ETV Bharat / state

ಕಲ್ಪನೆ ಬಳಿ ಖಾಸಗಿ ಬಸ್​ಗೆ ಗುದ್ದಿದ ಮದುವೆ ದಿಬ್ಬಣದ ಬಸ್​... 30 ಮಂದಿಗೆ ಗಾಯ

ಮದುವೆಯ ದಿಬ್ಬಣದ ಬಸ್ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ಬಿ.ಸಿ.ರೋಡ್- ಪೊಳಲಿ ರಸ್ತೆಯ ತಿರುವಿನಲ್ಲಿ‌ ಇಂದು ಮಧ್ಯಾಹ್ನ ನಡೆದಿದೆ.

author img

By

Published : Feb 16, 2020, 6:06 PM IST

Updated : Feb 16, 2020, 8:03 PM IST

two-bus-accident-in-mangalore
ಮದುವೆ ದಿಬ್ಬಣದ ಬಸ್​ನಿಂದ ಖಾಸಗಿ ಬಸ್​ಗೆ ಡಿಕ್ಕಿ

ಮಂಗಳೂರು: ಮದುವೆಯ ದಿಬ್ಬಣದ ಬಸ್ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸುಮಾರು 30 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡದ ಬಿ.ಸಿ. ರೋಡ್- ಪೊಳಲಿ ರಸ್ತೆಯ ತಿರುವಿನಲ್ಲಿ‌ ಇಂದು ಮಧ್ಯಾಹ್ನ ನಡೆದಿದೆ. ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಲ್ಪನೆ ಬಳಿ ಖಾಸಗಿ ಬಸ್​ಗೆ ಗುದ್ದಿದ ಮದುವೆ ದಿಬ್ಬಣದ ಬಸ್

ಎರಡೂ ಬಸ್ ಗಳು ಬಿ.ಸಿ .ರೋಡ್​​ನಿಂದ ಪೊಳಲಿ ಕಡೆಗೆ ಸಂಚರಿಸುತ್ತಿದ್ದವು. ಕಲ್ಪನೆ ಎಂಬಲ್ಲಿರುವ ತಿರುವಿನಲ್ಲಿ ಮುಂದಿನಿಂದ ಹೋಗುತ್ತಿದ್ದ ರೂಟ್ ಬಸ್​ಗೆ ಹಿಂದಿನಿಂದ ಬರುತ್ತಿದ್ದ ಮದುವೆ ದಿಬ್ಬಣದ ಬಸ್​ ಡಿಕ್ಕಿ ಹೊಡೆದಿದೆ. ಪರಿಣಾಮ ಮದುವೆ ದಿಬ್ಬಣದ ಬಸ್ ಚರಂಡಿಗೆ ಬಿದ್ದರೆ, ರೂಟ್ ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ.

two-bus-accident-in-mangalore
ಮದುವೆ ದಿಬ್ಬಣದ ಬಸ್​ನಿಂದ ಖಾಸಗಿ ಬಸ್​ಗೆ ಡಿಕ್ಕಿ.

ದುರ್ಘಟನೆಯಲ್ಲಿ ಸುಮಾರು 30 ಜನರು ಗಾಯಗೊಂಡಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಬಸ್ ಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Last Updated : Feb 16, 2020, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.