ETV Bharat / state

ತುಳುನಾಡಿನ ಅಧ್ಯಯನ ಪಠ್ಯಪುಸ್ತಕಗಳಲ್ಲಿ ಅಳವಡಿಕೆ: ಸರ್ಕಾರದಿಂದ ಸಕಾರಾತ್ಮಕ ‌ಸ್ಪಂದನೆ

author img

By

Published : Jul 1, 2020, 8:41 AM IST

ತುಳುನಾಡಿನ ಅಧ್ಯಯನಗಳ ಬಗ್ಗೆ ಸರಕಾರ ಆಸಕ್ತಿ ತಳೆದಿರೋದು ಸಂತಸದ ಸಂಗತಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ತಿಳಿಸಿದ್ದಾರೆ.

Dayananda G. kattal sar
ದಯಾನಂದ ಜಿ. ಕತ್ತಲ್ ಸಾರ್

ಮಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳು ಪುನರ್ ರಚನೆಯಾಗುವಾಗ ರಚನಾ ಸಮಿತಿಯವರೊಂದಿಗೆ ಚರ್ಚಿಸಿ ಪಠ್ಯಪುಸ್ತಕಗಳಲ್ಲಿ ತುಳುನಾಡಿನ ಅಧ್ಯಯನಗಳನ್ನು ಸೇರಿಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುತ್ತದೆ ಎಂದು ಸರ್ಕಾರಕ್ಕೆ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ವರದಿ ಮಾಡಿದ್ದಾರೆ‌. ಈ ಮೂಲಕ ತುಳುನಾಡಿನ ಅಧ್ಯಯನಗಳ ಬಗ್ಗೆ ಸರಕಾರ ಆಸಕ್ತಿ ತಳೆದಿರೋದು ಸಂತಸದ ಸಂಗತಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ತಿಳಿಸಿದ್ದಾರೆ.

ಶಾಲಾ ಪಠ್ಯಪುಸ್ತಕಗಳಲ್ಲಿ ಕೆಲವು ಇತಿಹಾಸದ ಅಧ್ಯಯನಗಳನ್ನು ಮರು ವಿಮರ್ಶೆ ಮಾಡುವ ವಿಚಾರದ ಬಗ್ಗೆ ಸಿಎಂ ಯಡಿಯೂರಪ್ಪ ಅವರ ಆದೇಶದ ಮೇರೆಗೆ ಶಿಕ್ಷಣ ಸಚಿವರು ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿ ಮಾಡಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.

ಕರ್ನಾಟಕದ ಮುಖ್ಯ ಭಾಗವಾಗಿರುವ ತುಳುನಾಡಿನ ಇತಿಹಾಸವನ್ನು ಕದಂಬ, ಚಾಲುಕ್ಯರ ಕಾಲಮಾನದಲ್ಲಿ ತುಳುನಾಡಿನ ಆಳುಪರ ಆಳ್ವಿಕೆ, ಇಲ್ಲಿನ ಐತಿಹಾಸಿಕ, ಧಾರ್ಮಿಕ ಸ್ಥಳಗಳು, ಪುರಾತನ ಕವಿಗಳು, ಸ್ವಾತಂತ್ರ್ಯ ಹೋರಾಟಗಾರರು, ತುಳುನಾಡಿನ ವೈಶಿಷ್ಟ್ಯಗಳನ್ನು ಅಳಿಯಕಟ್ಟು ಸಂತಾನ ಮುಂತಾದ ವಿಚಾರಗಳನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ತಾನು ಈ ಹಿಂದೆ ಮನವಿ ಮಾಡಿದ್ದೆ. ಈಗ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ದಯಾನಂದ ಜಿ. ಕತ್ತಲ್ ಸಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.