ಮಂಗಳೂರು: ಗುಡ್ಡ ಕುಸಿತವಾದ ಪರಿಣಾಮ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಭಾಗದ ನೈರುತ್ಯ ರೈಲ್ವೆ ಸಂಚಾರ ತಿಂಗಳುಗಳ ಕಾಲ ಸ್ಥಗಿತಗೊಂಡಿತ್ತು. ದುರಸ್ತಿ ಬಳಿಕ ಇಂದಿನಿಂದ ರೈಲು ಸಂಚಾರ ಮತ್ತೆ ಆರಂಭವಾಗಿದೆ.
ಆಗಸ್ಟ್ ತಿಂಗಳ ಆರಂಭದಲ್ಲಿ ದಾಖಲೆಯ ಮಳೆಯಾದ ಕಾರಣ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರಸ್ತೆಯ 55 ಕಿ.ಮೀ. ವಿಸ್ತಾರದಲ್ಲಿ ಹಲವಾರು ಸ್ಥಳಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ರೈಲ್ವೆ ಹಳಿಯ ಅಡಿ ಭಾಗದಲ್ಲಿ ಉಂಟಾದ ಮಣ್ಣಿನ ಸವೆತದಿಂದಾಗಿ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು.
ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ ಟ್ರ್ಯಾಕ್ ಪುನರ್ ನಿರ್ಮಾಣ ಮಾಡಲು ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಠಿಣ ಪರಿಶ್ರಮದಿಂದ ದುರಸ್ತಿ ಕಾರ್ಯ ಮುಗಿಸಿ ಮತ್ತೆ ಸಂಚಾರ ಸುಗಮಗೊಳಿಸಿದ್ದಾರೆ.