ಮಂಗಳೂರು: ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೋಟೆಕಾರುವಿನಲ್ಲಿ ಕಾಂಗ್ರೆಸ್ಗೆ ಸೀಟ್ ಕಡಿಮೆ ಬಂದಿದ್ದರೂ, ಒಟ್ಟಾರೆ ಮತದಾರರ ಸಂಖ್ಯೆ ಗ್ರಾಮ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಮಾಜಿ ಸಚಿವ ಯು. ಟಿ. ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಎಷ್ಟು ಮತ ಗಳಿಸಿತ್ತೋ, ಅಷ್ಟೇ ಈ ಬಾರಿಯೂ ಗಳಿಸಿದೆ. ನಾಲ್ಕು ಸೀಟ್ಗಳನ್ನು 2 ಸಂಖ್ಯೆಯಲ್ಲಿ, ಒಂದು ಸೀಟ್ ಅನ್ನು ಕೇವಲ ಮೂರು ಮತಗಳಲ್ಲಿ ಕಳೆದುಕೊಂಡಿದ್ದೇವೆ. ಚುನಾವಣೆಯಲ್ಲಿ ಇದೆಲ್ಲಾ ಸ್ವಾಭಾವಿಕ. ಸ್ಥಳೀಯ ಮಟ್ಟದ ಅಭ್ಯರ್ಥಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಹಿಂದಿನಿಂದಲೂ ನನ್ನ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಮತದಾರರು ಕಾಂಗ್ರೆಸ್ ಪಕ್ಷದ ಬಗ್ಗೆ ಹೆಚ್ಚಿನ ಒಲವು ತೋರುತ್ತಾರೆ. ಅಧಿಕಾರ ದೊರಕಬೇಕಿತ್ತು. ಆದರೆ, ಸೀಟ್ ಕಡಿಮೆಯಾಗಿದೆ. ಎಂಪಿ, ಎಂಎಲ್ಎ ಚುನಾವಣೆಗಳನ್ನು ಪರಿಗಣಿಸಿದರೆ ಮತದಾರರು ಹೆಚ್ಚಿನ ಮತ ಹಾಕಿದ್ದಾರೆ. ಇದು ಸ್ಥಳೀಯ ಮಟ್ಟದ ಚುನಾವಣೆ ಆದ ಕಾರಣ ಸ್ವತಂತ್ರ ಅಭ್ಯರ್ಥಿಗಳಿಗೂ ಮತಗಳು ದೊರಕುತ್ತದೆ.
ಬಿಜೆಪಿ ಸರ್ಕಾರಕ್ಕೆ ಅಧಿಕಾರ ವಿಕೇಂದ್ರೀಕರಣದ ಆಸಕ್ತಿಯಿಲ್ಲ. ಅವರು ಅಧಿಕಾರ ಕೇಂದ್ರೀಕರಣದ ಆಸಕ್ತಿ ಹೊಂದಿದವರು. ಚುನಾವಣೆ ಮಾಡಲು ಕೋರ್ಟ್ ಆದೇಶವನ್ನೇ ಕಾಯುತ್ತಾರೆ. ಜಿಪಂ, ತಾಪಂ ಚುನಾವಣೆ ಮುಗಿದ ತಕ್ಷಣ ಸ್ಥಳೀಯಾಡಳಿತ ಚುನಾವಣೆ ಆಗಬೇಕಿತ್ತು. ಅದನ್ನು ಆರು ತಿಂಗಳಾದರೂ ಇನ್ನೂ ಮಾಡಿಲ್ಲ. ಕ್ಷೇತ್ರ ವಿಂಗಡನೆ ಸರಿ ಮಾಡಿಲ್ಲ ಅದಕ್ಕೊಂದು ಆಯೋಗ ಮಾಡುತ್ತೇವೆ ಎಂದು ಹೇಳಿ ಒಂದು ವರ್ಷವಾಯಿತು. ಕೋರ್ಟ್ನಿಂದ ತಪ್ಪಿಸಿಕೊಳ್ಳಲು ಆಯೋಗ ಮಾಡಿದ್ದಾರೆಯೇ ವಿನಃ ಬೇರೇನಲ್ಲ ಎಂದು ಖಾದರ್ ಹೇಳಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಚಾಮರಾಜನಗರದಲ್ಲಿ ಸಿದ್ದು, ಡಿಕೆಶಿ ಜಂಟಿ ಸಭೆ