ETV Bharat / state

ಜಿಪಂ ಸಭೆ.. ಲೇಡಿಗೋಷನ್ ಆಸ್ಪತ್ರೆ ಡಿಎಂಒ ಮೇಲೆ ಶಾಸಕ ಕೋಟ್ಯಾನ್ ಗರಂ

author img

By

Published : Jul 24, 2020, 10:11 PM IST

ಆ ಮಹಿಳೆಯ ಪರಿಸ್ಥಿತಿ ತೀರಾ ಉಲ್ಬಣಗೊಂಡಿದ್ದು, ಕೊನೆಯ ಹಂತದಲ್ಲಿತ್ತು. ನಮ್ಮ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ನಾವು ಇಂಡಿಯಾನಾ ಆಸ್ಪತ್ರೆಗೆ ಕಳುಹಿಸಿದ್ದೆವು. ನಾವು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದೆವು..

ಮಂಗಳೂರು
ಮಂಗಳೂರು

ಮಂಗಳೂರು : ಮೂಡುಬಿದಿರೆಯ ಕ್ಯಾನ್ಸರ್ ಪೀಡಿತ ಮಹಿಳೆಯೋರ್ವರನ್ನು ಇತ್ತೀಚೆಗೆ ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸರಿಯಾಗಿ ತಪಾಸಣೆ ನಡೆಸದೆ ಮಧ್ಯರಾತ್ರಿ 12 ಗಂಟೆಗೆ ಮಳೆಯಲ್ಲಿ ನಿಲ್ಲಿಸಿ ಮತ್ತೆ ಹಿಂದೆ ಕಳುಹಿಸಿರುವ ಪ್ರಕರಣ ನಡೆದಿತ್ತು. ಈ ಬಗ್ಗೆ‌ ಲೇಡಿಗೋಷನ್ ಡಿಎಂಒ ಮೇಲೆ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಕೊರೊನಾ ನಿರ್ವಹಣಾ ಸಭೆಯಲ್ಲಿ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಗರಂ ಆದ ಘಟನೆ ನಡೆಯಿತು.

ಲೇಡಿಗೋಷನ್ ಆಸ್ಪತ್ರೆ ಡಿಎಂಒ ಮೇಲೆ ಶಾಸಕ ಕೋಟ್ಯಾನ್ ಗರಂ

ನಾನೇ ಖುದ್ದು ಆ ಮಹಿಳೆಯನ್ನು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದೆ. ಆದರೆ, ಅಲ್ಲಿಂದ ಲೇಡಿಗೋಷನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿದ್ದ ಸಿಬ್ಬಂದಿ ಸರಿಯಾಗಿ ತಪಾಸಣೆ ನಡೆಸದೆ ಉಡಾಫೆಯಿಂದ ವರ್ತಿಸಿದೆ. ಅಲ್ಲಿನ‌ ಮುಖ್ಯಸ್ಥೆ ನೀವಾದ ಕಾರಣ ನೀವೇ ಅದಕ್ಕೆ ಜವಾಬ್ದಾರಿ. ನಿಮ್ಮಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಬದಲು ಬೇಜವಾಬ್ದಾರಿಯಿಂದ ವರ್ತಿಸಿದ್ದು ಸರಿಯಿಲ್ಲ ಎಂದು ಉಮಾನಾಥ ಕೋಟ್ಯಾನ್ ಕಿಡಿಕಾರಿದರು.

ಇದಕ್ಕೆ ಲೇಡಿಗೋಷನ್ ಡಿಎಂಒ ಡಾ‌.ಸವಿತಾ ಪ್ರತಿಕ್ರಿಯಿಸಿ, ಆ ಮಹಿಳೆಯ ಪರಿಸ್ಥಿತಿ ತೀರಾ ಉಲ್ಬಣಗೊಂಡಿದ್ದು, ಕೊನೆಯ ಹಂತದಲ್ಲಿತ್ತು. ನಮ್ಮ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ ನಾವು ಇಂಡಿಯಾನಾ ಆಸ್ಪತ್ರೆಗೆ ಕಳುಹಿಸಿದ್ದೆವು. ನಾವು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದೆವು. ಆದರೆ, ರೋಗಿಯ ಕಡೆಯವರು ನಾವು ಈಗ ಮನೆಗೆ ಹೋಗುತ್ತೇವೆ ಎಂದು ಹೇಳಿದ್ದರು ಎಂದರು.

ಇದರಿಂದ ಮತ್ತಷ್ಟು ರೋಷಗೊಂಡ ಶಾಸಕ ಉಮಾನಾಥ ಕೋಟ್ಯಾನ್, ನೋಡಿ ನಿಮ್ಮದೆಲ್ಲವೂ ತಿಳಿದಿದೆ. ಇದೇ ಕೊನೆ, ಇನ್ನು ಮುಂದೆ ಲೇಡಿಗೋಷನ್ ಆಸ್ಪತ್ರೆಯ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಬೇಕಾದೀತು. ಹೌದು ಎಂದು ಒಪ್ಪಿಕೊಳ್ಳುವುದರ ಬದಲು ಅದನ್ನು ಸಾಧಿಸುತ್ತೀರಿ. ಇದರ ಬದಲು ಅಂದು ಅಲ್ಲಿದ್ದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಲೇಡಿಗೋಷನ್ ಡಿಎಂಒ ಮೇಲೆ ಕಿಡಿಕಾರಿದರು.

ಇದೇ ರೀತಿ ಇತ್ತೀಚೆಗೆ ನೆಲ್ಯಾಡಿಯ ಮಹಿಳೆಯ ಚಿಕಿತ್ಸೆಗಾಗಿ ರಾತ್ರಿ ಪೂರ್ತಿ ವೆನ್ಲಾಕ್ ಆಸ್ಪತ್ರೆ ಹಾಗೂ ಲೇಡಿಗೋಷನ್ ಆಸ್ಪತ್ರೆಗೆ ಅಲೆದಾಡಿಸಿರುವ ಬಗ್ಗೆ ಆ ದಿನ ಯಾರೆಲ್ಲಾ ತಪ್ಪು ಮಾಡಿದ್ದಾರೆ ಅವರ ಮೇಲೆ ತನಿಖೆ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದ್ದೆ. ಇದೀಗ ತನಿಖೆ ಪೂರ್ಣಗೊಂಡಿದ್ದು, ಇಂದು ಅಥವಾ ನಾಳೆ ಕ್ರಮ ಕೈಗೊಳ್ಳುವ ಕಾರ್ಯ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕ ಪೂಂಜಾ, ಜಿಪಂ ಸದಸ್ಯರ ನಡುವೆ ಗದ್ದಲ : ದ.ಕ., ಉಡುಪಿ, ಕೊಡಗು ಮೂರೂ ಜಿಲ್ಲೆಗಳ ಡಯಾಲಿಸಿಸ್ ಕೇಂದ್ರಗಳನ್ನು ಪಶ್ಚಿಮ ಬಂಗಾಳದ ಸಂಸ್ಥೆ ನಿಭಾಯಿಸುತ್ತಿದೆ. ಈ‌ ಕಂಪನಿ ಯಾವ ರೀತಿ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದೆ ಎಂದು ಸರ್ಕಾರ ಗಮನಿಸಬೇಕಾಗಿದೆ. ಈ ಸಂಸ್ಥೆ ಪ್ರತಿ ಡಯಾಲಿಸಿಸ್ ಕೇಂದ್ರಗಳಿಂದ 5-6 ಲಕ್ಷ ರೂ. ಬಿಲ್ ಪಾವತಿ ಮಾಡಿಸಿಕೊಳ್ಳುತ್ತಿದೆಯೇ ವಿನಃ ಡಯಾಲಿಸಿಸ್ ಕೇಂದ್ರಗಳ ನೌಕರರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ.

ಕೊರೊನಾ ಸಂಕಷ್ಟದ ಈ ಸಂದರ್ಭ ಡಯಾಲಿಸಿಸ್ ಕೇಂದ್ರದ ನೌಕರರಿಗೆ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಒದಗಿಸುತ್ತಿಲ್ಲ. ಲಾಕ್‌ಡೌನ್ ಸಂದರ್ಭ ಡಯಾಲಿಸಿಸ್ ಕೇಂದ್ರಕ್ಕೆ ನೌಕರರನ್ನು ಕರೆತರುವ ಕೆಲಸವನ್ನೂ‌ ಸಂಸ್ಥೆ ಮಾಡಿಲ್ಲ. ಆದರೆ, 80 ಸಾವಿರ ರೂ. ಖರ್ಚು ಮಾಡಿ ಮನೆಮನೆಗೆ ವಾಹನಗಳ ಮೂಲಕ‌ ಡಯಾಲಿಸಿಸ್ ಕೇಂದ್ರದ ನೌಕರರನ್ನು ಕರೆ ತರುವ ಕಾರ್ಯ ನಾವು ಮಾಡಿದ್ದೇವೆ.‌ ಬಳಿಕ ಆ ಕಂಪನಿಯೇ ಈ ವ್ಯವಸ್ಥೆ ಮಾಡಬೇಕೆಂದು ಅವರಿಗೆ ತಿಳಿಸಿದರೂ, ಈವರೆಗೆ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ ಎಂದು ಹರೀಶ್ ಪೂಂಜಾ ಕಿಡಿಕಾರಿದರು.

ಇದೀಗ ಪಶ್ಚಿಮ ಬಂಗಾಳದ ಕಂಪನಿ ಪ್ರತೀ ದಿನ ನೌಕರರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಇದೀಗ ಬೆಳ್ತಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಓರ್ವ ಯುವತಿಯನ್ನು ಜಾರ್ಖಂಡ್‌ಗೆ ವರ್ಗಾವಣೆ ಮಾಡಿದೆ. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಒದಗಿಸಿ ಎಂದು ಸಂಸ್ಥೆಯ ರಾಜ್ಯ ಮುಖ್ಯಸ್ಥನಿಗೆ ದೂರವಾಣಿ ಕರೆ ಮಾಡಿದ್ರೆ, ಇನ್ನು ಮುಂದೆ ಬೆಳ್ತಂಗಡಿಯ ಡಯಾಲಿಸಿಸ್ ಕೇಂದ್ರಕ್ಕೆ ಯಾವುದೇ ವ್ಯವಸ್ಥೆ ಮಾಡುವುದಿಲ್ಲ ಎಂದು ಉಡಾಫೆ ಉತ್ತರ ಬಂದಿದೆ. ಅಲ್ಲದೆ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಡಯಾಲಿಸಿಸ್ ಮೆಷಿನ್ ನೀಡಿದೆ. ಆದರೆ, ಈ ಸಂಸ್ಥೆ ಅದೇ ಡಯಾಲಿಸಿಸ್ ಯಂತ್ರದಲ್ಲಿ ಡಯಾಲಿಸಿಸ್ ಮಾಡಿ 1,200 ರೂ. ದರ ವಿಧಿಸುತ್ತದೆ. ಆದರೆ, ಆರು ತಿಂಗಳಿಗೊಮ್ಮೆ 5 ಸಾವಿರ ನೀಡಿ‌ ಸರ್ವೀಸ್ ಮಾಡಿ ಅಂದರೆ ಮಾಡುತ್ತಿಲ್ಲ. ಆದ್ದರಿಂದ ಇದೀಗ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಯನ್ನು ರದ್ದುಗೊಳಿಸಿ ಅಲ್ಲನ ಸಿಬ್ಬಂದಿಗೆ ನಿರ್ವಹಿಸಲು ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಅವರು ಒತ್ತಾಯಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ಶಾಸಕರ ಮಾತಿನ ಪ್ರಕಾರ ಗೊಂದಲ ಹಾಗೂ ಅವ್ಯವಸ್ಥೆ ಇದೆ ಎಂದು ಅರ್ಥವಾಗುತ್ತದೆ ಎಂದು ಹೇಳುತ್ತಿದ್ದಂತೆ ಶಾಸಕ ಪೂಂಜಾ ಅವರು, ಇದು ಈಗಿನ ಒಪ್ಪಂದ ಅಲ್ಲ. ಈ ಪಶ್ಚಿಮ ಬಂಗಾಳದ ಡಯಾಲಿಸಿಸ್ ಸಂಸ್ಥೆಯೊಂದಿಗೆ ಸಿದ್ದರಾಮಯ್ಯ ಸರ್ಕಾರ ಇರುವಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳುತ್ತಿರುವಂತೆ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಹಮ್ಮದ್ ತುಂಬೆ ಮತ್ತಿತರ ಕಾಂಗ್ರೆಸ್ ಬೆಂಬಲಿತರು ಆಕ್ರೋಶ ವ್ಯಕ್ತಪಡಿಸಿದರು. ಅದುವರೆಗೆ ಶಾಂತ ರೀತಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಏಕಾಏಕಿ ಗದ್ದಲವೇರ್ಪಟ್ಟಿತು.

ಪರಿಸ್ಥಿತಿ ಶಾಂತಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಾಕಷ್ಟು ಪ್ರಯತ್ನ ಪಡಬೇಕಾಯಿತು. ಬಳಿಕ ಶಾಸಕ ಯು ಟಿ ಖಾದರ್ ಅವರು ಮಾತನಾಡಿ, ತಾನು‌ ರಾಜ್ಯ ಆರೋಗ್ಯ ಸಚಿವನಾಗಿರುವಾಗ ಬಡ ಡಯಾಲಿಸಿಸ್ ರೋಗಿಗಳು ಜಿಲ್ಲೆಯಲ್ಲಿರುವ ಒಂದೇ ಡಯಾಲಿಸಿಸ್ ಕೇಂದ್ರವನ್ನು ಅವಲಂಬಿಸುತ್ತಿದ್ದರು. ಈ ಹಿನ್ನೆಲೆ ತಾಲೂಕುಗಳಲ್ಲಿಯೂ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯುವಂತೆ ಸಿದ್ದರಾಮಯ್ಯ ಸರ್ಕಾರದ ಮೂಲಕ ತಾಲೂಕುಗಳಲ್ಲಿಯೂ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಲಾಯಿತು. ಪಶ್ಚಿಮ ಬಂಗಾಳ ಮೂಲದ ಡಯಾಲಿಸಿಸ್ ಸಂಸ್ಥೆಯ ನಿರ್ವಹಣೆಯ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ನೇತೃತ್ವದಲ್ಲಿ ಒಂದು ಸಮಿತಿ ನಡೆಸಿ ತನಿಖೆ ನಡೆಸುವುದು ಉತ್ತಮ ಎಂದು ಹೇಳಿದಾಗ ಪರಿಸ್ಥಿತಿ ತಿಳಿಗೊಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.