ETV Bharat / state

ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಸೋಂಕಿತ​ ಬಾಣಂತಿ... ಪತ್ತೆ ಹಚ್ಚಿ ಹಾಸ್ಪಿಟಲ್​ಗೆ ಕರೆತಂದ ಪೊಲೀಸರು - ಬೆಳ್ತಂಗಡಿ ಬಾಣಂತಿ-ಮಗುವನ್ನು ಪತ್ತೆ ಹಚ್ಚಿದ ಪೊಲೀಸರುಸುದ್ದಿ

ಜುಲೈ 12 ರಂದು ನಾವೂರಿನ ಮಹಿಳೆಯೋರ್ವಳು ಹೆರಿಗೆಗಾಗಿ ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಿಯಮದಂತೆ ವೈದ್ಯರು ಗರ್ಭಿಣಿಯ ಗಂಟಲು ದ್ರವವನ್ನು ಕೋವಿಡ್​ ಪರೀಕ್ಷೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಕೊರೊನಾ ಬಂದ ಬಳಿಕ ಆಕೆ ನಾಪತ್ತೆಯಾಗಿದ್ದಳು. ಪೊಲೀಸರು ಬಾಣಂತಿಯನ್ನು ಪತ್ತೆಹಚ್ಚಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಕೊರೊನಾ ಬಂದಿದಕ್ಕೆ ಆಸ್ಪತ್ರೆಯಿಂದ ಬಾಣಂತಿ ಎಸ್ಕೇಪ್

author img

By

Published : Jul 17, 2020, 12:40 PM IST

ಬೆಳ್ತಂಗಡಿ: ಜುಲೈ 15ರ ರಾತ್ರಿ ಹೆರಿಗೆಯಾದ ಮಹಿಳೆಯೋರ್ವಳು ತನಗೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂಬ ಭಯದಿಂದ ಪತಿಯೊಂದಿಗೆ ಜುಲೈ 16ರ ರಾತ್ರಿ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿತ್ತು. ರಾತ್ರಿ ಪರಾರಿಯಾದ ಬಾಣಂತಿ-ಮಗುವನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು ಮತ್ತೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ತಂದು ಬಿಟ್ಟಿದ್ದಾರೆ.

ಜುಲೈ 12 ರಂದು ನಾವೂರಿನ ಮಹಿಳೆ ಹೆರಿಗೆಗಾಗಿ ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಿಯಮದಂತೆ ವೈದ್ಯರು ಗರ್ಭಿಣಿಯ ಗಂಟಲು ದ್ರವವನ್ನು ಕೋವಿಡ್​ ಪರೀಕ್ಷೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಈ ನಡುವೆ ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಅಂದರೆ ಜುಲೈ 15 ರಂದು ಆಕೆಗೆ ಹೆರಿಗೆಯೂ ಆಯಿತು. ಜುಲೈ 16ರ ಸಂಜೆ ಆಕೆಯ ಪರೀಕ್ಷೆಯ ವರದಿ ಪಾಸಿಟಿವ್ ಬಂದಿತ್ತು. ಬಾಣಂತಿಗೆ ಹಾಗೂ ಆಕೆಯ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಿದ ಸರ್ಕಾರಿ ಆಸ್ಪತ್ರೆಯ ವೈದ್ಯರು, ಬಾಣಂತಿ ಹಾಗೂ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೊಷನ್ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು.

ಈ ನಡುವೆ ಜುಲೈ 16ರ ರಾತ್ರಿ ತನ್ನ ಮಾರುತಿ ಓಮ್ನಿ ಕಾರಲ್ಲಿ ಆಸ್ಪತ್ರೆಗೆ ಬಂದ ಆಕೆಯ ಪತಿ, ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಹಾಗೂ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸದೇ ಬಾಣಂತಿ ಪತ್ನಿ ಹಾಗೂ ಹಸುಗೂಸನ್ನು ಕರೆದುಕೊಂಡು ಹೋಗಿದ್ದ. ವೈದ್ಯರು ತಕ್ಷಣ ಘಟನೆಯ ವಿವರವನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರ ತಂಡ ಪರಾರಿಯಾದ ಬಾಣಂತಿ-ಮಗುವನ್ನು ಪತ್ತೆಹಚ್ಚಿ ಮತ್ತೆ ಆಸ್ಪತ್ರೆಗೆ ಕರೆತಂದು ಬಿಟ್ಟಿದ್ದಾರೆ. ಇಂದು ಬಾಣಂತಿ-ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೊಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ನಡುವೆ ಜುಲೈ 15ರಂದು ಹೆರಿಗೆಯಾದ ಮಡಂತ್ಯಾರು ಕಡೆಯ ಮತ್ತೋರ್ವ ಮಹಿಳೆಗೂ ಕೊರೊನಾ ಪಾಸಿಟಿವ್ ಬಂದಿದ್ದು, ಆಕೆಯೂ ಗೊಂದಲಕ್ಕೊಳಗಾಗಿ ಆಸ್ಪತ್ರೆಯಿಂದ ಪರಾರಿಯಾಗಲು ಮುಂದಾಗಿದ್ದಳು. ವೈದ್ಯರು ಎಚ್ಚೆತ್ತುಕೊಂಡಾಗ ಆಕೆ ತನ್ನ ದುಸ್ಸಾಹಸದಿಂದ ಹಿಂದೆ ಸರಿದಳು ಎನ್ನಲಾಗ್ತಿದೆ.

ಇದೀಗ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾದ ಮೂವರು ಗರ್ಭಿಣಿಯರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಆಸ್ಪತ್ರೆಯ ಹೆರಿಗೆ ವಾರ್ಡನ್ನು ಸೀಲ್‌ಡೌನ್ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಯೊಂದಿಗೆ ಅವರನ್ನು ಕಾವಲು ಕಾಯುವ ದುಸ್ಥಿತಿ ವೈದ್ಯರು ಹಾಗೂ ಸಿಬ್ಬಂದಿಗೆ ಬಂದೊದಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.