ಮಂಗಳೂರು : ದ.ಕ.ಜಿಲ್ಲೆಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 52 ಏರಿಕೆಯಾಗಿದೆ.
35 ವರ್ಷದ ಮಹಿಳೆ, ಹಾಗು 31 ವರ್ಷದ ಪುರುಷ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಯೆಯ್ಯಾಡಿ ಮೂಲದ ಮಹಿಳೆ ಮುಂಬೈನಿಂದ ಆಗಮಿಸಿದ್ದರು. ಇವರು ಪತಿ ಹಾಗೂ ಮಗುವಿನ ಜೊತೆ ಕ್ವಾರೆಂಟೈನ್ನಲ್ಲಿದ್ದರು, ಇದೀಗ ಆಕೆಯ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿದ್ದು, ಸೋಂಕು ದೃಢವಾಗಿದೆ.
ಜಪ್ಪಿನಮೊಗರುವಿನ 31 ವರ್ಷದ ಪುರುಷ, ಅನುಮಾನಗೊಂಡು ಸ್ವಯಂ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರಿಗೂ ಸೋಂಕು ದೃಢ ಪಟ್ಟಿದೆ. ಈ ಇಬ್ಬರನ್ನೂ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖೈ 52 ಕ್ಕೆ ಏರಿಕೆಯಾಗಿದೆ. ಅದರಲ್ಲಿ 16 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ, ಐವರು ಮೃತಪಟ್ಟಿದ್ದಾರೆ. 31ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.