ETV Bharat / state

ಉಪ್ಪಿನಂಗಡಿ ಎಸ್​ಐ ಈರಯ್ಯ ವರ್ಗಾವಣೆ: ಸಿಎಂ ಹೊರಡಿಸಿದ ಆದೇಶ ಕಡೆಗಣಿಸಿದರಾ ಅಧಿಕಾರಿಗಳು?

ಉಪ್ಪಿನಂಗಡಿ ಠಾಣೆ ಎಸ್​ಐ ಡಿ.ಎನ್ ಈರಯ್ಯ ಅವರನ್ನು ವರ್ಗಾವಣೆಗೊಳಿಸಲಾಗಿದ್ದು, ಆ ಸ್ಥಾನಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪಿಎಸ್​ಐ ಆಗಿದ್ದ ಕುಮಾರ್. ಸಿ.ಕಾಂಬ್ಳೆ ಎಂಬವರನ್ನು ನಿಯುಕ್ತಿಗೊಳಿಸಿ ಪಶ್ಚಿಮ ವಲಯದ ಮಹಾ ನಿರೀಕ್ಷಕರು ಮಾ. 3 ರಂದು ಆದೇಶ ಹೊರಡಿಸಿದ್ದಾರೆ.

SI Iriyya
ಎಸ್​ಐ ಈರಯ್ಯ
author img

By

Published : Mar 9, 2021, 9:24 AM IST

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣೆಯ ಉಪನಿರೀಕ್ಷಕರಾಗಿದ್ದ ಡಿ.ಎನ್. ಈರಯ್ಯ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆಯ ಪಿಎಸ್ಐ ಕುಮಾರ್.ಸಿ.ಕಾಂಬ್ಳೆ ಎಂಬುವವರನ್ನು ನಿಯುಕ್ತಿಗೊಳಿಸಲಾಗಿದೆ. ಆದರೆ ಈರಯ್ಯ ಅವರಿಗೆ ಯಾವ ಠಾಣೆಗೆ ಎಂಬುದಾಗಿ ಆದೇಶ ನೀಡದೇ ಪಶ್ಚಿಮವಲಯದ ಮಹಾ ನಿರೀಕ್ಷಕರು ಮಾ.3 ರಂದು ಆದೇಶ ಹೊರಡಿಸಿದ್ದಾರೆ.

Uppinangadi
ಆದೇಶ ಪ್ರತಿ

ಪಶ್ಚಿಮವಲಯದ ಮಹಾನಿರೀಕ್ಷಕರಾದ ದೇವಜ್ಯೋತಿ ರೇ ಅವರ ಈ ಆದೇಶವು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಅನುಮೋದನೆ ಮೇರೆಗೆ ಹೊರಡಿಸಿದ ಆದೇಶದ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಾ.3 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವರ್ಗಾವಣೆ ಬಗ್ಗೆ ತನ್ನ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ಇ.ವಿ.ರಮಣ ರೆಡ್ಡಿಯವರ ಮೂಲಕ ಕಟ್ಟು ನಿಟ್ಟಿನ ನಿರ್ದೇಶನ ಹೊರಡಿಸಿದ್ದರು. ಅದರ ಪ್ರಕಾರ ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿ ಸ್ಥಾನಗಳನ್ನು ತುಂಬುವುದಕ್ಕೆ ಹೊರತಾಗಿ ಬೇರೆ ಯಾವುದೇ ವರ್ಗಾವಣೆಗಳನ್ನು 2021ನೇ ಸಾಲಿನ ಸಾಮಾನ್ಯ ವರ್ಗಾವಣೆಯವರೆಗೆ ಮಾಡಬಾರದೆಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿತ್ತು.

Uppinangadi
ಆದೇಶ ಪ್ರತಿ

ಆಡಳಿತಾತ್ಮಕವಾಗಿ ಅವಶ್ಯವಿರುವ ಖಾಲಿ ಸ್ಥಾನಗಳ ವರ್ಗಾವಣೆಗಳನ್ನೂ ಮುಖ್ಯಮಂತ್ರಿಗಳ ಆದೇಶದ ಬಳಿಕವೇ ಮಾಡಬೇಕು ಎಂಬುದಾಗಿ ಆದೇಶ ಇತ್ತು. ಇಲಾಖೆ ಮಟ್ಟದ ಹಂತದಲ್ಲಿ ವರ್ಗಾವಣೆ ಮಾಡದೆ ಪ್ರತಿಯೊಂದು ವರ್ಗಾವಣೆಯನ್ನೂ ಮುಖ್ಯಮಂತ್ರಿಯವರಿಗೆ ಕಡತದಲ್ಲಿ ಸಲ್ಲಿಸಿ ಮುಖ್ಯಮಂತ್ರಿಗಳ ಆದೇಶ ಪಡೆದ ನಂತರವೇ ವರ್ಗಾವಣೆ ಮಾಡಬೇಕು ಎಂದು ಈ ಆದೇಶ ಪತ್ರದಲ್ಲಿ ತಿಳಿಸಲಾಗಿತ್ತು.

ಆದರೆ ಉಪ್ಪಿನಂಗಡಿ ಠಾಣೆಯಲ್ಲಿ ಯಾವುದೇ ಪಿಎಸ್ಐ ಹುದ್ದೆ ಖಾಲಿ ಇರದೇ ಇರುವಾಗ ಅಲ್ಲಿ ಪ್ರಸ್ತುತ ಠಾಣಾಧಿಕಾರಿಯಾಗಿ ಡಿ.ಎನ್ ಈರಯ್ಯ ಕರ್ತವ್ಯದಲ್ಲಿರುವಾಗಲೇ ಪಶ್ಚಿಮವಲಯದ ಮಹಾನಿರೀಕ್ಷಕರು ಆದೇಶ ಹೊರಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರದೇಶದಲ್ಲಿ ಭಾರಿ ಸ್ಫೋಟಕ ಪತ್ತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.