ETV Bharat / state

ಮಂಗಳೂರು ಮುಸ್ಲಿಂ ಫೇಸ್​ಬುಕ್​ ಪೇಜ್ ಲೈಕ್ ಮಾಡಿದ ಇಬ್ಬರು ಪೊಲೀಸ್ ವಶಕ್ಕೆ: ಆಯುಕ್ತರು - ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ

ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಕೊಲೆ ಕೃತ್ಯವನ್ನು ವಿಜೃಂಭಿಸುವ ರೀತಿಯಲ್ಲಿ ಪ್ರಚೋದನಕಾರಿ ರೀತಿಯಲ್ಲಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಂ ಎಂಬ ಫೇಸ್​ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿರುವ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.

two-detained-for-following-facebook-page-in-mangaluru
ಮಂಗಳೂರು ಮುಸ್ಲಿಂ ಪೇಜ್ ಲೈಕ್ ಮಾಡಿದ ಇಬ್ಬರು ಪೊಲೀಸ್ ವಶಕ್ಕೆ
author img

By

Published : Feb 25, 2022, 6:09 PM IST

Updated : Feb 25, 2022, 8:02 PM IST

ಮಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಕೊಲೆ ಕೃತ್ಯವನ್ನು ವಿಜೃಂಭಿಸುವ ರೀತಿಯಲ್ಲಿ ಪ್ರಚೋದನಕಾರಿ ರೀತಿಯಲ್ಲಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಂ ಎಂಬ ಫೇಸ್​ಬುಕ್ ಖಾತೆಯ ಐಕಾನ್ ಅನ್ನು ಲೈಕ್ ಮಾಡಿರುವ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಹಾಗೂ ಮುಲ್ಕಿ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಲ್ಲದೇ ಮಂಗಳೂರು ಮುಸ್ಲಿಂ ಖಾತೆಯ ತನಿಖೆ ಮುಂದುವರೆದಿದೆ. ಈ ಬಗ್ಗೆ ಈಗಾಗಲೇ ಫೇಸ್​​​ಬುಕ್​ಗೆ ನೋಟಿಸ್ ನೀಡಲಾಗಿದ್ದು, ಅಲ್ಲಿಂದ ಯಾರೂ ಈ ಗ್ರೂಪ್ ಎಂಬ ಮಾಹಿತಿ ಬಂದ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಫೇಸ್​​ಬುಕ್ ಖಾತೆಯ ವಿರುದ್ಧ ಈಗಾಗಲೇ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್​ಬುಕ್​ ಪೇಜ್ ಲೈಕ್ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರ ಮಾಹಿತಿ

ಇದೇ ಖಾತೆಯಲ್ಲಿ 2016ರಲ್ಲಿ ಕಟೀಲು ಶ್ರೀದೇವಿ ಹಾಗೂ ಸೀತಾ ಮಾತೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಆ ಬಳಿಕ ಈ ಮಂಗಳೂರು ಮುಸ್ಲಿಂ ಖಾತೆಯನ್ನು ಬ್ಲಾಕ್ ಮಾಡಲು ಫೇಸ್​​ಬುಕ್ ಗೆ ಮನವಿ ಮಾಡಲಾಗಿತ್ತು. ಅದರಂತೆ ಖಾತೆ ಬ್ಲಾಕ್ ಆಗಿತ್ತು. ಇದೀಗ ಮತ್ತೆ ಸ್ಪೆಲ್ಲಿಂಗ್ ಅಲ್ಲಿ ವ್ಯತ್ಯಾಸ ಮಾಡಿ ಖಾತೆಯನ್ನು ಮತ್ತೆ ಮರು ತೆರೆಯಲಾಗಿದೆ ಎಂದು ತಿಳಿದು ಬಂದಿದೆ.

ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ: ಇನ್ನೊಂದು ಪ್ರಕರಣದಲ್ಲಿ ಕೊಣಾಜೆ ಮಂಗಳೂರು ವಿವಿಯ ಮುಖ್ಯ ದ್ವಾರದಲ್ಲಿ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಗಳಾದ ಅಮೀರ್(39), ಮಹಮ್ಮದ್ ಫರ್ವಿಜ್(40), ಮಹಮ್ಮದ್ ಅನ್ನಿಫ್(36) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಪೊಲೀಸರು 3.60 ಲಕ್ಷ ರೂ. ಮೌಲ್ಯದ 60 ಗ್ರಾಂ ನಿಷೇಧಿತ ಮಾದಕದ್ರವ್ಯ ಎಂಡಿಎಂಎ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಮಾದಕದ್ರವ್ಯ ಮಾರಾಟ ಮಾಡಲು ಬಳಸಿದ್ದ 5 ಲಕ್ಷ ರೂ. ಮೌಲ್ಯದ ಕಾರು, ಡಿಜಿಟಲ್ ತೂಕ ಮಾಪನ, 2 ಸ್ಟ್ರೋಕ್ ಟ್ಯೂಬ್ ಮತ್ತು ಲೈಟರ್ ಸಹಿತ 8.60 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರ ಬಂಧನ

ಇದನ್ನೂ ಓದಿ: ಹಿಜಾಬ್ ನಿರ್ಬಂಧ ಪ್ರಶ್ನಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಪೂರ್ಣ.. ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಬೆಂಗಳೂರು ಮೂಲದ ವ್ಯಕ್ತಿಯಿಂದ ಇವರು ಎಂಡಿಎಂಎ ಮಾದಕದ್ರವ್ಯವನ್ನು ಪಡೆದಿರುವ ಮಾಹಿತಿ ಲಭ್ಯವಾಗಿದೆ. ಕಾಸರಗೋಡಿನಲ್ಲಿ ಇವರದೊಂದು ಜಾಲ ಇರುವುದು ಬಯಲಾಗಿದೆ. ಅಲ್ಲದೇ ಕಾಸರಗೋಡು ಹಾಗೂ ಮಂಜೇಶ್ವರ ಮೂಲದ ಕುಖ್ಯಾತ ರೌಡಿಶೀಟರ್​​ಗಳ ಜೊತೆಗೂ ಇವರು ಸಂಬಂಧ ಹೊಂದಿರುವುದಾಗಿ ಬೆಳಕಿಗೆ ಬಂದಿದೆ.

ಅವರನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಪೊಲೀಸ್ ಅಧಿಕಾರಿಗಳು ‌ಮಾಡಲಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಹೇಳಿದರು.

Last Updated : Feb 25, 2022, 8:02 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.