ETV Bharat / state

ಸುಳ್ಯ ಪೇಟೆಯಲ್ಲಿ ಏಕಾಏಕಿ ಭೂಕುಸಿತ : ಧರೆಗುರುಳಿದ ಟ್ರಾನ್ಸ್​ಫಾರ್ಮರ್​​

author img

By ETV Bharat Karnataka Team

Published : Nov 4, 2023, 7:17 AM IST

Updated : Nov 4, 2023, 7:36 AM IST

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೇಟೆಯಲ್ಲಿ ಭಾರಿ ಮಳೆಗೆ ಭೂಕುಸಿತ ಉಂಟಾಗಿ ಟ್ರಾನ್ಸ್​ಫಾರ್ಮರ್​ ಧರೆಗುರುಳಿರುವ ಘಟನೆ ನಡೆದಿದೆ.

transformer-damaged-due-to-land-slide-in-sulya-city
ಸುಳ್ಯಪೇಟೆಯಲ್ಲಿ ಏಕಾಏಕಿ ಭೂಕುಸಿತ : ಧರೆಗುರುಳಿದ ಟ್ರಾನ್ಸ್​ಫಾರ್ಮರ್​​
ಸುಳ್ಯ ಪೇಟೆಯಲ್ಲಿ ಏಕಾಏಕಿ ಭೂಕುಸಿತ : ಧರೆಗುರುಳಿದ ಟ್ರಾನ್ಸ್​ಫಾರ್ಮರ್​​

ಸುಳ್ಯ (ದಕ್ಷಿಣಕನ್ನಡ) : ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಭೂ ಕುಸಿತ ಉಂಟಾಗಿದೆ. ಏಕಾಏಕಿ ಭೂ ಕುಸಿತ ಉಂಟಾಗಿ ಟ್ರಾನ್ಸ್​​ಫಾರ್ಮರ್ ಧರಾಶಾಹಿಯಾಗಿರುವ ಘಟನೆ ಸುಳ್ಯ ಪೇಟೆಯಲ್ಲಿ ನಡೆದಿದೆ.

ನಗರದ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಬಳಿ ಭೂಕುಸಿತ ಉಂಟಾಗಿದ್ದು, ಇದರಿಂದಾಗಿ ವಿದ್ಯುತ್​ ಟ್ರಾನ್ಸ್​ಫಾರ್ಮರ್​ ಧರಾಶಾಹಿಯಾಗಿದೆ. ಈ ವೇಳೆ ವಿದ್ಯುತ್​ ಕಡಿತಗೊಂಡಿದ್ದರಿಂದ ಸಂಭಾವ್ಯ ದುರಂತವೊಂದು ತಪ್ಪಿದಂತಾಗಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ವಿದ್ಯುತ್​ ಕಂಬ ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ. ಭೂ ಕುಸಿತ ಉಂಟಾಗಿರುವ ಸ್ಥಳಕ್ಕೆ ಯಾರೂ ಹೋಗದಂತೆ ತಡೆಯಲಾಗಿದೆ. ವಿದ್ಯುತ್​ ಕಂಬ ಧರಾಶಾಹಿಯಾಗುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್​ ಆಗಿದೆ.

ಇದನ್ನೂ ಓದಿ : ನೇಪಾಳ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪ; 69 ಜನ ಸಾವು

Last Updated : Nov 4, 2023, 7:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.