೀಡೆಯ ಬಗ್ಗೆ ಆಕೆಗೆ ವಿಶೇಷ ಆಸಕ್ತಿ. ಆಕೆಯ ಸಾಧನೆ ತುಂಬಾ ಖುಷಿ ತಂದಿದೆ" ಎಂದರು.

ವಿಶ್ವಕಪ್ ಫೈನಲ್ ಪಂದ್ಯ: ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ 13ನೇ ಆವೃತ್ತಿಯ ಏಕದಿನ ವಿಶ್ವಕಪ್​ ಕ್ರಿಕೆಟ್ ಫೈನಲ್​ ಪಂದ್ಯ ನಡೆಯಿತು. ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, 240 ರನ್​ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಬ್ಯಾಟರ್‌ಗಳಾದ ಟ್ರಾವಿಸ್​ ಹೆಡ್​ (137) ಮತ್ತು ಮಾರ್ನಸ್​ ಲಾಬುಶೇನ್​ ಅವರ ಇನ್ನಿಂಗ್ಸ್​ ಬಲದಿಂದ 7 ಓವರ್​ ಮತ್ತು 6 ವಿಕೆಟ್​ ಉಳಿಸಿಕೊಂಡು ತಂಡ ವಿಜಯ ದಾಖಲಿಸಿತು. ಈ ಮೂಲಕ 6ನೇ ಬಾರಿಗೆ ಏಕದಿನ ವಿಶ್ವಕಪ್​ ಎತ್ತಿಹಿಡಿದು ಸಂಭ್ರಮಿಸಿತು.

ಇದನ್ನೂ ಓದಿ: ನ್ಯೂಜಿಲೆಂಡ್‌ ಕ್ರಿಕೆಟಿಗರನ್ನು ಸೆಳೆದ ಕಬಡ್ಡಿ: ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.