ETV Bharat / state

ಹಸುಗೂಸಿಗೆ ಕೊರೊನಾ ಸೋಂಕು ಶಂಕೆ: ಕೋವಿಡ್ ನಿಯಮದಂತೆ ಅಂತ್ಯಸಂಸ್ಕಾರ - ಎರಡು ತಿಂಗಳ ಮಗು ಸಾವು

ವಾಂತಿ,ಕಫದಿಂದ ಎರಡು ತಿಂಗಳ ಮಗು ಸಾವನ್ನಪ್ಪಿದೆ. ಮಗುವಿನ ಸಾವಿಗೆ ಕೊರೊನಾ ಕಾರಣವಿರಬಹುದು ಎಂಬ ಶಂಕೆಯಲ್ಲಿ ಕೋವಿಡ್​ ನಿಯಮದಂತೆ ಅಂತ್ಯಸಂಸ್ಕಾರ ನಡೆಸಲಾಗಿದೆ.

Two month baby died in Mangaluru
Two month baby died in Mangaluru
author img

By

Published : Jul 18, 2020, 8:41 PM IST

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ತಿಂಗಳ ಹಸುಗೂಸು ಮೃತಪಟ್ಟಿದ್ದು, ಬಜರಂಗದಳದ ಕಾರ್ಯಕರ್ತರು ಕೋವಿಡ್ ನಿಯಮದಂತೆ ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ್ದಾರೆ.

Two month baby died in Mangaluru
ಕೋವಿಡ್ ನಿಯಮದಂತೆ ಮಗುವಿನ ಅಂತ್ಯಸಂಸ್ಕಾರ
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಗಾಣದಕೊಟ್ಯದ ದಂಪತಿಯ ಎರಡು ತಿಂಗಳ ಈ ಮಗು ವಾಂತಿ, ಕಫದಿಂದ ಬಳಲುತ್ತಿತ್ತು. ಆದ್ದರಿಂದ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಸುದ್ದಿ ತಿಳಿದ ಬಜರಂಗದಳದ ಕಾರ್ಯಕರ್ತರು ಮೃತ ಮಗುವಿಗೆ ಕೋವಿಡ್ ನಿಯಮದಂತೆ ನಂದಿಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ‌ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಗುವಿಗೆ ಕೊರೊನಾ ಸೋಂಕು ಇರಬಹುದು ಎಂಬ ಶಂಕೆ ವ್ಯಕ್ತವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ನಾಲ್ವರು ಬಜರಂಗದಳದ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಸಾಕಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ಅಂತ್ಯಸಂಸ್ಕಾರಕ್ಕಾಗಿ ಅವರು ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.