ETV Bharat / state

ಮುಜರಾಯಿ ದೇಗುಲಗಳಲ್ಲಿ ತಿಂಗಳಿಗೆ ಎರಡು ದಿನ ಸಪ್ತಪದಿ ಕಾರ್ಯಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಆಯಾ ಜಿಲ್ಲೆಗಳ ಜನರ ಸಂಪ್ರದಾಯ, ಪರಂಪರೆಗೆ ಅನುಗುಣವಾಗಿ ಮುಜರಾಯಿ ದೇಗುಲಗಳಲ್ಲಿ ತಿಂಗಳಿಗೆ ಎರಡು ದಿನ ಸಪ್ತಪದಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

two-month-saptapadi-program-in-mujarai-temples-minister-kota-srinivasa-poojary
ಸಚಿವ ಕೋಟ ಶ್ರೀನಿವಾಸ ಪೂಜಾರಿ
author img

By

Published : Jan 23, 2021, 9:44 AM IST

ಸುಬ್ರಮಣ್ಯ (ದಕ್ಷಿಣಕನ್ನಡ): ಮುಜರಾಯಿ ದೇಗುಲಗಳಲ್ಲಿ ತಿಂಗಳಿಗೆ ಎರಡು ದಿನ ಸಪ್ತಪದಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮುಜರಾಯಿ ದೇಗುಲಗಳಲ್ಲಿ ತಿಂಗಳಿಗೆ ಎರಡು ದಿನ ಸಪ್ತಪದಿ ಕಾರ್ಯಕ್ರಮ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆದ 11ನೇ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯ ಬಳಿಕ ಮಾತನಾಡಿದ ಅವರು, ಫೆಬ್ರವರಿ ತಿಂಗಳ 17 ಮತ್ತು 25ರಂದು ಸಪ್ತಪದಿ ಸರಳ ಸಾಮೂಹಿಕ ವಿವಾಹ ಆಯೋಜಿಸಲಾಗುವುದು. ಆ ಬಳಿಕ ತಿಂಗಳುಗಳಲ್ಲಿನ ಮುಹೂರ್ತ ನೋಡಿಕೊಂಡು ಆಯಾ ಜಿಲ್ಲೆಗಳ ಜನರ ಸಂಪ್ರದಾಯ, ಪರಂಪರೆಗೆ ಅನುಗುಣವಾಗಿ ಸಪ್ತಪದಿ ಕಾರ್ಯಕ್ರಮ ನಡೆಸಲಾಗುವುದು. ಯಾವುದೇ ದೇವಸ್ಥಾನದವರು ಅಥವಾ ಜಿಲ್ಲೆಯವರು ಮುಂದೆ ಬಂದರೆ ಅವರು ಹೇಳಿದ ದಿನಾಂಕದಂದೇ ಸಪ್ತಪದಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಸುಮಾರು 206 ಎ ದರ್ಜೆ ದೇವಾಲಯಗಳು ಮತ್ತು ಸುಮಾರು 310 ಬಿ ದರ್ಜೆ ದೇವಾಲಯಗಳಿವೆ. ರಾಜ್ಯ ಧಾರ್ಮಿಕ ಪರಿಷತ್‌ನ ಮೂಲಕ ಈಗಾಗಲೇ 80 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲು ಅರ್ಜಿ ಕರೆಯಲಾಗಿತ್ತು. ಅದರಲ್ಲಿ ಸುಮಾರು 11 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯು ರಚನೆಯಾಗಿ, ಆಡಳಿತ ಸೇವೆ ನಡೆಸುತ್ತಿದೆ.

ಓದಿ: ಖಾತೆ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ: ಸಚಿವ ಸೋಮಶೇಖರ್

ಪೊಲೀಸ್‌ ವರದಿಗಳು ಬಾಕಿಯಿರುವ ದೇವಾಲಯಗಳು ಮಾತ್ರ ವ್ಯವಸ್ಥಾಪನಾ ಸಮಿತಿ ರಚನೆಗೆ ಬಾಕಿಯಾಗಿದೆ. ಇಂದಿನ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಈಗಾಗಲೇ ಅವಧಿ ಮುಗಿದಿರುವ ದೇವಾಲಯಗಳಿಗೆ ಶೀಘ್ರ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಕರೆಯಲು ನಿರ್ಧರಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.