ETV Bharat / state

ಪಿಲಿಕುಲ ಮೃಗಾಲಯದಲ್ಲಿ ಹೆಚ್ಚಿದ ಪ್ರಾಣಿಗಳ ಸಂತಾನ: 3 ಮರಿಗೆ ಜನ್ಮ ನೀಡಿದ 'ರಾಣಿ' - ಪಿಲಿಕುಲ ಮೃಗಾಲಯ

ಮಂಗಳೂರಿನ ಪಿಲಿಕುಲ ಜೈವಿಕ ಉದ್ಯಾನದ ಮೃಗಾಲಯದಲ್ಲಿ ವನ್ಯಜೀವಿಗಳ ಸಂತಾನ ಅಭಿವೃದ್ಧಿಯಾಗಿದ್ದು, ಹುಲಿ ‘ರಾಣಿ’ 3 ಮರಿಗಳಿಗೆ ಜನ್ಮ ನೀಡಿದರೆ, ಕಾಡುಶ್ವಾನ ‘ದೋಳ್’ಗೆ 7 ಮರಿಗಳು ಜನನ ತಾಳಿವೆ.

mangalore animals flourish in covid times
ಪಿಲಿಕುಲ ಮೃಗಾಲಯದಲ್ಲಿ ಹೆಚ್ಚಿದ ಪ್ರಾಣಿಗಳ ಸಂತಾನ
author img

By

Published : Jun 6, 2021, 7:29 AM IST

ಮಂಗಳೂರು: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಪಿಲಿಕುಲ ಮೃಗಾಲಯಕ್ಕೆ ಹೊಸ ಅತಿಥಿಗಳು ಬಂದಿದ್ದಾರೆ. ಮೃಗಾಲಯದಲ್ಲಿರುವ ಹುಲಿ, ಕಾಡುಶ್ವಾನ ಮರಿಗಳನ್ನಿಟ್ಟರೆ ರಿಯಾ, ಹೆಬ್ಬಾವು, ಕಾಳಿಂಗ ಸರ್ಪ ಮೊಟ್ಟೆಗಳನ್ನಿಟ್ಟಿವೆ.

ಪಿಲಿಕುಲದಲ್ಲಿರುವ 10 ವರ್ಷದ ಹುಲಿ ರಾಣಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಆರೋಗ್ಯವಾಗಿರುವ ಈ ಮೂರು ಮರಿಗಳು ಇನ್ನೂ 16 ದಿನಗಳಲ್ಲಿ ಕಣ್ಣು ತೆರೆಯುತ್ತವೆ. 2019 ರಲ್ಲಿ ರಾಣಿ ಹುಲಿ 5 ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಿಗೆ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂದು ಹೆಸರಿಡಲಾಗಿತ್ತು. ಈ ಮರಿಗಳಿಗೆ ಪ್ರತ್ಯೇಕ ವಾಸದ ಮನೆಯನ್ನು 15 ಲಕ್ಷ ರೂ ವೆಚ್ಚದಲ್ಲಿ ಅಬುದಾಬಿಯ ರಾಮದಾಸ್ ದಂಪತಿಗಳು ನೀಡಿದ್ದರು. ಇದೀಗ ಪಿಲಿಕುಲದಲ್ಲಿ ಹುಲಿಗಳ ಸಂಖ್ಯೆ 13 ಕ್ಕೇ ಏರಿಕೆಯಾಗಿದೆ.

7 ಮರಿಗಳಿಗೆ ಜನ್ಮ ನೀಡಿದ ಕಾಡುಶ್ವಾನ:

ಪಿಲಿಕುಲದಲ್ಲಿರುವ ಕಾಡುಶ್ವಾನ ಧೋಳ್ ಕೂಡ ಇತ್ತೀಚೆಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಈ ಹಿಂದೆ ಇದೇ ಕಾಡುಶ್ವಾನ 5 ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಲದಲ್ಲಿ ಕಾಡುಶ್ವಾನಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

pilikula zoo
ರಿಯಾ ಪಕ್ಷಿಯ ಜನನ

ರಿಯಾ ಪಕ್ಷಿಯ ಜನನ:

ಉಷ್ಟ್ರಪಕ್ಷಿ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನ್ನಿಟ್ಟಿದ್ದು ಅವುಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದೆ. ಇದರಲ್ಲಿ ಒಂದು ಮರಿ ಜನ್ಮತಾಳಿದೆ.

pilikula zoo
20 ಮೊಟ್ಟೆಗಳನ್ನಿಟ್ಟ ರೆಟಿಕ್ಯುಲೇಟೆಡ್ ಹೆಬ್ಬಾವು

20 ಮೊಟ್ಟೆಗಳನ್ನಿಟ್ಟ ರೆಟಿಕ್ಯುಲೇಟೆಡ್ ಹೆಬ್ಬಾವು:

ಅಳಿವಿನಂಚಿನಲ್ಲಿರುವ ಅಪರೂಪದ ರೆಟಿಕ್ಯುಲೇಟೆಡ್ ಹೆಬ್ಬಾವು 20 ಮೊಟ್ಟೆಗಳನ್ನಿಟ್ಟು ಕಾವು ಕೊಡುತ್ತಿದೆ. ಕಳೆದ ಸಾಲಿನಲ್ಲಿ ಈ ಹೆಬ್ಬಾವು 17 ಮರಿಗಳಿಗೆ ಜನ್ಮ ನೀಡಿತ್ತು. ಇನ್ನೂ ಪಿಲಿಕುಲ ಮೃಗಾಲಯದಲ್ಲಿರುವ ನಾಗಮಣಿ ಕಾಳಿಂಗ ಸರ್ಪ ಆರು ಮೊಟ್ಟೆಗಳನ್ನಿಟ್ಟಿದೆ. ಅವುಗಳಿಗೆ ಕೃತಕ ಕಾವು ನೀಡಲಾಗುತ್ತಿದೆ. ಪಿಲಿಕುಲದಲ್ಲಿ 19 ಕಾಳಿಂಗ ಸರ್ಪಗಳಿವೆ.

"ಲಾಕ್‌ಡೌನ್ ಮುಕ್ತಾಯದ ನಂತರ ಚೆನ್ನೈನ ವಂಡಲೂರ್ ಮೃಗಾಲಯದಿಂದ ಬಿಳಿ ಹುಲಿಯನ್ನು ತರಿಸಲಾಗುವುದು. ಪ್ರಾಣಿ ವಿನಿಮಯದಲ್ಲಿ ಒಡಿಶಾದ ನಂದನಕಾನನ್, ಸೂರತ್ ಮತ್ತು ಹೈದರಾಬಾದ್ ಮೃಗಾಲಯದಿಂದ ಕೆಲವು ಪ್ರಾಣಿ ಪಕ್ಷಿಗಳನ್ನು ಪಿಲಿಕುಲ ಮೃಗಾಲಯಕ್ಕೆ ತರಲು ನಿರ್ಧರಿಸಲಾಗಿದೆ."

- ಪಿಲಿಕುಲ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜೆ ಭಂಡಾರಿ

For All Latest Updates

TAGGED:

pilikula zoo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.