ETV Bharat / state

ಪುತ್ತೂರಿನಲ್ಲಿ ಬಿಗಿ ಬಂದೋಬಸ್ತ್​: ಪೊಲೀಸರಿಂದ ಪಥಸಂಚಲನ - Awarness March By Police

ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ- ಪುತ್ತೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರಿಂದ ಪಥಸಂಚಲನ- ಎಸ್​ಪಿ ಸೂಚನೆ ಮೇರೆಗೆ ಪಥಸಂಚಲನ

Tight security
ಪುತ್ತೂರಿನಲ್ಲಿ ಪೊಲೀಸರಿಂದ ಪಥಸಂಚಲನ
author img

By

Published : Jul 28, 2022, 1:57 PM IST

ಪುತ್ತೂರು(ದಕ್ಷಿಣ ಕನ್ನಡ): ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಯಾವುದೇ ಗಲಭೆ ಉಂಟಾಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದಾರೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್​ಪಿ ಋಷಿಕೇಶ್ ಸೋನಾವಣೆ ಅವರ ಸೂಚನೆಯಂತೆ ಪುತ್ತೂರು ಡಿವೈಎಸ್​ಪಿ ಡಾ.ಗಾನ ಪಿ ಕುಮಾರ್ ಮತ್ತು ಇನ್ಸ್​ಪೆಕ್ಟರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಪುತ್ತೂರು ಪೇಟೆಯಲ್ಲಿ ರಾಜ್ಯ ಮೀಸಲು ಪಡೆಯ ಸಶಸ್ತ್ರ ಪೊಲೀಸರು ಪಥ ಸಂಚಲನ ನಡೆಸಿದರು.

ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಸದಾ ಜಾಗೃತರಾಗಿರುವ ಪೊಲೀಸ್ ಪಡೆ, ಬೆಳಗ್ಗೆ ದರ್ಬೆ ವೃತ್ತದಿಂದ ಹೊರಟು ಬೊಳುವಾರಿನ ತನಕ ಪಥ ಸಂಚಲನ ನಡೆಸಿತು. ಪುತ್ತೂರು ನಗರ ಪೊಲೀಸ್ ಠಾಣೆ ಎಸ್.ಐ ರಾಜೇಶ್ ಕೆ.ವಿ, ಕಾರವಾರ ಪೊಲೀಸ್ ಠಾಣೆ ಎಸ್.ಐ ವಿಜಯೇಂದ್ರ ಮತ್ತು ಎ.ಎಸ್.ಐ ಗಳು, ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಪ್ರವೀಣ್ ಪತ್ನಿಗೆ ಶಕುಂತಲಾ ಶೆಟ್ಟಿ ಸಾಂತ್ವನ: ಮಧ್ಯಾಹ್ನ ವಿಜಯೇಂದ್ರ ಭೇಟಿ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.