ETV Bharat / state

ಮಂಗಳೂರು ಕಿಸ್ಸಿಂಗ್ ಪ್ರಕರಣ: ಮತ್ತೆ ಮೂವರು ವಿದ್ಯಾರ್ಥಿಗಳು ಪೊಲೀಸ್​ ವಶಕ್ಕೆ

ಮಂಗಳೂರಿನಲ್ಲಿ ನಡೆದ ಕಾಲೇಜೊಂದರ ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ಪ್ರಕರಣ ಸಂಬಂಧ ಇನ್ನೂ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

three-more-students-detained-in-kissing-video-viral-case
ಮಂಗಳೂರು ಕಿಸ್ಸಿಂಗ್ ಪ್ರಕರಣ: ಮತ್ತೆ ಮೂವru ವಿದ್ಯಾರ್ಥಿಗಳು ಪೊಲೀಸ್​ ವಶಕ್ಕೆ
author img

By

Published : Jul 24, 2022, 12:38 PM IST

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಚುಂಬನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ವಶಕ್ಕೆ ಪಡೆಯದ ವಿದ್ಯಾರ್ಥಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ನಗರದ ಬಾವುಟಗುಡ್ಡೆ ಸಮೀಪದ ಅಪಾರ್ಟ್‌ಮೆಂಟ್​​ನಲ್ಲಿ ವಾಸವಿದ್ದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರನ್ನು ರೂಮಿಗೆ ಕರೆಸಿಕೊಂಡು ಟ್ರುತ್ ಆ್ಯಂಡ್ ಡೇರ್ ಗೇಮ್ ಮೂಲಕ ಅವರಿಗೆ ಕಿಸ್ಸಿಂಗ್ ಮಾಡಿ ಅನುಚಿತವಾಗಿ ವರ್ತಿಸಿ ಅದರ ವಿಡಿಯೋ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ 3 ಪ್ರತ್ಯೇಕ ಪೋಕ್ಸೊ ಪ್ರಕರಣ ದಾಖಲಾಗಿವೆ. ತನಿಖೆ ನಡೆಸುತ್ತಿರುವ ಪೊಲೀಸರು ಈ ಮೊದಲು ಐವರು ವಿದ್ಯಾರ್ಥಿಗಳನ್ನು ಬಂಧಿಸಿ ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇದೀಗ ಮತ್ತೆ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 3 ಪೋಕ್ಸೊ ಪ್ರಕರಣಗಳಲ್ಲಿ ಈವರೆಗೆ 8 ಮಂದಿಯನ್ನು ವಶಕ್ಕೆ ಪಡೆದಂತಾಗಿದೆ.

ಪ್ರಕರಣವು ಮಹಿಳಾ ಠಾಣೆಯಿಂದ ನಗರ ಅಪರಾಧ ಪತ್ತೆದಳ(ಸಿಸಿಬಿ)ಕ್ಕೆ ವರ್ಗಾವಣೆಯಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣ: ಅಗತ್ಯ ಬಿದ್ದಾಗ ತನಿಖೆಗೆ ಹಾಜರಾಗಿ ಎಂದು ಸೂಚಿಸಿದ ಬಾಲ ನ್ಯಾಯಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.