ETV Bharat / state

ಮಹಿಳೆ ಗಂಭೀರ ಗಾಯ ಪ್ರಕರಣ : ರಿಕ್ಷಾ ಚಾಲಕ ಪೊಲೀಸ್ ವಶಕ್ಕೆ - ಮಹಿಳೆ ಗಂಭೀರ ಗಾಯ ಪ್ರಕರಣ

ಮಹಿಳೆಯೊಬ್ಬರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ನಿಗೂಢವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಿಕ್ಷಾ ಚಾಲಕ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.

The woman is a serious injury case
ಮಹಿಳೆ ಗಂಭೀರ ಗಾಯ ಪ್ರಕರಣ
author img

By

Published : Jan 13, 2021, 10:58 AM IST

ಉಳ್ಳಾಲ : ನಿಗೂಢವಾಗಿ ಉಳಿದಿದ್ದ ಮದಕ ತಾರಿಗುಡ್ಡೆ ನಿವಾಸಿ ಟೈಲರ್ ಶೋಭಾ (30) ಪ್ರಕರಣಕ್ಕೆ ಸಂಬಂಧಿಸಿ ನಾಗುರಿ ಸಂಚಾರಿ ಠಾಣಾ ಪೊಲೀಸರು ರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ.

ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಸಿಕ್ಕ ಸಿಸಿಟಿವಿ ಆಧಾರದಲ್ಲಿ ಶೋಭಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ ರಿಕ್ಷಾ ಚಾಲಕನಿಗಾಗಿ ಮುಡಿಪು, ತೌಡುಗೋಳಿ, ಕೊಣಾಜೆ, ದೇರಳಕಟ್ಟೆ, ಅಂಬ್ಲಮೊಗರು, ಎಲಿಯಾರುಪದವು, ಗ್ರಾಮಚಾವಡಿ ಸಹಿತ ಹಲವು ರಿಕ್ಷಾ ಪಾರ್ಕ್​ಗಳಲ್ಲಿ ಶೋಧ ನಡೆಸಿ, ರಿಕ್ಷಾ ಚಾಲಕ ಚೆಂಬುಗುಡ್ಡೆ ನಿವಾಸಿ ಸಾದಿಕ್‌ (25) ಎಂಬಾತನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು, ಸಂಚಾರಿ ಎಸಿಪಿ ಠಾಣೆಯಲ್ಲಿ‌ ವಿಚಾರಣೆ ನಡೆಸುತ್ತಿದ್ದಾರೆ.

ಓದಿ : ಉಳ್ಳಾಲ ಮಹಿಳೆ ಗಂಭೀರ, ಆಸ್ಪತ್ರೆಗೆ ದಾಖಲು.. ಗಾಯದ ಕಾರಣ ನಿಗೂಢ!

ಕೋಮಾ ಸ್ಥಿತಿಯಲ್ಲಿರುವ ಶೋಭಾ ಅವರಿಂದ ಮಾಹಿತಿ ಪಡೆದುಕೊಳ್ಳಲು ಅಸಾಧ್ಯವಾಗಿದೆ. ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಪ್ರಕರಣ ಅಪಘಾತವೇ ಅಥವಾ ದುಷ್ಕರ್ಮಿಗಳ ಕೃತ್ಯವೇ ಅನ್ನುವ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಲೇ ಹೊರಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.