ETV Bharat / state

ಕುಕ್ಕೆ ಸುಬ್ರಮಣ್ಯ ದರ್ಶನಕ್ಕೆ ಹೊರಟಿದ್ದ ಕಾರು ಅಪಘಾತ: ಬಾಲಕಿ ಸೇರಿ ಇಬ್ಬರು ಸಾವು - ಕುಕ್ಕೆ ಸುಬ್ರಮಣ್ಯ ದರ್ಶನ ಮುಗಿಸಿ ಕಾರು ಅಪಘಾತ

ಕುಕ್ಕೆ ಸುಬ್ರಹ್ಮಣ್ಯ–ಗುಂಡ್ಯ ರಾಜ್ಯ ಹೆದ್ದಾರಿಯ ಚೇರು ಎಂಬಲ್ಲಿ ಕಾರು ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

two-dead-in-car-accident-near-subrahmanya
ಕುಕ್ಕೆ ಸುಬ್ರಮಣ್ಯ ದರ್ಶನಕ್ಕೆ ಹೊರಟಿದ್ದ ಕಾರು ಅಪಘಾತ: ಬಾಲಕಿ ಸೇರಿ ಇಬ್ಬರು ಮೃತ
author img

By

Published : Jun 6, 2022, 9:01 PM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯ–ಗುಂಡ್ಯ ರಾಜ್ಯ ಹೆದ್ದಾರಿಯ ಚೇರು ಎಂಬಲ್ಲಿ ಕಾರೊಂದು ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಉಳಿದ ನಾಲ್ವರು ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ರಾಮನಗರದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ನಾಗೇಶ್(32) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕಿ ತೇಜಸ್ವಿನಿ(14) ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಕಾರಿನಲ್ಲಿದ್ದ ಚಾಲಕ ರವಿ (30), ರಜನಿ (24), ರಂಜಿತ್ (24), ಅಚಿಂತ್ಯಾ (8) ಹಾಗೂ ಒಂದು ಪುಟ್ಟ ಮಗುವಿಗೆ ಗಾಯಗಳಾಗಿವೆ. ಇವರೆಲ್ಲ ಒಂದೇ ಕುಟುಂಬದವರಾಗಿದ್ದು, ಒಟ್ಟು ಏಳು ಮಂದಿ ರಾಮನಗರದಿಂದ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಹೊರಟಿದ್ದರು.

two-dead-in-car-accident-near-subrahmanya
ಕಾರು ಅಪಘಾತ

ಪುತ್ತೂರಿನ ಆಸ್ಪತ್ರೆಯಿಂದ ಬಾಲಕಿಯ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ನಾಗೇಶ್ ಅವರ ಮೃತದೇಹವನ್ನು ಕಡಬದ ಶವಾಗಾರದಲ್ಲಿ ಇರಿಸಲಾಗಿದೆ. ಇಲ್ಲಿ ಮೃತದೇಹಗಳ ಮಹಜರು ನಡೆಸಿ ಮೃತರ ಊರಿಗೆ ಕಳುಹಿಸಲಾಗುವುದು ಎಂದು ಕಡಬ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಕಡಬ ಪಿಎಸ್​ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀತಿ ಹೆಸರಲ್ಲಿ ಯುವತಿ ಜೊತೆ ನಿರಂತರ ದೈಹಿಕ ಸಂಪರ್ಕ : ಕೈಕೊಟ್ಟ ಎಂಜಿನಿಯರ್ ಬಂಧನ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.