ಮಂಗಳೂರು: ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ ಎಂದು ಮಂಗಳಮುಖಿಯೊಬ್ಬರು ನ್ಯಾಯಾಧೀಶರಿಗೆ ದೂರು ನೀಡಿದರು. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ ಮತ್ತು ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಂಗಳಮುಖಿ, "ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ. ಅವರೇ ಹೀಗೆ ಮಾಡಿದರೆ, ನಾವು ಯಾರಿಗೆ ದೂರು ನೀಡುವುದು?" ಎಂದರು.
ಇದನ್ನೂ ಓದಿ: ವಿವಾದಕ್ಕೆ ಕಾರಣವಾದ ಅಡ್ಯನಡ್ಕ ಶೈಕ್ಷಣಿಕ ಕಾರ್ಯಾಗಾರ: ವಿಧಾನಸೌಧದಲ್ಲೂ ವಿಷಯ ಪ್ರಸ್ತಾಪ
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ.ಕ.ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜೆ. ಪ್ರತಿಕ್ರಿಯಿಸಿ, "ಶೋಷಣೆಗೊಳಗಾಗುವ ಲಿಂಗತ್ವ ಅಲ್ಪಸಂಖ್ಯಾತರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ಕೊಡಬೇಕು. ಟ್ರಾನ್ಸ್‌ಜೆಂಡರ್ಸ್ ಉಚಿತವಾಗಿ ನ್ಯಾಯ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ದೂರು ಕೊಡಬಹುದು" ಎಂದು ಸೂಚಿಸಿದರು.
ಇದನ್ನೂ ಓದಿ : ಮಹಿಳೆಯ ಕೊಂದು ಶವದ ಜೊತೆ ಫೇಸ್‌ಬುಕ್ ಲೈವ್! ಬಳಿಕ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
"ಪ್ರಾಧಿಕಾರದ ಸೇವೆ ಉಚಿತ. ದೂರುಗಳು ಬಂದಾಗ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಕೂಡ ಪಡೆಯಲು ಅವಕಾಶವಿರುತ್ತದೆ ಎಂದು ಅವರು ಧೈರ್ಯ ತುಂಬಿದರು. ಯಾವುದೇ ಕಚೇರಿ ಸೇರಿದಂತೆ ಎಲ್ಲಿಯಾದರೂ ನಮಗೆ ಕೆಲಸ ಕೊಡಿ. ಕಸ ಗುಡಿಸುವ ಕೆಲಸವಾದರೂ ಆದೀತು. ನಮಗೂ ಈ ಹಾಳು ದಂಧೆ ನಡೆಸೋಕೆ ಮನಸ್ಸಿಲ್ಲ. ನೆಮ್ಮದಿಯಿಂದ ನಮ್ಮ ಪಾಡಿಗೆ ಇರುತ್ತೇವೆ" ಎಂದು ಮಂಗಳಮುಖಿಯೊಬ್ಬರು ಮನವಿ ಮಾಡಿದರು.
ಇದನ್ನೂ ಓದಿ : ಪ್ರತ್ಯೇಕ ಪ್ರಕರಣ: ಹಣಕ್ಕಾಗಿ ತಂದೆ ಕೊಲೆ ಮಾಡಿದ ಮಗ.. ಹೊಲಕ್ಕೆ ತಂದೆ ಭೇಟಿಗೆ ಹೋದ ಪುತ್ರ ಕಾಲುವೆಯಲ್ಲಿ ಬಿದ್ದು ಸಾವು
3 ಪಟ್ಟು ಅಧಿಕ ಬಾಡಿಗೆ ವಸೂಲಿ: "ಇಲ್ಲಿ ನಮಗೆ ಬಾಡಿಗೆ ಮನೆಯನ್ನು ಯಾರೂ ಕೊಡುತ್ತಿಲ್ಲ. ಬಾಡಿಗೆ ಕೊಡುವವರು ಕೂಡ ಉಳಿದ ಗ್ರಾಹಕರಿಗಿಂತ ಮೂರು ಪಟ್ಟು ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಾರೆ" ಎಂದು ಅವರು ಆರೋಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ವಹಿಸಿದರು. ಕರ್ನಾಟಕ ಟ್ರಾನ್ಸ್‌ಜೆಂಡರ್ ವೇದಿಕೆಯ ಜರ್ಮಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ ಉಪ ನಿರ್ದೇಶಕ ಟಿ.ಪಾಪ ಬೋವಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಪ್ರೀತಿಸುವಂತೆ ಯುವತಿಗೆ ಕಿರುಕುಳ; ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲು