ETV Bharat / state

ಬಂಟ್ವಾಳದಲ್ಲಿ ಬೈಕ್​​ಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು - bantwala accident

ಬೈಕ್​​ಗೆ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

two died by accident in bantwala
ಬಂಟ್ವಾಳದಲ್ಲಿ ಬೈಕ್​​ಗೆ ಲಾರಿ ಡಿಕ್ಕಿ
author img

By

Published : Jun 14, 2022, 8:05 PM IST

ಬಂಟ್ವಾಳ(ದಕ್ಷಿಣ ಕನ್ನಡ): ಬಂಟ್ವಾಳದ ಸಿದ್ಧಕಟ್ಟೆ ಸಮೀಪ ಸೊರ್ನಾಡು ಎಂಬಲ್ಲಿ ಇಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೊರೆಟ್ಟೊಪದವು ನಿವಾಸಿ ನಿತೇಶ್ (30), ಮಯ್ಯರಬೈಲು ನಿವಾಸಿ ಶಶಿಧರ್ (26) ಮೃತರು.

ಇವರಿಬ್ಬರೂ ಸಿದ್ದಕಟ್ಟೆಯಿಂದ ಬಿ.ಸಿ ರೋಡ್ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಬಿ.ಸಿ ರೋಡಿನಿಂದ ಕಾರ್ಕಳಕ್ಕೆ ತೆರಳುತ್ತಿದ್ದ ಟಿಪ್ಪರ್ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಬಳಿಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಲು ಲಾರಿ ಚಾಲಕ ಯತ್ನಿಸಿದ್ದಾನೆ. ಆದ್ರೆ ಕೂಡಲೇ ಸ್ಥಳೀಯರು ಲಾರಿಯನ್ನು ಬೆನ್ನಟ್ಟಿದ್ದು ಕುದ್ಕೋಳಿ ಎಂಬಲ್ಲಿ ತಡೆದು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ ಮೂರ್ತಿ ಸಹಿತ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಇಬ್ಬರು ಶಾಸಕರ ಸದಸ್ಯತ್ವ ರದ್ದುಪಡಿಸಲು ನಾಳೆ ಸ್ಪೀಕರ್​ಗೆ ಜೆಡಿಎಸ್‍ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.