ETV Bharat / state

ಮಂಗಳೂರಿನಲ್ಲಿ ಅಬ್ಬಕ್ಕ ಉತ್ಸವಕ್ಕೆ ಚಾಲನೆ: ಸಮಾರಂಭದಲ್ಲಿ ವೀರರಾಣಿಯ ಗುಣಗಾನ - mangalore latest news

ಎರಡು ದಿನಗಳ ಕಾಲ ನಡೆಯಲಿರುವ ಮಂಗಳೂರಿನ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ 2019-20ಕ್ಕೆ ಚಾಲನೆ ದೊರೆತಿದೆ.

Ullala Abbakka Festival 2019-20
ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ 2019-20
author img

By

Published : Mar 1, 2020, 9:47 AM IST

ಮಂಗಳೂರು: ಉಳ್ಳಾಲದ ರಾಣಿ ಅಬ್ಬಕ್ಕ ನಾಡಿನ‌ ಹೋರಾಟದ ಶಕ್ತಿಯಾಗಿದ್ದು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಪ್ರಥಮ‌ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ‌. ಹೋರಾಟದ ಸಂದರ್ಭದಲ್ಲಿ ವೈರಿಗಳ ತಂತ್ರಕ್ಕೆ ಹೆಣೆಯುವ ಪ್ರತಿತಂತ್ರ, ಜಾಣತನ, ಸೂಕ್ಷ್ಮಗ್ರಹಿಕೆ ಮತ್ತು ಜನರಲ್ಲಿ ಆಕೆ ಸ್ವಾಭಿಮಾನದ ಕಿಚ್ಚು ಹಚ್ಚಿಸಿದ ಪರಿ ನಿಜಕ್ಕೂ ಬೆರಗು ಮೂಡಿಸುವಂತಹದ್ದು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ-2019-20 ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಅವರು, ಅಬ್ಬಕ್ಕ ಉತ್ಸವ ಜಿಲ್ಲಾಡಳಿತ ದವತಿಯಿಂದ ನಡೆಯುತ್ತಿರುವುದು ಸರ್ಕಾರಕ್ಕೆ ಗೌರವ ಎಂದು ಹೇಳಿದರು.

Ullala Abbakka Festival 2019-20
ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ 2019-20

ಶಾಸಕ ಯು.ಟಿ. ಖಾದರ್ ಮಾತನಾಡಿ, ಉತ್ತರದ ರಾಣಿಯರಿಗೆ ಸಿಕ್ಕ ಮನ್ನಣೆ ದಕ್ಷಿಣ ಭಾಗದ ಉಳ್ಳಾಲದ ರಾಣಿ ಅಬ್ಬಕ್ಕಳಿಗೆ ದೊರಕಲಿಲ್ಲ. ಆಕೆಯ ಕುರಿತು ಯಾರೂ ಹೆಚ್ಚು ಉತ್ಸುಕರಾಗಿರದ ಕಾರಣ ಅಬ್ಬಕ್ಕಳಿಗೆ ಆ ಕಾಲದಲ್ಲಿ ಹೆಚ್ಚು ಪ್ರಚಾರ ಸಿಗಲಿಲ್ಲ. ಅಬ್ಬಕ್ಕ ಉತ್ಸವಕ್ಕೆ ಪ್ರಪ್ರಥಮವಾಗಿ ಸಿ.ಎಂ ಯಡಿಯೂರಪ್ಪ 25 ಲಕ್ಷ ರೂ. ಅನುದಾನ‌ ಬಿಡುಗಡೆ ಮಾಡಿದ್ದಾರೆ. ಬಳಿಕ ಹಂತ ಹಂತವಾಗಿ ಅನುದಾನ ಬಿಡುಗಡೆ ಆಗುತ್ತಿರುವುದರಿಂದ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯಲು‌ ಸಾಧ್ಯವಾಗಿದೆ ಎಂದರು.

ಈ ಸಂದರ್ಭ ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ ಹಾಗೂ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಅಬ್ಬಕ್ಕ ಉತ್ಸವಕ್ಕೂ ಮುನ್ನ ಉಳ್ಳಾಲದ ಅಬ್ಬಕ್ಕ ಸರ್ಕಲ್​ನಲ್ಲಿ ಅಬ್ಬಕ್ಕಳ ಪುತ್ಥಳಿಗೆ ಶಾಸಕ ಯು.ಟಿ ಖಾದರ್ ಮಾಲಾರ್ಪಣೆ ಮಾಡಿದರು. ದೇರಳಕಟ್ಟೆಯಿಂದ ಅಸೈಗೋಳಿಯ ಉತ್ಸವ ವೇದಿಕೆಗೆ ಹೊರಟ ಸಾಂಸ್ಕೃತಿಕ ಮೆರವಣಿಗೆಗೆ ಶಾಸಕ ಖಾದರ್ ಚಾಲನೆ ನೀಡಿದರು.

ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್.ಜಿ., ತಹಶೀಲ್ದಾರ್ ಗುರುಪ್ರಸಾದ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ದಯಾನಂದ ಕತ್ತಲ್ ಸಾರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಜಿ.ಪಂ. ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.