ಕಡಬ (ದಕ್ಷಿಣ ಕನ್ನಡ): ಲಾಕ್ಡೌನ್ ಆದೇಶ ಉಲ್ಲಂಘಿಸಿ ವಿನಾಕಾರಣ ತಿರುಗಾಡುತ್ತಿದ್ದ ಸವಾರರ ವಾಹನಗಳನ್ನು ಕಡಬ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಾಕ್ಡೌನ್ ವೇಳೆಯಲ್ಲಿ ವಾಹನಗಳು ರಸ್ತೆಗಿಳಿಯಬಾರದು. ಅನಗತ್ಯವಾಗಿ ತಿರುಗಾಡಬಾರದು ಎಂದು ಸೂಚಿಸಲಾಗಿದೆ. ಆದ್ರೂ ಕೂಡಾ ನಿರ್ಲಕ್ಷ ತೋರಿದ ಜನರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.