ಮಂಗಳೂರು : ತಾಂತ್ರಿಕ ದೋಷಗಳು ಕಂಡು ಬರುವ ಬೋಟ್ ಗಳನ್ನು ದುರಸ್ತಿ ಮಾಡಬೇಕಾದಲ್ಲಿ ನೀರಿನಿಂದ ಮೇಲಕ್ಕೆ ತಂದು ಸರಿಪಡಿಸುವುದೇ ಇದುವರೆಗಿನ ಕ್ರಮ. ಆದರೆ ಇದೀಗ ಸ್ಕೂಬಾ ಡೈವಿಂಗ್ ಮೂಲಕ ನೀರಿಗಿಳಿದು ದುರಸ್ತಿ ಮಾಡುವಲ್ಲಿ ಬೋಟ್ ಮಾಲೀಕರೊಬ್ಬರು ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಅಂಡರ್ ವಾಟರ್ ಗ್ಯಾರೇಜ್ ಶನಿವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ.
ನಗರದ ಬೋಟ್ ಮಾಲೀಕ ರಾಜರತ್ನ ಸನಿಲ್ ಅವರ ಅವಿರತ ಶ್ರಮದಿಂದ ಈ ಕಾರ್ಯಯೋಜನೆ ಆರಂಭಗೊಂಡಿದೆ. ಇನ್ನಿಬ್ಬರು ನುರಿತ ತಜ್ಞರೊಂದಿಗೆ ಸೇರಿ ರಾಜರತ್ನ ಸನಿಲ್ ಅವರು ತಾಂತ್ರಿಕವಾಗಿ ತೊಂದರೆಗೊಳಗಾದ ಬೋಟ್ ಒಂದನ್ನು ಸ್ಕೂಬಾ ಡೈವಿಂಗ್ ಮೂಲಕ ಏಳು ಗಂಟೆಯಲ್ಲಿ ದುರಸ್ತಿ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಓದಿ : 7 ಶಾಸಕರಿಗೆ ಸಚಿವ ಸ್ಥಾನ, ಜ.13ರಂದು ಪ್ರಮಾಣ ವಚನ: ಬಿಎಸ್ವೈ
ದೋಣಿ ದುರಸ್ತಿಯಾಗಬೇಕಾದಲ್ಲಿ ಸಾಮಾನ್ಯವಾಗಿ ದಡಕ್ಕೆ ತರಲು ಸಾಕಷ್ಟು ಮಾನವಶ್ರಮ ಬೇಡುವುದಲ್ಲದೇ, 70 ಸಾವಿರದಿಂದ 1 ಲಕ್ಷ ರೂ. ವೆಚ್ಚ ತಗುಲುತ್ತದೆ. ಆದರೆ ಸ್ಕೂಬಾ ಡೈವಿಂಗ್ ವಿಧಾನದಲ್ಲಿ ಸುಲಭವಾಗಿ ಬೋಟ್ ಅಡಿ ಭಾಗಕ್ಕೆ ತಲುಪುವ ತಂಡ 2 ಕಪ್ಪೆ ಚಿಪ್ಪಿನಂತಹ ಸಂಚಾರಕ್ಕೆ ಅಡ್ಡಿಯಾಗುವ ತ್ಯಾಜ್ಯ, ತಾಂತ್ರಿಕ ತೊಂದರೆಗಳನ್ನು 3 ಗಂಟೆಗಳ ಒಳಗೆ ಸರಿಪಡಿಸುತ್ತದೆ. ಸ್ಕ್ಯೂಬ್ ಡೈವಿಂಗ್ ಗೆ ಬಳಸುವ ಒಂದು ಸಿಲಿಂಡರನ್ನು ಮೂರು ಗಂಟೆಗಳ ಕಾಲ ಬಳಸಲು ಸಾಧ್ಯ. ಸಾಕಷ್ಟು ಅಡೆತಡೆಗಳಿದ್ದರೂ ಅತೀ ಕಡಿಮೆ ವೆಚ್ಚ ಅಂದರೆ ಕೇವಲ 20 ಸಾವಿರ ರೂ.ನಲ್ಲಿ ಬೋಟ್ ದುರಸ್ತಿಯಾಗುತ್ತದೆ ಎಂದು ರಾಜರತ್ನ ಸನಿಲ್ ಹೇಳುತ್ತಾರೆ.