ETV Bharat / state

ಕಂಬಳ ಕ್ರೀಡೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಅಶೋಕ್ ಕುಮಾರ್ ರೈ

ತುಳುನಾಡಿನ ವಿಶಿಷ್ಟ ಕೂಟವಾಗಿರುವ ಕಂಬಳವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಬಿಡುವುದಿಲ್ಲ. ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿ ಕಂಬಳ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.

ಅಶೋಕ್ ಕುಮಾರ್ ರೈ
author img

By

Published : Oct 30, 2019, 2:04 AM IST

ಮಂಗಳೂರು (ಪುತ್ತೂರು) : ತುಳುನಾಡಿನ ವಿಶಿಷ್ಟ ಕೂಟವಾಗಿರುವ ಕಂಬಳವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಬಿಡುವುದಿಲ್ಲ. ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿ ಕಂಬಳ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ಪೂರಕವಾದ ಕಾನೂನು ಹೋರಾಟ ನಡೆಸಲಾಗುವುದು. ಕಂಬಳ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.

ಅಶೋಕ್ ಕುಮಾರ್ ರೈ ಹೇಳಿಕೆ

ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕರಿಗೆ ಸೀರೆ, ಪಂಚೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಕಂಬಳಕ್ಕೆ ಸಮಸ್ಯೆ ಉಂಟಾಗಿದೆ. ಒಂದು ಬಾರಿ ಕಂಬಳ ನಿಲ್ಲಿಸುವ ಕೆಲಸವೂ ಅವರಿಂದ ನಡೆದಿದೆ. ಇದೀಗ ಅವರು ಸುಪ್ರೀಂ ಕೋರ್ಟ್​ಗೆ ಮತ್ತೆ ದೂರು ನೀಡಿ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಜನತೆಯ ಕಂಬಳ ಕ್ರೀಡೆಯನ್ನು ನಿಲ್ಲಿಸುವ ಪ್ರಯತ್ನ ಆರಂಭಿಸಿದ್ದಾರೆ. 1,360 ಪುಟಗಳ ದೂರನ್ನು ,ಕಂಬಳ ಮತ್ತು ಜಲ್ಲಿಕಟ್ಟು ಕ್ರೀಡೆಗಳ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ವಕೀಲ ಸಂಜಯ ನೂಲಿ ಮೂಲಕ ಕಂಬಳದಲ್ಲಿ ಯಾವುದೇ ಹಿಂಸೆ ಇಲ್ಲ ಎಂದು ಸಾಬೀತು ಮಾಡಿ ಕಂಬಳ ನಡೆಸುತ್ತೇವೆ ಎಂದು ಹೇಳಿದರು.

ಪತ್ರಕರ್ತರಿಂದ ಉಳಿದ ಕಂಬಳ :

ಒಂದು ವರ್ಷ ಕಂಬಳ ನಿಂತರೂ ಮತ್ತೆ ಅದಕ್ಕೆ ಚೈತನ್ಯ ನೀಡುವಲ್ಲಿ ಪತ್ರಿಕೆಗಳ ಹಾಗೂ ಮಾಧ್ಯಮಗಳ ಸಹಕಾರವೇ ಕಾರಣವಾಗಿದೆ. ಇಂದು ಕಂಬಳ ನಡೆಯುತ್ತಿದೆ ಎಂದರೆ ಅದಕ್ಕೆ ಪತ್ರಕರ್ತರೇ ಕಾರಣ. ಅಷ್ಟೊಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಕಂಬಳ ಬಗ್ಗೆ ಹೋರಾಟ ನಡೆಸಲು ನಮಗೂ ದೊಡ್ಡ ಸ್ವೂರ್ತಿ ನೀಡಿದೆ. ದೇಶದ ಆರ್ಥಿಕ ಪರಿಸ್ಥಿತಿ ಕುಸಿತದಿಂದ ಕಂಬಳ ಕೂಟಕ್ಕೆ ಯಾವುದೇ ಸಮಸ್ಯೆ ಆಗಲಾರದು. ಆದರೆ ಅದ್ದೂರಿಯಾಗಿ ನಡೆಸಲು ಕಷ್ಟವಾಗಬಹುದು ಎಂದರು.

Intro:Body:ಸುಪ್ರೀಂ ಕೋರ್ಟಿನಲ್ಲಿ ಕಾನೂನು ಹೋರಾಟ
ಕಂಬಳ ಕ್ರೀಡೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ-ಅಶೋಕ್ ಕುಮಾರ್ ರೈ

ಪುತ್ತೂರು; ತುಳುನಾಡಿನ ವಿಶಿಷ್ಟ ಕೂಟವಾಗಿರುವ ಕಂಬಳವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲು ಬಿಡುವುದಿಲ್ಲ. ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿ ಕಂಬಳ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ಪೂರಕವಾದ ಕಾನೂನು ಹೋರಾಟ ನಡೆಸಲಾಗುವುದು. ಕಂಬಳ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.
ಮಂಗಳವಾರ ತನ್ನ ಮನೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕರಿಗೆ ಸೀರೆ ಪಂಚೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಪೇಟಾ ದಿಂದ ಕಳೆದ 10 ವರ್ಷಗಳಿಂದ ಕಂಬಳಕ್ಕೆ ಸಮಸ್ಯೆ ಉಂಟಾಗಿದೆ. ಒಂದು ಬಾರಿ ಕಂಬಳ ನಿಲ್ಲಿಸುವ ಕೆಲಸವೂ ಅವರಿಂದ ನಡೆದಿದೆ. ಇದೀಗ ಅವರು ಸುಪ್ರೀಂ ಕೋರ್ಟಿಗೆ ಮತ್ತೆ ತನ್ನ ದೂರು ನೀಡಿ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಜನತೆಯ ಕಂಬಳ ಕ್ರೀಡೆಯನ್ನು ನಿಲ್ಲಿಸುವ ಪ್ರಯತ್ನ ಆರಂಭಿಸಿದ್ದಾರೆ. 1360 ಪುಟಗಳ ದೂರನ್ನು ಕಂಬಳ ಮತ್ತು ಜಲ್ಲಿಕಟ್ಟು ಕ್ರೀಡೆಗಳ ಮಾಹಿತಿಯನ್ನು ನಾವು ಪಡೆದುಕೊಂಡಿದ್ದೇವೆ. ವಕೀಲ ಸಂಜಯ ನೂಲಿ ಮೂಲಕ ಕಂಬಳದಲ್ಲಿ ಯಾವುದೇ ಹಿಂಸೆ ಇಲ್ಲ ಎಂದು ಸಾಬೀತು ಮಾಡಿ ಕಂಬಳ ನಡೆಸುತ್ತೇವೆ ಎಂದು ಅವರು ಹೇಳಿದರು.
ಪೇಟಾದವರಿಂದ ಅಮೇರಿಕಾದಂತಹ ದೇಶಗಳಿಗೆ ಕಂಬಳದಂತಹ ಕ್ರೀಡೆಯನ್ನು ನಿಲ್ಲಿಸಿದ್ದೇವೆ ಎಂದು ತೋರಿಸಿ ದುಡ್ಡು ಮಾಡುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಇಂತಹ ದೊಡ್ಡ ಮಟ್ಟದ ಕೂಟವನ್ನು ನಿಲ್ಲಿಸುವ ಪ್ರಯತ್ನ ಅವರು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪತ್ರಕರ್ತರಿಂದ ಉಳಿದ ಕಂಬಳ
ಒಂದು ವರ್ಷ ಕಂಬಳ ನಿಂತರೂ ಮತ್ತೆ ಅದಕ್ಕೆ ಚೈತನ್ಯ ನೀಡುವಲ್ಲಿ ಪತ್ರಿಕೆಗಳ ಹಾಗೂ ಮಾಧ್ಯಮಗಳ ಸಹಕಾರವೇ ಕಾರಣವಾಗಿದೆ. ಇಂದು ಕಂಬಳ ನಡೆಯುತ್ತಿದೆ ಎಂದರೆ ಅದಕ್ಕೆ ಪತ್ರಕರ್ತರೇ ಕಾರಣ. ಅಷ್ಟೊಂದು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಇದು ಕಂಬಳ ಬಗ್ಗೆ ಹೋರಾಟ ನಡೆಸಲು ನಮಗೂ ದೊಡ್ಡ ಸ್ವೂರ್ತಿ ನೀಡಿದೆ ಎಂದು ಅವರು ಹೇಳಿದರು.
ದೇಶದ ಆರ್ಥಿಕ ಪರಿಸ್ಥಿತಿ ಕುಸಿತದಿಂದ ಕಂಬಳ ಕೂಟಕ್ಕೆ ಯಾವುದೇ ಸಮಸ್ಯೆ ಆಗಲಾರದು. ಆದರೆ ಅದ್ದೂರಿಯಾಗಿ ನಡೆಸಲು ಕಷ್ಟವಾಗಬಹುದು ಎಂದು ಅವರು ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.