ಮಂಗಳೂರು: ನಗರದಿಂದ ತಲಪಾಡಿಗೆ ಸಂಚರಿಸುವ ಖಾಸಗಿ ಬಸ್ ಕಂಡಕ್ಟರೊಬ್ಬರು ರೈಲು ಡಿಕ್ಕಿ ಹೊಡೆದು ಸಾವಿಗೀಡಾಗಿದ್ದಾರೆ.
ಕಾಪಿಕಾಡು ನಿವಾಸಿ ರತನ್ ಕುಮಾರ್ (40) ಮೃತಪಟ್ಟವರು.
ಇವರು ಇಂದು ಮನೆಯಿಂದ ಕರ್ತವ್ಯ ನಿರ್ವಹಿಸಲು ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.