ETV Bharat / state

ಮೊಬೈಲ್ ಫೋನ್ ಬಳಸದಂತೆ ಬುದ್ಧಿ ಹೇಳಿದಕ್ಕೆ ನಾಪತ್ತೆ : ಇಬ್ಬರು ಸಹೋದರಿಯರು ಚಿಕ್ಕಮಗಳೂರಲ್ಲಿ ಪತ್ತೆ - ಮಂಗಳೂರಲ್ಲಿ ನಾಪತ್ತೆಯಾಗಿದ್ದ ಇಬ್ಬರು ಸಹೋದರಿಯರು ಪತ್ತೆ

ಇಬ್ಬರು ಯುವತಿಯರನ್ನು ನಾಪತ್ತೆಯಾದ ಎರಡು‌ ದಿನದಲ್ಲಿ ಬಜಪೆ ಪೊಲೀಸ್ ಇನ್ಸ್​​​ಪೆಕ್ಟರ್ ಸಂದೇಶ್ ಪಿ‌.ಜಿ‌ ಅವರ ತಂಡ ಪತ್ತೆ ಹಚ್ಚುವಲ್ಲಿ‌ ಯಶಸ್ವಿಯಾಗಿದೆ. ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಜಾವಗಲ ಎಂಬಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ..

Two sisters found in Chikkamagaluru who have missed in Mangalore
ಚಿಕ್ಕಮಗಳೂರಲ್ಲಿ ನಾಪತ್ತೆ ಯಾಗಿದ್ದ ಇಬ್ಬರು ಹುಡುಗಿಯರು ಪತ್ತೆ
author img

By

Published : Feb 11, 2022, 7:45 PM IST

ಮಂಗಳೂರು : ಮೊಬೈಲ್ ಬಳಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಇಬ್ಬರು ಸಹೋದರಿಯರನ್ನ ಚಿಕ್ಕಮಗಳೂರಿನಲ್ಲಿ ಮಂಗಳೂರಿನ ಬಜಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಜಪೆ ಗ್ರಾಮದ ಕೊಂಚಾರು ನಿವಾಸಿ ಮಾಮು ಎಂಬುವರ ಇಬ್ಬರು ಪುತ್ರಿಯರಾದ ಮುಬೀನಾ (22) ಮತ್ತು ಬುಶ್ರಾ (21) ಎಂಬುವರು ನಾಪತ್ತೆಯಾಗಿದ್ದರು. ಫೆಬ್ರವರಿ 7ರಂದು ರಾತ್ರಿ ಊಟ ಮಾಡಿ ಮಲಗಿದ್ದವರು, ಬೆಳಗ್ಗೆ ನೋಡಿದಾಗ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇಬ್ಬರು ಯುವತಿಯರನ್ನು ನಾಪತ್ತೆಯಾದ ಎರಡು‌ ದಿನದಲ್ಲಿ ಬಜಪೆ ಪೊಲೀಸ್ ಇನ್ಸ್​​​ಪೆಕ್ಟರ್ ಸಂದೇಶ್ ಪಿ‌.ಜಿ‌ ಅವರ ತಂಡ ಪತ್ತೆ ಹಚ್ಚುವಲ್ಲಿ‌ ಯಶಸ್ವಿಯಾಗಿದೆ. ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಜಾವಗಲ ಎಂಬಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: ಮಂಗಳೂರು: ಮನೆಯಲ್ಲಿದ್ದ ಇಬ್ಬರು ಸಹೋದರಿಯರು ನಾಪತ್ತೆ; ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.