ಉಪ್ಪಿನಂಗಡಿ(ಮಂಗಳೂರು): ಗುಜರಿ ಅಂಗಡಿಯಲ್ಲಿರುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಯುವಕರ ತಂಡವನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆಕ್ಕಿಲಾಡಿ ನಿವಾಸಿ ಮಹಮ್ಮದ್ ಸಿನಾನ್ (19), ಇಳಂತಿಲ ಗ್ರಾಮದ ನಿವಾಸಿ ಹಷೀತ್ (18), ಬಾರ್ಯ ಗ್ರಾಮದ ಇಸ್ಮಾಯಿಲ್ (18) ಬಂಧಿತ ಆರೋಪಿಗಳು. ಇವರು ಉಪ್ಪಿನಂಗಡಿ ಕಸಬಾ ಗ್ರಾಮದ ಹಳೆಗೇಟಿನಲ್ಲಿರುವ ಜಿ.ಕೆ ಸ್ಕ್ರಾಪ್ ಗುಜರಿ ಅಂಗಡಿಯ ಗೋದಾಮಿನಲ್ಲಿದ್ದ ಸುಮಾರು 1 ಲಕ್ಷ ಮೌಲ್ಯದ ಹಳೆ ಗುಜರಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.