ಮಂಗಳೂರು: ನಗರದ ಕಣಚೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಇಂಟರ್ಶಿಪ್ ವಿದ್ಯಾರ್ಥಿನಿ ವೈಶಾಲಿ ಗಾಯಕ್ ವಾಡ್(25) ಆತ್ಮಹತ್ಯೆಗೆ ಪ್ರೇಮಿಯೊಂದಿಗಿನ ವಿರಸವೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಬೀದರ್ ಜಿಲ್ಲೆಯ ಆನಂದನಗರ ಮೂಲದ ವೈಶಾಲಿ ಗಾಯಕ್ ವಾಡ್ ಅವರು ನಗರದ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಇಂಟರ್ಶಿಪ್ ವಿದ್ಯಾರ್ಥಿನಿಯಾಗಿದ್ದು, ಎರಡು ದಿನಗಳ ಹಿಂದೆ ತಾನು ನೆಲೆಸಿದ್ದ ಮಂಗಳೂರಿನ ಹೊರವಲಯದಲ್ಲಿರುವ ಕುತ್ತಾರು ಮಲ್ಲೂರು ಸಿಲಿಕಾನಿಯಾ ಅಪಾರ್ಟ್‌ಮೆಂಟ್ ನ ತನ್ನ ಫ್ಲ್ಯಾಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಆಗಸದಲ್ಲಿ ನಕ್ಷತ್ರದಂತೆ ಗೋಚರಿಸಿದ ಬೆಳಕಿನ ಸರ... ವಿಜ್ಞಾನಿಗಳು ಹೇಳಿದ್ದು ಹೀಗೆ
ಇದೀಗ ಆಕೆಯ ಆತ್ಮಹತ್ಯೆಗೆ ಪ್ರೇಮಿಯೊಂದಿಗಿನ ವಿರಸವೇ ಕಾರಣವೆಂದು ತಿಳಿದು ಬಂದಿದೆ. ವೈಶಾಲಿ ಗಾಯಕ್ ವಾಡ್ ಗೆ ಸಹಪಾಠಿ ಕೇರಳ ರಾಜ್ಯದ ಪಾಲಕ್ಕಾಡ್ ಸುಜೀಶ್(24) ಎಂಬಾತನೊಂದಿಗೆ ಪ್ರೇಮವಿತ್ತು. ಆತ ಆಕೆಯಿರುವ ಅಪಾರ್ಟ್‌ಮೆಂಟ್ ನ ಮತ್ತೊಂದು ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ. ಆದರೆ ಇದೀಗ ಇವರಿಬ್ಬರ ನಡುವಿನ ವಿರಸದಿಂದಲೇ ವೈಶಾಲಿ ಗಾಯಕ್ವಾಡ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಉಳ್ಳಾಲ ಪೊಲೀಸರು ಸುಜೀಶ್ಅನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.